ಚಿಕ್ಕೋಡಿ: ಕೊರೊನಾ ವೈರಸ್ನಿಂದ ದೇಶವೇ ಲಾಕ್ಡೌನ್ ಆಗಿದ್ದು, ಈ ಹಿನ್ನೆಲೆಯಲ್ಲಿ ಬಸವ ಜಯಂತಿಯನ್ನು ಮನೆಯಲ್ಲೇ ಆಚರಿಸಿ ಎಂದು ನಿಡಸೋಸಿ ಮಠದ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಭಕ್ತರಲ್ಲಿ ಮನವಿ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನಿಡಸೋಸಿ ಮಠದಲ್ಲಿ ಮಾತನಾಡಿದ ಅವರು, ಕೊರೊನಾ ವಿರುದ್ಧ ಹೋರಾಡಲು ಲಾಕ್ಡೌನ್ ಹೇರಲಾಗಿದೆ. ಹೀಗಾಗಿ ಯಾರೂ ಮನೆಯಿಂದ ಹೊರ ಬರಬಾರದು. ವೀರಶೈವ ಲಿಂಗಾಯತರು ಮನೆಯಲ್ಲೇ ಇದ್ದು, ಬಸವಜಯಂತಿ ಆಚರಿಸಬೇಕು ಎಂದರು.
ಬೆಳಗಾವಿ ಈಗಾಗಲೇ ರೆಡ್ ಜೋನ್ನಲ್ಲಿದೆ. ಸರ್ಕಾರದ ಆದೇಶದ ಪ್ರಕಾರ ಯಾವುದೇ ದೇವಸ್ಥಾನಗಳಲ್ಲಿ, ಮಠಗಳಲ್ಲಿ ಬಸವ ಜಯಂತಿ ಹಾಗೂ ಸಭೆ ಸೇರಿದಂತೆ ಮಠದ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ ಎಂದರು.