ETV Bharat / city

ಮಹಾದಾಯಿ, ಮೇಕೆದಾಟು ಯೋಜನೆ ಬಗ್ಗೆ ಎರಡ್ಮೂರು ತಿಂಗಳಲ್ಲಿ ಸಿಹಿ ಸುದ್ದಿ : ಎಂ.ಬಿ.ಮಹೇಶ್

ಕಟ್ಟಡದಿಂದ ಅಭಿವೃದ್ಧಿ ಆಗುವುದಿಲ್ಲ, ಅಲ್ಲಿ ನಡೆಯುವ ಕಾರ್ಯದಿಂದ ಅಭಿವೃದ್ಧಿ ಆಗುವುದು ಎಂದು ಬಿಜೆಪಿ ಮಾಧ್ಯಮ ವಕ್ತಾರ ಸುವರ್ಣಸೌಧಕ್ಕೆ ರಾಜ್ಯಮಟ್ಟದ ಕಚೇರಿಗಳನ್ನು ಸ್ಥಳಾಂತರ‌ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ.

Mekedatu project
ಎಂ.ಬಿ.ಮಹೇಶ್
author img

By

Published : Jul 2, 2022, 7:53 PM IST

ಬೆಳಗಾವಿ: ಸುವರ್ಣಸೌಧಕ್ಕೆ ರಾಜ್ಯಮಟ್ಟದ ಕಚೇರಿಗಳನ್ನು ಸ್ಥಳಾಂತರ‌ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಧ್ಯಮ ವಕ್ತಾರ ಎಂ.ಬಿ. ಮಹೇಶ್ ಪ್ರತಿಕ್ರಿಯಿಸಿ, ಕಟ್ಟಡ ಕಟ್ಟಿದ ನಿರ್ಮಿಸಿದ ಕೂಡಲೇ ಎಲ್ಲವೂ ಜನ ಉಪಯೋಗಿ ಆಗಿ ಬಿಡುತ್ತಾ..? ಮಾಡೋ ಕಾರ್ಯವೇ ಮುಖ್ಯ ಎಂದಿದ್ದಾರೆ.

ನಗರದಲ್ಲಿಂದು ಮಾಧ್ಯಮದಗೋಷ್ಟಿಯಲ್ಲಿ ಮಾತನಾಡಿದ ಅವರು, ಸುವರ್ಣಸೌಧಕ್ಕೆ ರಾಜ್ಯಮಟ್ಟದ ಕಚೇರಿಗಳು ಸ್ಥಳಾಂತರ ಸರ್ಕಾರ ಮಟ್ಟದಲ್ಲಿ ಇತ್ಯರ್ಥ ಆಗಬೇಕು. ಕರ್ನಾಟಕ ಸಂಪೂರ್ಣ ವಿಕಾಸ ಆಗಬೇಕು ಎಂಬುದು ನಮ್ಮ ಅಪೇಕ್ಷೆ ಇದೆ. ಕಟ್ಟಡದಿಂದ ಉತ್ತರ ಕರ್ನಾಟಕ ಅಭಿವೃದ್ಧಿ ಅಲ್ಲಾ. ಕಟ್ಟಡದಲ್ಲಿ ಮಾಡೋ ಕಾರ್ಯ ಮುಖ್ಯವಾಗುತ್ತದೆ ಎಂದು ಹೇಳಿದರು.

ಹೇಳಿಕೆ ಸಮರ್ಥಿಸಿ ಕೊಂಡ ಬಿಜೆಪಿ ಮಾಧ್ಯಮ ವಕ್ತಾರ ಎಂ.ಬಿ.ಮಹೇಶ್

ಕತ್ತಿ ಹೇಳಿಕೆಗೆ ಕಿಮ್ಮತ್ತಿಲ್ಲ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡಿರುವ ಸಚಿವ ಉಮೇಶ ‌ಕತ್ತಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಉಮೇಶ ಕತ್ತಿಯವರ ಹೇಳಿಕೆಯನ್ನು ಪಕ್ಷ ಒಪ್ಪುವುದಿಲ್ಲ. ಉಮೇಶ್ ಕತ್ತಿಯವರ ಹೇಳಿಕೆ ನಮ್ಮ ಪಕ್ಷದ ನಿಲುವಲ್ಲ. ಉಮೇಶ ಕತ್ತಿಯವರ ಹೇಳಿಕೆಗೆ ಎಷ್ಟು ಕಿಮ್ಮತ್ತು, ಎಷ್ಟು ಮೌಲ್ಯ ಇದೆ, ಅನೋದು ನಿಮಗೂ ಗೊತ್ತಿದೆ ಎಂದರು.

ಮಹದಾಯಿ, ಮೇಕೆದಾಟು ಬಗ್ಗೆ ಸದ್ಯದಲ್ಲೇ ಸಿಹಿ ಸುದ್ದಿ: ಮಹದಾಯಿ, ಮೇಕೆದಾಟು ಯೋಜನೆಯನ್ನು ನೂರಕ್ಕೆ ನೂರರಷ್ಟು ಅನುಷ್ಠಾನಕ್ಕೆ ತರುತ್ತೇವೆ. ಇದು ನಮ್ಮ ಸರ್ಕಾರದ ನಿಲುವು. ಇನ್ನೂ ಎರಡರಿಂದ ಮೂರು ತಿಂಗಳಲ್ಲಿ ಸಿಹಿ ಸುದ್ದಿ ಸಿಗುತ್ತದೆ‌. ಇದರ ಜೊತೆಗೆ ಕರ್ನಾಟಕದಲ್ಲಿ ನೆನೆಗುದಿಗೆ ಬಿದ್ದಿರುವ ಎಲ್ಲ ನೀರಾವರಿ ಯೋಜನೆಗಳು ಹಾಗೂ ನಮ್ಮ‌ ರಾಜ್ಯದ ಹಿತಕ್ಕೆ ಬೇಕಾದ ಕಾರ್ಯವನ್ನು ನಮ್ಮ ಸರ್ಕಾರ ಮಾಡುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ಹೆಚ್​ಡಿಡಿ, ಹೆಚ್​ಡಿಕೆ ವಿರುದ್ಧ ಮಾತನಾಡಿದವರ ಗತಿ ಏನಾಗಿದೆ ಗೊತ್ತಿದೆಯಲ್ಲ.. ರಾಜಣ್ಣಗೆ ಅನಿತಾ ಕುಮಾರಸ್ವಾಮಿ ವಾರ್ನಿಂಗ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.