ಚಿಕ್ಕೋಡಿ: ಬಸ್ ಮತ್ತು ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಜಿಲ್ಲೆಯ ಗೋಕಾಕ ತಾಲೂಕಿನ ಮರಡಿಮಠ ಗ್ರಾಮದ ಹತ್ತಿರ ನಡೆದಿದೆ.
ಗೋಕಾಕ ಫಾಲ್ಸ್ ನಿವಾಸಿಗಳಾದ ಮಹಾಂತೇಶ ದಶರಥ ಪಾತ್ರೋಟ್ (25) ಬಾಬು ದಾಸಪ್ಪನವರ (33) ಮೃತರು. ಗೋಕಾಕ ಗ್ರಾಮೀಣ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.