ಅಥಣಿ: ಬೈಕ್ಗಳು ಮುಖಾಮುಖಿ ಡಿಕ್ಕಿ ಹೊಡೆದು ಇಬ್ಬರು ಸವಾರರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲೂಕಿನ ಶಿರಹಟ್ಟಿ ಹಾಗೂ ಸವದಿ ಗ್ರಾಮದ ರಸ್ತೆಯಲ್ಲಿ ನಡೆದಿದೆ.
ಶಿರಹಟ್ಟಿ ಗ್ರಾಮದ ಮಹಾವೀರ ದ್ಯಾಮಗೌಡ (45) ಮತ್ತು ಸವದಿ ಗ್ರಾಮದ ನಿವಾಸಿ ಭಗವಂತ ಜನೋಜಿ (30) ಮೃತ ವ್ಯಕ್ತಿಗಳು.
ಶಿರಹಟ್ಟಿ, ಸವದಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಈ ದುರಂತ ಸಂಭವಿಸಿದೆ. ಅತಿ ವೇಗದ ಚಾಲನೆಯ ಪರಿಣಾಮ ಎರಡು ಬೈಕುಗಳು ನಿಯಂತ್ರಣ ತಪ್ಪಿ ಮುಖಾಮುಖಿಯಾದ ಪರಿಣಾಮ ಈ ಘಟನೆ ಜರುಗಿದೆ ಎಂದು ತಿಳಿದು ಬಂದಿದೆ.