ಚಿಕ್ಕೋಡಿ: ದೇಶದಲ್ಲಿ ಒಮಿಕ್ರೋನ್ ಕೊರೊನಾ ರೂಪಾಂತರಿ ಹೊಸ ತಳಿಯ ಆತಂಕ ಹಿನ್ನೆಲೆ ಬೆಳಗಾವಿ ಮಹಾರಾಷ್ಟ್ರ ಗಡಿಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆ ಕರ್ತವ್ಯಕ್ಕೆ ನಿಯೋಜನೆಗೊಂಡ ಅಂಗನವಾಡಿ ಕಾರ್ಯಕರ್ತೆಯೊಬ್ಬರು ತಾಯ್ತನದ ಜವಾಬ್ದಾರಿ ಜತೆಗೆ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದ ಶಾಹಿನ್ ಮುಜಾವರ್ ಎಂಬ ಅಂಗನವಾಡಿ ಕಾರ್ಯಕರ್ತೆ ತನ್ನ 2 ವರ್ಷದ ಮಗುವನ್ನು ಹೊತ್ತು ಚೆಕ್ಪೋಸ್ಟ್ ನಲ್ಲಿ ಕೋವಿಡ್ ತಪಾಸಣೆ ಮಾಡುತ್ತಿದ್ದರು. ವಿಷಯ ತಿಳಿದು ಕಾಗವಾಡ ಸಿಡಿಪಿಒ ಸಂಜಯ್ ಕುಮಾರ್ ಸದಲಗಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ, ಎರಡು ವರ್ಷದ ಮಗುವಿನ ಆರೋಗ್ಯ, ಕೋವಿಡ್ ಆತಂಕ ಹಿನ್ನೆಲೆ ಅಂಗನವಾಡಿ ಕಾರ್ಯಕರ್ತೆ ಶಾಹಿನ್ ಮುಜಾವರ್ ಎಂಬುವವರನ್ನು ರಿಲೀವ್ ಮಾಡಿ ಅವರು ಆದೇಶಿಸಿದ್ದಾರೆ.
ಇದನ್ನೂ ಓದಿ: ರಾಷ್ಟ್ರಪತಿ ಭದ್ರತಾ ಬೆಂಗಾವಲು ಪಡೆಯಲ್ಲಿರಬೇಕಿದ್ದ 2 ಪೊಲೀಸ್ ಸೇರಿ 7 ಅಧಿಕಾರಿಗಳಿಗೆ ಕೋವಿಡ್