ETV Bharat / city

ಮೆಡಿಕಲ್​ ಶಾಪ್​ಗೆ ಆಕಸ್ಮಿಕ ಬೆಂಕಿ..ಲಕ್ಷಾಂತರ ರೂ. ಮೌಲ್ಯದ ಔಷಧ ಸುಟ್ಟು ಭಸ್ಮ

ಬೆಳಗಾವಿ ನಗರದ ಕೇಂದ್ರ ಬಸ್ ನಿಲ್ದಾಣದ ಎದುರಿನಲ್ಲಿರುವ ಶ್ರೀರಾಮ ಮೆಡಿಕಲ್​ನಲ್ಲಿ ನಿನ್ನೆ ತಡರಾತ್ರಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ್ದು,ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಔಷಧಿಗಳು ಸುಟ್ಟು ಭಸ್ಮವಾಗಿವೆ.

Accidental fire to medical shop In Belgaum
ಮೆಡಿಕಲ್​ ಶಾಪ್​ಗೆ ಆಕಸ್ಮಿಕ ಬೆಂಕಿ..ಲಕ್ಷಾಂತರ ರೂ. ಮೌಲ್ಯದ ಔಷಧಿ ಸುಟ್ಟು ಭಸ್ಮಮೆಡಿಕಲ್​ ಶಾಪ್​ಗೆ ಆಕಸ್ಮಿಕ ಬೆಂಕಿ..ಲಕ್ಷಾಂತರ ರೂ. ಮೌಲ್ಯದ ಔಷಧಿ ಸುಟ್ಟು ಭಸ್ಮ
author img

By

Published : Apr 19, 2020, 2:10 PM IST

ಬೆಳಗಾವಿ: ಮೆಡಿಕಲ್ ಶಾಪ್​ಗೆ ಆಕಸ್ಮಿಕ ಬೆಂಕಿ‌ ತಗುಲಿದ ಪರಿಣಾಮ ಲಕ್ಷಾಂತರ ಮೌಲ್ಯದ ಔಷಧ ಸಾಮಾಗ್ರಿಗಳು ಸುಟ್ಟು ಕರಕಲಾಗಿವೆ.

ನಗರದ ಕೇಂದ್ರ ಬಸ್ ನಿಲ್ದಾಣದ ಎದುರಿನಲ್ಲಿರುವ ಶ್ರೀರಾಮ ಮೆಡಿಕಲ್​ನಲ್ಲಿ ನಿನ್ನೆ ತಡರಾತ್ರಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದೆ. ತಡರಾತ್ರಿ ಮೆಡಿಕಲ್ ಶಾಪ್​ನಲ್ಲಿ ಯಾರೂ ಇರಲಿಲ್ಲ. ಹೀಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಅಂಗಡಿಯಲ್ಲಿನ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಔಷಧಿಗಳು ಸುಟ್ಟು ಭಸ್ಮವಾಗಿವೆ.

ಅಗ್ನಿಶಾಮಕ ದಳದವರು ಪಕ್ಕದ ಅಂಗಡಿಗಳಿಗೆ ಬೆಂಕಿ ವ್ಯಾಪಿಸದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದು,ಈ ಕುರಿತು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.