ಬೆಳಗಾವಿ: ಮಾಸ್ಕ್ ಹಾಕದೇ ನಿಯಮ ಉಲ್ಲಂಘಿಸಿದವರ ವಿರುದ್ಧ ಈವರೆಗೂ ನಗರದಲ್ಲಿ 600 ಕೇಸ್ ದಾಖಲಾಗಿವೆ ಎಂದು ನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್ ತಿಳಿಸಿದರು.
ನಗರದ ಅಶೋಕ ವೃತ್ತದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅತಿ ಅವಶ್ಯಕತೆ ಇದ್ದವರನ್ನು ಮಾತ್ರ ಬಿಡಲಾಗುತ್ತಿದೆ. ವೈದ್ಯಕೀಯ ಸೇವೆ, ವ್ಯಾಕ್ಸಿನೇಷನ್‌ಗೆ ಹೋಗುತ್ತಿದ್ದೇವೆ ಎಂದಾಗ ಬಹಳ ವೇರಿಫೈ ಮಾಡಕ್ಕಾಗಲ್ಲ. ಅಗತ್ಯ ಸೇವೆ ವಾಹನಗಳು, ವೈದ್ಯಕೀಯ ಚಿಕಿತ್ಸೆಗೆ ತೆರಳುವವರು ಹಾಗೂ ವ್ಯಾಕ್ಸಿನೇಷನ್‌ಗೆ, ಮದುವೆ ಸೇರಿ ಇತರ ಸಮಾರಂಭಕ್ಕೆ ತೆರಳುವವರು ದಾಖಲೆ ತೋರಿಸಿದವರನ್ನು ಬಿಡುತ್ತಿದ್ದೇವೆ.
ಮಾಸ್ಕ್ ಹಾಕದೇ ನಿಯಮ ಉಲ್ಲಂಘಿಸಿದವರ ವಿರುದ್ಧ ಈವರೆಗೂ ನಗರದಲ್ಲಿ 600 ಕೇಸ್ ದಾಖಲಾಗಿವೆ ಎಂದು ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್ ಹೇಳಿದರು.