ETV Bharat / city

ಹಿಜಾಬ್​ ವಿವಾದ : ಬೆಳಗಾವಿಯ ಸರ್ದಾರ್ ಪ್ರೌಢ ಶಾಲೆಗೆ ಡಿಸಿ, ಕಮಿಷನರ್​ ದಿಢೀರ್ ಭೇಟಿ - ಶಾಲಾ ಸಿಬ್ಬಂದಿ ಜೊತೆ ಪೋಷಕರು ವಾಗ್ವಾದ

ನ್ಯಾಯಾಲಯದ ಮಧ್ಯಂತರ ಆದೇಶ ಪಾಲಿಸುವಂತೆ ಈಗಾಗಲೇ ಮನವರಿಕೆ ಮಾಡಿಕೊಟ್ಟಿದ್ದೇವೆ. ಶಾಲಾ ಆವರಣದಲ್ಲಿ ಧಾರ್ಮಿಕ ಸಂಕೇತದ ವಸ್ತ್ರ ಧರಿಸುವಂತಿಲ್ಲ. ಹಿಜಾಬ್ ಹಾಕಿಕೊಂಡು ಬಂದಿರುವ ಮಕ್ಕಳಿಗೆ ತಿಳಿ ಹೇಳುತ್ತೇವೆ. ಗೊಂದಲದ ವಾತಾವರಣ ಉಂಟಾಗದಂತೆ ಮಕ್ಕಳನ್ನು ಮನವೊಲಿಸುತ್ತೇವೆ..

ಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯ
ಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯ
author img

By

Published : Feb 14, 2022, 12:35 PM IST

ಬೆಳಗಾವಿ : ಹಿಜಾಬ್ ವಿಚಾರವಾಗಿ ಸರ್ದಾರ್ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿಯರ ಪೋಷಕರು, ಶಾಲಾ ಸಿಬ್ಬಂದಿ ಜೊತೆಗೆ ವಾಗ್ವಾದ ನಡೆಸಿದ ಹಿನ್ನೆಲೆ ಬೆಳಗಾವಿ ಡಿಸಿ ಎಂ ಜಿ ಹಿರೇಮಠ ಹಾಗೂ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಸ್ಥಳಕ್ಕೆ ದಿಢೀರ್ ಭೇಟಿ ನೀಡಿ ಮಾಹಿತಿ ಪಡೆದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ನ್ಯಾಯಾಲಯದ ಮಧ್ಯಂತರ ಆದೇಶ ಪಾಲಿಸುವಂತೆ ಈಗಾಗಲೇ ಮನವರಿಕೆ ಮಾಡಿಕೊಟ್ಟಿದ್ದೇವೆ. ಶಾಲಾ ಆವರಣದಲ್ಲಿ ಧಾರ್ಮಿಕ ಸಂಕೇತದ ವಸ್ತ್ರ ಧರಿಸುವಂತಿಲ್ಲ. ಹಿಜಾಬ್ ಹಾಕಿಕೊಂಡು ಬಂದಿರುವ ಮಕ್ಕಳಿಗೆ ತಿಳಿ ಹೇಳುತ್ತೇವೆ. ಗೊಂದಲದ ವಾತಾವರಣ ಉಂಟಾಗದಂತೆ ಮಕ್ಕಳನ್ನು ಮನವೊಲಿಸುತ್ತೇವೆ ಎಂದರು.

ಬೆಳಗಾವಿಯ ಸರ್ದಾರ್ ಪ್ರೌಢ ಶಾಲೆಗೆ ಡಿಸಿ, ಕಮಿಷನರ್ ಭೇಟಿ

ಇದನ್ನೂ ಓದಿ: ಹೈಕೋರ್ಟ್ ಆದೇಶ ಮೀರಿ ಹಿಜಾಬ್ ಧರಿಸಿ ಕ್ಲಾಸ್​ಗೆ ಎಂಟ್ರಿ: ಎಚ್ಚೆತ್ತು ಹಿಜಾಬ್ ತೆಗೆಸಿದ ಶಿಕ್ಷಕರು

ಕಿಡಿಗೇಡಿಗಳ ಮೇಲೆ ನಿಗಾ : ನಗರ ಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯ ಮಾತನಾಡಿ, ನಗರದಲ್ಲಿ 9 ಹಾಗೂ 10ನೇ ತರಗತಿ ಶಾಲೆಗಳು ಪುನಾರಂಭಗೊಂಡಿವೆ. ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲ ಶಾಲಾ-ಕಾಲೇಜ್​ಗಳ ಎದುರು ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.

ಎಲ್ಲ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಜೊತೆಗೆ ಸಂಪರ್ಕದಲ್ಲಿದ್ದೇವೆ. ಅಹಿತಕರ ಘಟನೆ ನಡೆಯದಂತೆ ಕ್ರಮವಹಿಸಿದ್ದೇವೆ. ಗೊಂದಲ ಉಂಟು ಮಾಡುವ ಅನ್ಯ ವ್ಯಕ್ತಿಗಳ ಮೇಲೆ ನಿಗಾ ಇಟ್ಟಿದ್ದೇವೆ. ಶಾಲಾ ಆವರಣದ ಹೊರಗಷ್ಟೇ ನಾವು ಭದ್ರತೆ ಕೈಗೊಂಡಿದ್ದೇವೆ. ತರಗತಿಯಲ್ಲಿ ಹಿಜಾಬ್ ತೆಗೆಸುವ ಕೆಲಸವನ್ನು ಶಾಲಾ ಆಡಳಿತ ಮಂಡಳಿ ಮಾಡುತ್ತದೆ ಎಂದರು.

ಇದನ್ನೂ ಓದಿ: ಬೆಳಗಾವಿ: ಹಿಜಾಬ್ ‌ಧರಿಸಿಯೇ ಶಾಲೆಗೆ ವಿದ್ಯಾರ್ಥಿನಿಯರ ಆಗಮನ; ಸಿಬ್ಬಂದಿ ಜೊತೆ ವಾಗ್ವಾದ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.