ETV Bharat / city

ಬಿಎಸ್​ವೈಗೆ ಸಿಎಂ ಸ್ಥಾನ ಹೋಗುತ್ತೆ ಅಂತಾ ಗೊತ್ತಿದ್ರೂ ನೆರೆ ಪರಿಹಾರದ ಸುಳ್ಳು ಭರವಸೆ ನೀಡಿದ್ದಾರೆ : ಸಿದ್ದರಾಮಯ್ಯ

author img

By

Published : Jul 27, 2021, 7:03 PM IST

2018ರಲ್ಲಿ ಯಡಿಯೂರಪ್ಪನವರಿಗೆ ಮ್ಯಾಂಡೇಟ್ ನೀಡಿರಲಿಲ್ಲ. 17 ಜನರನ್ನ ಖರೀದಿ ಮಾಡಿಕೊಂಡು ಅಧಿಕಾರಕ್ಕೆ ಬಂದರು. 2009 ಹಾಗೂ 2019ರಲ್ಲಿ ಪ್ರವಾಹ ಬಂದಿತ್ತು. ಆಗ ಇವರು ಶಿಫ್ಟ್ ಮಾಡಲಿಲ್ಲ. ಮನೆಗಳಿಗೆ ಪರಿಹಾರ ಕೊಡಲು ಕೇಂದ್ರವೂ ಸಹ ನೆರವು ನೀಡಲಿಲ್ಲ..

BJP people are so brilliant in telling lie
ಸಿದ್ದರಾಮಯ್ಯ

ಚಿಕ್ಕೋಡಿ : ಬಿಜೆಪಿಯವರಿಗೆ ಜನರ ಹಿತ ಹಾಗೂ ಅಭಿವೃದ್ದಿ ದೃಷ್ಟಿಕೋನ ಇಲ್ಲವೇ ಇಲ್ಲ. ಬಿಜೆಪಿಯವರು ಸುಳ್ಳು ಹೇಳೋದ್ರಲ್ಲಿ ಬಹಳ ನಿಸ್ಸೀಮರು. ಅವರಿಗೆ ರಾಜಕೀಯ ಅಂದ್ರೇ ಕೇವಲ ಕೋಮುವಾದ ಮಾಡೋದು, ಹೇಗಾದ್ರೂ ಮಾಡಿ ಅಧಿಕಾರಕ್ಕೆ ಬರೋದೇ ಅವರ ಗುರಿ ಎಂದು ವಿರೋಧ ಪಕ್ಷದ ನಾಯಕ‌ ಸಿದ್ದರಾಮಯ್ಯ ಹೇಳಿದರು.

ಬೆಳಗಾವಿ ಜಿಲ್ಲೆಯ ಸಂಕೇಶ್ವರ ಪಟ್ಟಣದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರಿಗೆ ಸಿಎಂ ಸ್ಥಾನ ಹೋಗುತ್ತೆ ಅಂತಾ ಗೊತ್ತಿತ್ತು. ಆದರೂ ಸಹ ಇಲ್ಲಿಗೆ ಬಂದು ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವ ಸುಳ್ಳು ಭರವಸೆ ನೀಡಿ ಹೋಗಿದ್ದಾರೆ. ಜುಲೈ 25ರ ನಂತರ ಒಂದು ಗಂಟೆಯೂ ಸಹ ಮುಂದುವರೆಯಬಾರದು ಅಂತಾ ಯಡಿಯೂರಪ್ಪಗೆ ಹೇಳಿದ್ದರು ಎಂದು ತಿಳಿಸಿದರು.

2018ರಲ್ಲಿ ಯಡಿಯೂರಪ್ಪನವರಿಗೆ ಮ್ಯಾಂಡೇಟ್ ನೀಡಿರಲಿಲ್ಲ. 17 ಜನರನ್ನ ಖರೀದಿ ಮಾಡಿಕೊಂಡು ಅಧಿಕಾರಕ್ಕೆ ಬಂದರು. 2009 ಹಾಗೂ 2019ರಲ್ಲಿ ಪ್ರವಾಹ ಬಂದಿತ್ತು. ಆಗ ಇವರು ಶಿಫ್ಟ್ ಮಾಡಲಿಲ್ಲ. ಮನೆಗಳಿಗೆ ಪರಿಹಾರ ಕೊಡಲು ಕೇಂದ್ರವೂ ಸಹ ನೆರವು ನೀಡಲಿಲ್ಲ.

ಕೇಂದ್ರದ ಮೇಲೆ ಒತ್ತಡ ಹಾಕಿ ಅನುದಾನ ಇವರು ತರೋದಿಲ್ಲ. ಪಿಎಂ ನರೇಂದ್ರ ಮೋದಿ ದೊಡ್ಡ ಪ್ರವಾಹ ಆದರೂ ಸಹ ಕರ್ನಾಟಕಕ್ಕೆ ಬರಲೇ ಇಲ್ಲ. ಬೇರೆ ರಾಜ್ಯಗಳಿಗೆ ಭೇಟಿ ನೀಡಿ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ತೋರಿದರು ಎಂದರು

ಇದನ್ನೂ ಓದಿ: ಕೇಂದ್ರದಿಂದ ಮೂವರು ವೀಕ್ಷಕರ ತಂಡ ರಾಜ್ಯಕ್ಕೆ ಆಗಮನ: ನಾಳೆ ಮಧ್ಯಾಹ್ನದ ವೇಳೆಗೆ ಮುಂದಿನ ಸಿಎಂ ಘೋಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.