ETV Bharat / city

ಸ್ನೇಹಕ್ಕೆ ಧಕ್ಕೆಯಾದರೆ ಸಂಘರ್ಷ..'ಮಹಾ' ನಾಯಕರಿಗೆ ಎಚ್ಚರಿಕೆ ನೀಡಿದ ಮೃತ್ಯುಂಜಯ ಸ್ವಾಮೀಜಿ - ಬೆಳಗಾವಿಯನ್ನು ಎರಡನೇ ರಾಜಧಾನಿ

ಭಾರತ ಒಕ್ಕೂಟ ವ್ಯವಸ್ಥೆಯಲ್ಲಿ ಕನ್ನಡಕ್ಕೆ ಮಲತಾಯಿ ಧೋರಣೆ ಮಾಡಬಾರದು. ಮಹಾರಾಷ್ಟ್ರ ನಾಯಕರು ಹಾಗೂ ಕೆಲಸಂಘಟನೆಗಳು ಕನ್ನಡಿಗರ ಸ್ವಾಭಿಮಾನ ಕೆದಕುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ಪುಂಡಾಟಿಕೆಯನ್ನ ಕನ್ನಡಿಗರು ಖಂಡಿಸುತ್ತೇವೆ. ಇದರಲ್ಲಿ ಪ್ರಧಾನಿ ಮೋದಿ ಮಧ್ಯ ಪ್ರವೇಶಿಸಿ ಉಭಯ ರಾಜ್ಯಗಳ ಮಧ್ಯೆ ಸೌಹಾರ್ದತೆ ತರಲು ಮುಂದಾಗಬೇಕು..

basava-jayamritunjaya-swamiji-talk-about-belagavi-karnataka-issue
'ಮಹಾ' ನಾಯಕರಿಗೆ ಎಚ್ಚರಿಕೆ ನೀಡಿದ ಮೃತ್ಯುಂಜಯ ಸ್ವಾಮೀಜಿ
author img

By

Published : Nov 1, 2020, 5:52 PM IST

ಬೆಳಗಾವಿ : ಬೆಳಗಾವಿಯನ್ನು ಎರಡನೇ ರಾಜಧಾನಿಯನ್ನಾಗಿ ಘೋಷಣೆ ಮಾಡಬೇಕು ಎಂದು ಕೂಡಲಸಂಗಮ ಪೀಠದ ಪ್ರಥಮ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದ್ದಾರೆ.

ಸ್ನೇಹಕ್ಕೆ ಧಕ್ಕೆಯಾದರೆ ಸಂಘರ್ಷ.. 'ಮಹಾ' ನಾಯಕರಿಗೆ ಎಚ್ಚರಿಕೆ ನೀಡಿದ ಮೃತ್ಯುಂಜಯ ಸ್ವಾಮೀಜಿ

ಕನ್ನಡ ರಾಜ್ಯೋತ್ಸವ ಹಿನ್ನೆಲೆ ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆಗೆ ಗೌರವಾರ್ಪಣೆ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ಉತ್ತರ ಕರ್ನಾಟಕ ನಿರೀಕ್ಷೆಯಷ್ಟು ಅಭಿವೃದ್ಧಿ ಆಗಿಲ್ಲ. ಉತ್ತರ ಕರ್ನಾಟಕವನ್ನ ಕಿತ್ತೂರು ಕರ್ನಾಟಕ ಎಂದು ಘೋಷಿಸಬೇಕು. ಬೆಳಗಾವಿಯನ್ನು ಎರಡನೇ ಉಪ ರಾಜಧಾನಿ ಅಂತಾ ಸಂವಿಧಾನಾತ್ಮಕವಾಗಿ ಘೋಷಣೆ ಮಾಡಬೇಕು ಎಂದರು.

ಭಾರತ ಒಕ್ಕೂಟ ವ್ಯವಸ್ಥೆಯಲ್ಲಿ ಕನ್ನಡಕ್ಕೆ ಮಲತಾಯಿ ಧೋರಣೆ ಮಾಡಬಾರದು. ಮಹಾರಾಷ್ಟ್ರ ನಾಯಕರು ಹಾಗೂ ಕೆಲಸಂಘಟನೆಗಳು ಕನ್ನಡಿಗರ ಸ್ವಾಭಿಮಾನ ಕೆದಕುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ಪುಂಡಾಟಿಕೆಯನ್ನ ಕನ್ನಡಿಗರು ಖಂಡಿಸುತ್ತೇವೆ. ಇದರಲ್ಲಿ ಪ್ರಧಾನಿ ಮೋದಿ ಮಧ್ಯ ಪ್ರವೇಶಿಸಿ ಉಭಯ ರಾಜ್ಯಗಳ ಮಧ್ಯೆ ಸೌಹಾರ್ದತೆ ತರಲು ಮುಂದಾಗಬೇಕು ಎಂದರು.

ರಾಜ್ಯೋತ್ಸವ ವಿರೋಧಿಸಿ ಮಹಾರಾಷ್ಟ್ರ ಸರ್ಕಾರ ಬ್ಲ್ಯಾಕ್ ಡೇ ವಿಚಾರಕ್ಕೆ, ಚೆನ್ನಮ್ಮ, ರಾಯಣ್ಣರಂತೆ ನಾವು ಎಲ್ಲರ ಸ್ನೇಹ ಬಯಸುತ್ತೇವೆ. ಆದರೆ, ಆ ಸ್ನೇಹಕ್ಕೆ ತೊಂದರೆಯಯಾದ್ರೆ ಸಂಘರ್ಷಕ್ಕಿಳಿಯಬೇಕಾಗುತ್ತೆ ಎನ್ನುವ ಮೂಲಕ ಬೆಳಗಾವಿಯಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಕ್ಯಾತೆ ತೆಗೆದ ಮಹಾನಾಯಕರಿಗೆ ಎಚ್ಚರಿಕೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.