ಬೆಳಗಾವಿ: ಬಿಜೆಪಿ ಬೆಳಗಾವಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಸರ್ಕಾರಿ ಅತಿಥಿ ಗೃಹದಲ್ಲಿ ಬರ್ತ್ಡೇ ಪಾರ್ಟಿ ಮಾಡಿದ್ದಾರೆ.
ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಕೇಕ್ ಕಟ್ ಮಾಡಿ ಬಿಜೆಪಿ ಕಾರ್ಯಕರ್ತೆ ಪ್ರೇಮಾ ಭಂಡಾರಿ ಅವರ ಜನ್ಮದಿನ ಆಚರಿಸಲಾಗಿದೆ. ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷ ಸವಿತಾ ಗುಡ್ಡಾಕಾಯಿ, ಲೀನಾ ಟೋಪಣ್ಣವರ್, ಮಾಜಿ ಅಧ್ಯಕ್ಷೆ ಉಜ್ವಲಾ ಬಡವಣಾಚೆ ಅನೇಕರು ಭಾಗಿಯಾಗಿದ್ದರು. ಸರ್ಕಾರಿ ಅತಿಥಿ ಗೃಹದಲ್ಲಿ ಜನ್ಮದಿನ ಆಚರಣೆಗೆ ಅವಕಾಶ ಇಲ್ಲ. ಆದರೂ ಬಿಜೆಪಿ ಕಾರ್ಯಕರ್ತೆಯರಿಗೆ ಬರ್ತ್ಡೇ ಪಾರ್ಟಿಗೆ ಅನುಮತಿ ಕೊಟ್ಟವರು ಯಾರು ಎಂಬ ಪ್ರಶ್ನೆ ಮೂಡಿದೆ.
ಇನ್ನು,ಈ ಬಗ್ಗೆ ಮಾಹಿತಿ ಇದ್ದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳದೇ ಮೌನ ವಹಿಸಿದ್ದಾರೆ.