ETV Bharat / city

ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ ಸೇಡಿನ ರಾಜಕಾರಣ ಆರೋಪ..  ಠಾಣೆ ಎದುರು ರಾತ್ರಿಯಿಡೀ ಪ್ರತಿಭಟನೆ! - protest against shashikala jolle

ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ ಸೇಡಿನ ರಾಜಕಾರಣ ಆರೋಪ ಕೇಳಿ ಬಂದಿದೆ. ಸದಲಗಾ ಪೊಲೀಸ್ ಠಾಣೆ ಎದುರು ಬೋರಗಾಂವ್ ಪಟ್ಟಣ ಪಂಚಾಯತ್‌ ಸದಸ್ಯರು, ಮಾಜಿ ಸಚಿವ ರಮೇಶ ಜಾರಕಿಹೊಳಿ‌ ಬೆಂಬಲಿಗ ಉತ್ತಮ್ ಪಾಟೀಲ ಬೆಂಬಲಿಗರು ಪ್ರತಿಭಟಿಸಿದ್ದಾರೆ..

belagavi sadalaga people protest against minister shashikala jolle
ಶಶಿಕಲಾ ಜೊಲ್ಲೆ ವಿರುದ್ಧ ಸದಲಗಾ ಜನರಿಂದ ಪ್ರತಿಭಟನೆ
author img

By

Published : Jan 9, 2022, 1:18 PM IST

ಚಿಕ್ಕೋಡಿ(ಬೆಳಗಾವಿ) : ಸಚಿವೆ ಶಶಿಕಲಾ ಜೊಲ್ಲೆ ಅವರ ರಾಜಕೀಯ ಒತ್ತಡಕ್ಕೆ ಮಣಿದು ಸದಲಗಾ ಪೊಲೀಸರು ವಿನಾಕಾರಣ ನಮ್ಮ ಮಕ್ಕಳನ್ನು ಅರೆಸ್ಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸದಲಗಾ ಪೊಲೀಸ್ ಠಾಣೆ ಎದುರು ಬೋರಗಾಂವ್ ಪಟ್ಟಣ ಪಂಚಾಯತ್ ಸದಸ್ಯರು, ಉತ್ತಮ್ ಪಾಟೀಲ ಬೆಂಬಲಿಗರು ಮುತ್ತಿಗೆ ಹಾಕಿ ಪ್ರತಿಭಟಿಸಿದ್ದಾರೆ‌. ಈ ವೇಳೆ ಸದಲಗಾ ಪೊಲೀಸ್ ಠಾಣೆಯ ಸಿಪಿಐ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಘಟನೆಯ ಹಿನ್ನೆಲೆ : ಕಳೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ರಮೇಶ ಜಾರಕಿಹೊಳಿ‌ ಬೆಂಬಲಿಗ ಉತ್ತಮ ಪಾಟೀಲ್ ನೇತೃತ್ವದಲ್ಲಿ ಬೋರಗಾಂವ್ ಪಟ್ಟಣ ಪಂಚಾಯತ್‌ನಲ್ಲಿ ಎಲ್ಲ ಸ್ಥಾನಗಳಲ್ಲೂ ಉತ್ತಮ್ ಪಾಟೀಲ ಬೆಂಬಲಿಗರು ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ನಂತರ ಸಚಿವೆ ಶಶಿಕಲಾ ಜೊಲ್ಲೆ ಮತ್ತು ಉತ್ತಮ್ ಪಾಟೀಲ ಬೆಂಬಲಿಗರ ನಡುವೆ ಗಲಾಟೆ ಆಗಿತ್ತು.

ಶಶಿಕಲಾ ಜೊಲ್ಲೆ ವಿರುದ್ಧ ಸದಲಗಾ ಜನರಿಂದ ಪ್ರತಿಭಟನೆ ಹಿನ್ನೆಲೆ ಮಾಜಿ ಸಚಿವ ಪ್ರಕಾಶ ಹುಕ್ಕೇರಿ ಪ್ರತಿಕ್ರಿಯೆ ನೀಡಿರುವುದು..

ಗಲಾಟೆಯಲ್ಲಿ ಉತ್ತಮ್ ಪಾಟೀಲ ಅವರ 9 ಬೆಂಬಲಿಗರ ಮೇಲೆ ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಉತ್ತಮ್ ಪಾಟೀಲ ಅವರು ಹೈಕೋರ್ಟ್‌ನಲ್ಲಿ ಬೇಲ್ ತೆಗೆದುಕೊಂಡು ಬಂದು ಬಿಡುಗಡೆ ಮಾಡಿಸಿದ್ದರು.

ಆದ್ರೆ, ಅಷ್ಟಕ್ಕೇ ಸುಮ್ಮನಾಗದ ಸದಲಗಾ ಪೊಲೀಸರು, ಶಶಿಕಲಾ ಜೊಲ್ಲೆ ಅವರ ರಾಜಕೀಯ ಒತ್ತಡಕ್ಕೆ ಮಣಿದು ನಮ್ಮ ಮಕ್ಕಳಿಗೆ ವಿನಾಕಾರಣ ಕಿರುಕುಳ ಕೊಡುತ್ತಿದ್ದರಲ್ಲದೇ, ಬಂಧಿಸಿ ಕೇಸ್ ಹಾಕುತ್ತಿದ್ದಾರೆ ಎಂಬುದು ಗೆದ್ದ ಪಕ್ಷೇತರ ಅಭ್ಯರ್ಥಿಗಳ ಆರೋಪವಾಗಿದೆ.

ಪ್ರಕಾಶ ಹುಕ್ಕೇರಿ ಭೇಟಿ, ಮನವೊಲಿಕೆ : ಸದಲಗಾ ಪೊಲೀಸ್ ಠಾಣೆ ಎದುರು ಕಳೆದ ರಾತ್ರಿಯಿಂದ ಪ್ರತಿಭಟನೆ ನಡೆದಿದೆ. ಸ್ಥಳಕ್ಕೆ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಭೇಟಿ ನೀಡಿ ಸಮಸ್ಯೆ ಆಲಿಸಿದರು.

ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿಕೊಂಡರು. ಈ ವೇಳೆ ಮಾತನಾಡಿದ ಬೋರಗಾಂವ್ ಪಟ್ಟಣ ಪಂಚಾಯತ್‌ ಸದಸ್ಯರು ಹಾಗೂ ಸ್ಥಳೀಯರು, ಸದಲಗಾ ಪೊಲೀಸರು ಸಚಿವೆ ಶಶಿಕಲಾ ಜೊಲ್ಲೆ ಅವರ ರಾಜಕೀಯ ಒತ್ತಡಕ್ಕೆ ಮಣಿದು ನಮ್ಮ ಮೇಲೆ ಕೇಸ್ ಹಾಕುತ್ತಿದ್ದಾರೆ‌.

ಈಗಾಗಲೇ 9 ಜನರ ವಿರುದ್ಧ ಸದಲಗಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ‌. ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೆ ನಿನ್ನೆ ಐವರನ್ನು ರಾತೋರಾತ್ರಿ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡರು‌. ಬಳಿಕ ಪ್ರಕಾಶ ಹುಕ್ಕೇರಿ ಮನವಿ ಮೇರೆಗೆ ಪ್ರತಿಭಟನೆ ಕೈಬಿಟ್ಟರು.

ಇದನ್ನೂ ಓದಿ: Day-2 of weekend curfew.. ಹೀಗಿದೆ ನೋಡಿ ವಿವಿಧ ಜಿಲ್ಲೆಗಳಲ್ಲಿ ಜನರ ಪ್ರತಿಕ್ರಿಯೆ..

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಚಿವ ಪ್ರಕಾಶ ಹುಕ್ಕೇರಿ ಅವರು, ಚುನಾವಣೆಗಳಲ್ಲಿ ಗಲಾಟೆ, ಗದ್ದಲಗಳು ಸ್ವಾಭಾವಿಕ. ಇಂತಹ ಪ್ರಕರಣದಲ್ಲಿ ರಾಜಕೀಯ ನಾಯಕರು ಅಷ್ಟೊಂದು ಮಹತ್ವ ಕೊಡಬಾರದು.

ಕಾರ್ಯಕರ್ತರು ದಿನ ಬೆಳಗಾದರೆ ಒಬ್ಬರ ಮುಖ ಮತ್ತೊಬ್ಬರು ನೋಡುತ್ತಾರೆ. ಹೀಗಾಗಿ, ಅದನ್ನು ಸಚಿವರು ಗಂಭೀರವಾಗಿ ತೆಗೆದುಕೊಳ್ಳಬಾರದು. ಇದು ದುರಷ್ಟಕರ ಬೆಳವಣಿಗೆ.

ಚುನಾವಣೆಯಲ್ಲಿ ವಿರೋಧ ಮಾಡಿದ್ದೇವೆ ಅಂತಾ ರೈತರ ಕಬ್ಬು ತೆಗೆದುಕೊಂಡು ಹೋಗುವುದನ್ನು ನಿಲ್ಲಿಸೋದು, ಕೆಲಸದಿಂದ ತೆಗೆಯೋದು, ಈ ಪದ್ಧತಿ ಚಲೋ ಅಲ್ಲಾ. ಈ ಬಗ್ಗೆ ಅವರಿಗೆ ಅರಿವು ಆಗಬೇಕಿದೆ. ಆದ್ರೆ, ಈ ವಿಷಯವನ್ನು ನಾವು ಗಂಭೀರವಾಗಿ ತೆಗದುಕೊಳ್ಳುತ್ತೇವೆ.

ಬೆಂಬಲಿಗರ ಜೊತೆಗೆ ನಿಲ್ಲುತ್ತೇವೆ. ಬಿಜೆಪಿ ಪಕ್ಷಕ್ಕೆ ಅವರು ಸಚಿವರಿರಬಹುದು. ಕಾಂಗ್ರೆಸ್ ಪಕ್ಷಕ್ಕೆ ಅಲ್ಲ. ಮುಂಬರುವ ದಿನಗಳಲ್ಲಿ ಒಗ್ಗಟ್ಟಾಗಿ ನಿಪ್ಪಾಣಿ ಕೇತ್ರದಲ್ಲಿ ಕೆಲಸ ಮಾಡುವ ಮೂಲಕ ಅವರಿಗೆ ಬುದ್ಧಿ ಕಲಿಸುವ ಕೆಲಸವನ್ನು ಮಾಡುತ್ತೇವೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.