ETV Bharat / city

ಗಡಿ ತಪಾಸಣಾ ಕೇಂದ್ರಗಳಲ್ಲಿ ಮುನ್ನೆಚ್ಚರಿಕೆ ಕ್ರಮ:  ರಾಜ್ಯ ಗುಪ್ತಚರ ಇಲಾಖೆ ಮೆಚ್ಚುಗೆ - ಅಂತರಾಜ್ಯ ಗಡಿ ತಪಾಸಣಾ ಕೇಂದ್ರ

ಅಂತರರಾಜ್ಯ ಗಡಿ ತಪಾಸಣಾ ಕೇಂದ್ರಗಳಲ್ಲಿ ಕಳೆದ 60 ದಿನಗಳಿಂದ ಮುನ್ನೆಚ್ಚರಿಕೆ ಕ್ರಮವಹಿಸಿರುವ ಬೆಳಗಾವಿ ಜಿಲ್ಲಾಡಳಿತದ ಕ್ರಮಕ್ಕೆ ರಾಜ್ಯ ಗುಪ್ತಚರ ಇಲಾಖೆ ಮೆಚ್ಚುಗೆ ವ್ಯಕ್ತಪಡಿಸಿದೆ.

State Intelligence Department Appreciated
ಗಡಿ ತಪಾಸಣಾ ಕೇಂದ್ರಗಳಲ್ಲಿ ಬೆಳಗಾವಿ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ, ರಾಜ್ಯ ಗುಪ್ತಚರ ಇಲಾಖೆ ಮೆಚ್ಚುಗೆ
author img

By

Published : May 22, 2020, 5:01 PM IST

ಬೆಳಗಾವಿ: ಮಹಾರಾಷ್ಟ್ರ ಗಡಿ ಅಂತರಾಜ್ಯ ತಪಾಸಣಾ ಕೇಂದ್ರಗಳಲ್ಲಿ ಕೊರೊನಾ‌ ತಡೆಗೆ ಕಳೆದ 60 ದಿನಗಳಿಂದ ಮುನ್ನೆಚ್ಚರಿಕೆ ಕ್ರಮವಹಿಸಿರುವ ಜಿಲ್ಲಾಡಳಿತದ ಕ್ರಮಕ್ಕೆ ರಾಜ್ಯ ಗುಪ್ತಚರ ಇಲಾಖೆ ಮೆಚ್ಚುಗೆ ವ್ಯಕ್ತಪಡಿಸಿದೆ.

State Intelligence Department Appreciated
ಗಡಿ ತಪಾಸಣಾ ಕೇಂದ್ರಗಳಲ್ಲಿ ಬೆಳಗಾವಿ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ, ರಾಜ್ಯ ಗುಪ್ತಚರ ಇಲಾಖೆ ಮೆಚ್ಚುಗೆ

ಜಿಲ್ಲಾಡಳಿತವನ್ನು ಪ್ರಶಂಸಿಸಿ ಪತ್ರ ಬರೆದಿರುವ ರಾಜ್ಯಗುಪ್ತಚರ ಇಲಾಖೆ ಎಡಿಜಿಪಿ ಕಮಲಪಂತ. ಅಂತರರಾಜ್ಯ ಕೋವಿಡ್ -19 ಸರ್ವಲೆನ್ಸ್ ಚೆಕ್ ಪೋಸ್ಟ್ ನಿಪ್ಪಾಣಿ - ಕೂಗನೊಳ್ಳಿಯಲ್ಲಿ ಮಾಡಲಾದ ವ್ಯವಸ್ಥೆಯ ಚಿತ್ರಗಳು ತಮ್ಮ ಮನಸ್ಸು ಗೆದ್ದಿರುವುದಾಗಿ, ಚೆಕ್ ಪೋಸ್ಟ್ ನಲ್ಲಿ ಪ್ರಯಾಣಿಕರ ಅನುಕೂಲಕ್ಕೆ ಹೆಚ್ಚಿನ ಆದ್ಯತೆ ನೀಡಿರುವ ಕ್ರಮಗಳು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅಗತ್ಯ ಏರ್ಪಾಡು ಮಾಡಿರುವುದು. ಕೊರೊನಾ ತಡೆಗೆ ಸೂಕ್ತ ಪೂರ್ವತಯಾರಿ & ಸಮಯೋಚಿತ ಆಡಳಿತದ ನಡೆ ಎಂದಿದ್ದಾರೆ.

ಇನ್ನು ಮಹಾರಾಷ್ಟ್ರ ಸೇರಿ ಅನ್ಯ ರಾಜ್ಯಗಳಿಂದ ಆಗಮಿಸಿರುವ ಪ್ರಯಾಣಿಕರಿಗೆ ಅಂತರರಾಜ್ಯ ತಪಾಸಣಾ ಕೇಂದ್ರದಲ್ಲಿ ಮೂಲಸೌಕರ್ಯ ಒದಗಿಸಿದ್ದು, ಅಭಿನಂದನಾರ್ಹ ಎಂದು ಎಡಿಜಿಪಿ ಪತ್ರದಲ್ಲಿ ತಿಳಿಸಿದ್ದಾರೆ.

ಆದರೆ, ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಯಲ್ಲಿ ನಿತ್ಯ ಸಾವಿರಾರು ಜನರು ಪಾಸ್ ಪಡೆದುಕೊಂಡು ಬೆಳಗಾವಿ ಜಿಲ್ಲೆಯನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ. ಇನ್ನೊಂದಡೆ ಕಳ್ಳ ಮಾರ್ಗದಲ್ಲಿಯೂ ಸಾಕಷ್ಟು ಜನರು ಗಡಿ ನುಸುಳಿ ಒಳಪ್ರವೇಶ ಮಾಡುತ್ತಿದ್ದಾರೆ. ಈ ಕುರಿತು ಸೋಂಕು ಹರಡದಂತೆ ಇನ್ನಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಳ್ಳಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.