ETV Bharat / city

ಮಹಾರಾಷ್ಟ್ರದ ಪ್ರಚೋದನಾಕಾರಿ ಭಾಷಣಕಾರ ಸಂಭಾಜಿ ಭೀಡೆ ವಿರುದ್ಧ ಅರೆಸ್ಟ್ ವಾರೆಂಟ್ - President of the Shivpratishana of Maharashtra

ಚುನಾವಣೆ ನೀತಿ ಸಂಹಿತೆ ‌ಆರೋಪ ಎದುರಿಸುತ್ತಿರುವ ಮಹಾರಾಷ್ಟ್ರದ ಶಿವ ಪ್ರತಿಷ್ಠಾನದ ಅಧ್ಯಕ್ಷ ಸಂಭಾಜೀ ಭೀಡೆ ವಿರುದ್ಧ ಬೆಳಗಾವಿಯ 2ನೇ ಜೆಎಂಎಫ್ ನ್ಯಾಯಾಲಯ ಅರೆಸ್ಟ್ ವಾರೆಂಟ್ ಜಾರಿಗೊಳಿಸಿದೆ.

Arrest warrants against provocateur Sambhaji Bhide of Maharashtra
ಸಂಭಾಜಿ ಭೀಡೆ ವಿರುದ್ಧ ಅರೆಸ್ಟ್ ವಾರೆಂಟ್
author img

By

Published : Feb 8, 2020, 10:23 PM IST

ಬೆಳಗಾವಿ: ಚುನಾವಣೆ ನೀತಿ ಸಂಹಿತೆ ‌ಆರೋಪ ಎದುರಿಸುತ್ತಿರುವ ಮಹಾರಾಷ್ಟ್ರದ ಶಿವ ಪ್ರತಿಷ್ಠಾನದ ಅಧ್ಯಕ್ಷ ಸಂಭಾಜೀ ಭೀಡೆ ವಿರುದ್ಧ ಬೆಳಗಾವಿಯ 2ನೇ ಜೆಎಂಎಫ್ ನ್ಯಾಯಾಲಯ ಅರೆಸ್ಟ್ ವಾರೆಂಟ್ ಜಾರಿಗೊಳಿಸಿದೆ.

ಮಹಾರಾಷ್ಟ್ರ ‌ಸಾಂಗ್ಲಿ ಜಿಲ್ಲೆ ಮೂಲದ ಸಂಭಾಜೀ ಭೀಡೆ ಪ್ರಚೋದನಕಾರಿ ಭಾಷಣಕಾರ ಎಂದೇ ಗುರುತಿಸಿಕೊಂಡಿದ್ದಾರೆ.

ಅವರು 2018ರ ಏಪ್ರಿಲ್ 12ಕ್ಕೆ ಬೆಳಗಾವಿ ತಾಲೂಕಿನ ‌ಯಳ್ಳೂರ ಗ್ರಾಮದಲ್ಲಿ ಕುಸ್ತಿ ಮೈದಾನ ಉದ್ಘಾಟನೆಗಾಗಿ ಆಗಮಿಸಿದ್ದರು. ಅದೇ ಸಮಯದಲ್ಲಿ ರಾಜ್ಯ ವಿಧಾನಸಭೆ‌ ಚುನಾವಣೆ ನಡೆಯುತ್ತಿತ್ತು. ಮರಾಠಿ‌ ಭಾಷಿಕರು ಎಂಇಎಸ್ ‌ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ನೀವು ಒಟ್ಟಾದರೆ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಲು ಪ್ರಯತ್ನಿಸುತ್ತೇವೆ ಎಂದು ಭಾಷಣ ಮಾಡಿ ನೀತಿ ಸಂಹಿತೆ ಉಲ್ಲಂಘಿಸಿದ್ದರು.

ಈ ಕುರಿತು ಬೆಳಗಾವಿ ಗ್ರಾಮೀಣ ‌ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಕುರಿತು ಜೆಎಂಎಫ್ ನ್ಯಾಯಾಲಯ ವಿಚಾರಣೆ ಕೈಗೊಂಡಿತ್ತು. ಆದರೆ ಸಂಭಾಜೀ ಭೀಡೆ ಅವರು ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಇಲ್ಲಿನ ನ್ಯಾಯಾಲಯ ಅರೆಸ್ಟ್ ವಾರೆಂಟ್ ಹೊರಡಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.