ETV Bharat / city

ದೊಡ್ಡ ಮೆಣಸಿನಕಾಯಿಗೆ 'ಚಿಕ್ಕ ಬೆಲೆ'... ಡಿಸಿಎಂ ಸ್ವಕ್ಷೇತ್ರದಲ್ಲಿ ಕ್ಯಾಪ್ಸಿಕಂ ಬೆಳೆ ನಾಶಗೊಳಿಸಿದ ರೈತ

author img

By

Published : Jun 15, 2020, 4:18 PM IST

ಡಿಸಿಎಂ ಲಕ್ಷ್ಮಣ್ ಸವದಿ ಸ್ವಕ್ಷೇತ್ರದ ಝುಂಜರವಾಡ ಗ್ರಾಮದ ರೈತರೊಬ್ಬರು ಮೂರು ಎಕರೆಯಲ್ಲಿ ಬೆಳೆದ ಕ್ಯಾಪ್ಸಿಕಂ ಬೆಳೆಯನ್ನು ಟ್ರ್ಯಾಕ್ಟರ್​ ಮೂಲಕ ನಾಶಪಡಿಸಿದರು.

capcicum corp destroy
ಕ್ಯಾಪ್ಸಿಕಂ ಬೆಳೆಯನ್ನು ನಾಶಗೊಳಿಸಿದ ರೈತ

ಅಥಣಿ: ಬೆಂಬಲ ಬೆಲೆ ಸಿಗದ ಕಾರಣ, ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಸ್ವಕ್ಷೇತ್ರದ ಝುಂಜರವಾಡ ಗ್ರಾಮದ ರೈತ ಸ್ವಪ್ನಿಲ್ ಪಾಟೀಲ್​​​ ಎಂಬಾತ ಮೂರು ಎಕರೆಯಲ್ಲಿ ಬೆಳೆದ ಕ್ಯಾಪ್ಸಿಕಂ (ದೊಡ್ಡ ಮೆಣಸಿನಕಾಯಿ) ಬೆಳೆಯನ್ನು ಟ್ರ್ಯಾಕ್ಟರ್​​ ಮೂಲಕ ನಾಶಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಸ್ವಪ್ನಿಲ್ ಪಾಟೀಲ್, ಲಾಕ್​​​ಡೌನ್ ಸಡಲಿಕೆಯಾದರೂ ಕ್ಯಾಪ್ಸಿಕಂಗೆ ಬೇಡಿಕೆ ಇಲ್ಲ. ಹೀಗಾಗಿ, ಮುಂದಿನ ಬೆಳೆ ಬೆಳೆಯಲು ಇದನ್ನು ನಾಶ ಮಾಡುತ್ತಿದ್ದೇನೆ. ತರಕಾರಿ ಬೆಳೆದ ರೈತರಿಗೆ ಒಂದು ಹೆಕ್ಟೇರ್ ₹ 15 ಸಾವಿರ ಪರಿಹಾರ ಸರ್ಕಾರ ಘೋಷಿಸಿದೆ. ಆದರೆ, ಈವರೆಗೂ ಒಂದು ರುಪಾಯಿ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕ್ಯಾಪ್ಸಿಕಂ ಬೆಳೆಯನ್ನು ನಾಶಗೊಳಿಸಿದ ರೈತ

ಮೂರು ಎಕರೆ ಪ್ರದೇಶದಲ್ಲಿ ಬೆಳೆದ ಈ ಬೆಳೆಗೆ ₹ 5ಲಕ್ಷ ಖರ್ಚು ಮಾಡಿದ್ದೇನೆ. ಸರ್ಕಾರ ₹ 15ಸಾವಿರ ಮಾತ್ರ ಎಂದು ಘೋಷಿಸಿದೆ. ಅದು ಏನಕ್ಕೂ ಸಾಲದು ಎಂದು ಆಕ್ರೋಶದ ಜೊತೆಗೆ ಅಸಹಾಯಕತೆ ವ್ಯಕ್ತಪಡಿಸಿದರು.

ಕೊರೊನಾ ಪ್ರೇರಿತ ಲಾಕ್​ಡೌನ್​​ನಿಂದ ದೇಶದ ರೈತರಿಗೆ ಸಾಕಷ್ಟು ನಷ್ಟ ಸಂಭವಿಸಿದೆ. ಹೀಗಾಗಿ, ಸೂಕ್ತ ಬೆಲೆ ಸಿಗದಿದ್ದರಿಂದ ಎಷ್ಟೋ ರೈತರು, ಬೆಳೆದ ಬೆಳೆಯನ್ನು ಟ್ರ್ಯಾಕ್ಟರ್​ ಮೂಲಕ ನಾಶ ಮತ್ತು ಹಸುಗಳನ್ನು ಬಿಟ್ಟು ಮೇಯಿಸಿದ್ದಾರೆ.​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.