ಬೆಳಗಾವಿ: ಕಾರಿನಲ್ಲಿ ಸಾಗಿಸುತ್ತಿದ್ದ 1.9 ಕೋಟಿ ರೂ. ಹಣವನ್ನು ಬೈಲಹೊಂಗಲ ತಾಲೂಕಿನ ನೇಸರಗಿ ಚೆಕ್ ಪೋಸ್ಟ್ನ ಕಣ್ಗಾವಲು ತಂಡ ವಶಪಡಿಸಿಕೊಂಡಿದೆ.
ಬೆಳಗಾವಿ ಡಿಸಿಸಿ ಬ್ಯಾಂಕಿಗೆ ಸೇರಿದ ಹಣ ಎಂಬುವುದು ತನಿಖೆ ವೇಳೆ ದೃಢಪಟ್ಟಿದೆ. ಬೆಳಗಾವಿಯಲ್ಲಿರುವ ಬ್ಯಾಂಕ್ನಪ್ರಧಾನ ಕಚೇರಿಯಿಂದ ಜಿಲ್ಲೆಯ ಇತರ ಮೂರು ಶಾಖೆಗಳಿಗೆ ಹಣ ಸಾಗಿಸಲಾಗುತ್ತಿತ್ತು.
ಚೆಕ್ ಪೋಸ್ಟ್ನಲ್ಲಿ ಕಾರು ತಪಾಸಣೆ ವೇಳೆ ಹಣ ದೊರೆತ್ತಿದ್ದು, ಇಲ್ಲಿನ ಸಿಬ್ಬಂದಿ ಹಣ ಹಾಗೂ ಮೂವರನ್ನುವಶಕ್ಕೆ ಪಡೆದಿದ್ದಾರೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ದಾಖಲೆ ಪರಿಶೀಲನೆ ನಡೆಸಿದರು. ನೇಸರಗಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.