ಚಿಕ್ಕೋಡಿ : ಬೆಳಗಾವಿ ಜಿಲ್ಲೆಯಲ್ಲಿ ಎರಡನೇ ಹಂತದ ಚುನಾವಣೆ ನಡೆಯುತ್ತಿರುವ ಹಿನ್ನೆಲೆ ಡಿ.16 ರಂದು ನಾಮಪತ್ರ ಸಲ್ಲಿಕೆ ಕೊನೆಯ ದಿನವಾಗಿದ್ದು, ಡಿ.11 ರಿಂದ ಡಿ.16 ರ ವರೆಗೆ ಒಟ್ಟು 13,944 ನಾಮಪತ್ರ ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿ ಎಂ. ಜಿ. ಹಿರೇಮಠ ಮಾಹಿತಿ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಸವದತ್ತಿ, ರಾಮದುರ್ಗ, ಚಿಕ್ಕೋಡಿ, ನಿಪ್ಪಾಣಿ, ಕಾಗವಾಡ ಹಾಗೂ ರಾಯಬಾಗ ತಾಲೂಕುಗಳಲ್ಲಿ ಎರಡನೇ ಹಂತದ ಚುನಾವಣೆಗೆ ಈ ಕೆಳಗಿನಂತೆ ತಾಲೂಕಾವಾರು ನಾಮಪತ್ರ ಸಲ್ಲಿಕೆ ವಿವರ ಈ ಕೆಳಗಿನಂತಿದೆ.
ಸವದತ್ತಿ ತಾಲೂಕಿನಲ್ಲಿ ಒಟ್ಟು 40 ಗ್ರಾಮ ಪಂಚಾಯಿತಿಗಳಿದ್ದು, 657 ಸ್ಥಾನಗಳನ್ನು ಹೊಂದಿದೆ. ಇಲ್ಲಿಯ ವರೆಗೆ ಒಟ್ಟು 2,084 ನಾಮಪತ್ರ ಸಲ್ಲಿಕೆಯಾಗಿವೆ. ರಾಮದುರ್ಗ ತಾಲೂಕಿನಲ್ಲಿ ಒಟ್ಟು 33 ಗ್ರಾಮ ಪಂಚಾಯಿತಿಗಳಿದ್ದು 520 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಸದೇ ಖಾಲಿ ಇರುವ ಸಂಖ್ಯೆ 01, ಒಟ್ಟು ನಾಮಪತ್ರ ಸಲ್ಲಿಸಿರುವ ಉಮೇದಾರರ ಸಂಖ್ಯೆ 1,809.
ಓದಿ-ಕ್ರಿಸ್ಮಸ್, ಹೊಸ ವರ್ಷಾಚರಣೆಗೆ ಕೋವಿಡ್ ಮಾರ್ಗಸೂಚಿ ಬಿಡುಗಡೆ
ಚಿಕ್ಕೋಡಿ ತಾಲೂಕಿನಲ್ಲಿನ ಒಟ್ಟು ಗ್ರಾಮ ಪಂಚಾಯಿತಿಗಳ ಸಂಖ್ಯೆ 36, ಗ್ರಾಮ ಪಂಚಾಯಿತಿ ಸ್ಥಾನಗಳ ಸಂಖ್ಯೆ 667, ನಾಮಪತ್ರ ಸಲ್ಲಿಸದೇ ಖಾಲಿ ಇರುವ ಸಂಖ್ಯೆ 00, ಒಟ್ಟು ನಾಮಪತ್ರ ಸಲ್ಲಿಸಿರುವ ಉಮೇದಾರರ ಸಂಖ್ಯೆ 2,467. ನಿಪ್ಪಾಣಿ ತಾಲೂಕಿನಲ್ಲಿ 27 ಗ್ರಾಮ ಪಂಚಾಯಿಗಳಿದ್ದು, 498 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಒಟ್ಟು ನಾಮಪತ್ರ ಸಲ್ಲಿಸದೆ ಖಾಲಿ ಇರುವ ಸಂಖ್ಯೆ 05, ನಾಮಪತ್ರ ಸಲ್ಲಿಸಿರುವ ಉಮೇದಾರರ ಸಂಖ್ಯೆ 1,780.
ಅಥಣಿ ತಾಲೂಕಿನಲ್ಲಿ ಒಟ್ಟು ಗ್ರಾಮ ಪಂಚಾಯಿತಿಗಳ ಸಂಖ್ಯೆ 41, ಗ್ರಾಮ ಪಂಚಾಯಿತಿ ಸ್ಥಾನಗಳ ಸಂಖ್ಯೆ 741, ನಾಮಪತ್ರ ಸಲ್ಲಿಸದೇ ಖಾಲಿ ಇರುವ ಸಂಖ್ಯೆ 09, ಒಟ್ಟು ನಾಮಪತ್ರ ಸಲ್ಲಿಸಿರುವ ಉಮೇದಾರರ ಸಂಖ್ಯೆ 2,807. ಕಾಗವಾಡ ತಾಲೂಕಿನಲ್ಲಿ ಒಟ್ಟು ಗ್ರಾಮ ಪಂಚಾಯಿತಿಗಳ ಸಂಖ್ಯೆ 08, ಗ್ರಾಮ ಪಂಚಾಯಿತಿ ಸ್ಥಾನಗಳ ಸಂಖ್ಯೆ 207, ನಾಮಪತ್ರ ಸಲ್ಲಿಸದೇ ಖಾಲಿ ಇರುವ ಸಂಖ್ಯೆ 00, ಒಟ್ಟು ನಾಮಪತ್ರ ಸಲ್ಲಿಸಿರುವ ಉಮೇದಾರರ ಸಂಖ್ಯೆ 643.
ರಾಯಬಾಗ ತಾಲೂಕಿನಲ್ಲಿ ಒಟ್ಟು ಗ್ರಾಮ ಪಂಚಾಯಿತಿಗಳ ಸಂಖ್ಯೆ 33, ಗ್ರಾಮ ಪಂಚಾಯಿತಿ ಸ್ಥಾನಗಳ ಸಂಖ್ಯೆ 646, ನಾಮಪತ್ರ ಸಲ್ಲಿಸದೇ ಖಾಲಿ ಇರುವ ಸಂಖ್ಯೆ 09, ಒಟ್ಟು ನಾಮಪತ್ರ ಸಲ್ಲಿಸಿರುವ ಉಮೇದಾರರ ಸಂಖ್ಯೆ 2,354. ಬೆಳಗಾವಿ ಜಿಲ್ಲೆಯಲ್ಲಿ ಎರಡನೇ ಹಂತದ ಚುನಾವಣೆಯಲ್ಲಿ ಒಟ್ಟು 13,944 ಉಮೇದಾರರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.