ಬೆಳಗಾವಿ: ಸರ್ಕಾರಿ ಶಾಲೆ ಆವರಣದಲ್ಲಿ ತಲವಾರ್ ಹಿಡಿದು ಬರ್ತ್ ಡೇ ಆಚರಣೆ ಮಾಡಿದ್ದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸರು ಸುಮೋಟೊ ಕೇಸ್ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಇಲ್ಲಿನ ವಿಜಯನಗರ ನಿವಾಸಿ ಜ್ಯೋತಿಬಾ ನಾಯಕ ವಿರುದ್ಧ ಸುಮೋಟೋ ಕೇಸ್ ದಾಖಲಿಸಿಕೊಂಡಿರುವ ಕ್ಯಾಂಪ್ ಠಾಣೆ ಪೊಲೀಸರು, ಆರೋಪಿಯ ಬಂಧನಕ್ಕೆ ಶೋಧ ನಡೆಸಿದ್ದಾರೆ. ಮಾಧ್ಯಮಗಳಲ್ಲಿ ಬಿತ್ತರವಾದ ಸುದ್ದಿ ಗಮನಿಸಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಓದಿ.. ಸರ್ಕಾರಿ ಶಾಲಾ ಆವರಣದಲ್ಲಿ ತಲವಾರ್ ಹಿಡಿದು ಜನ್ಮದಿನ ಆಚರಣೆ: ವಿಡಿಯೋ ವೈರಲ್
ನಿನ್ನೆ ತಡರಾತ್ರಿ ಸರ್ಕಾರಿ ಶಾಲೆ ಆವರಣದಲ್ಲಿ ನೂರಾರು ಜನರನ್ನು ಸೇರಿಸಿ ಜ್ಯೋತಿಬಾ ಬರ್ತ್ ಡೇ ಮಾಡಿಕೊಂಡಿದ್ದ. ಈ ಸಂಭ್ರಮದಲ್ಲಿ ತಲವಾರ್ ಹಿಡಿದು ಸ್ನೇಹಿತರ ಜೊತೆಗೆ ನೃತ್ಯಮಾಡಿದ್ದನು. ಆ ವೇಳೆ ತೆಗೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.