ETV Bharat / business

ಜೊಮಾಟೊ 2023 ಟ್ರೆಂಡ್ಸ್​; ಬಿರಿಯಾನಿಗಾಗಿ 10 ಕೋಟಿ ಆರ್ಡರ್, 2ನೇ ಸ್ಥಾನದಲ್ಲಿ ಪಿಜ್ಜಾ - etv bharat kannada

ಸ್ವಿಗ್ಗಿಯಂತೆ ಜೊಮಾಟೊದಲ್ಲಿಯೂ ಕೂಡ ಈ ವರ್ಷ ಬಿರಿಯಾನಿಯೇ ಅತ್ಯಧಿಕವಾಗಿ ಆರ್ಡರ್ ಮಾಡಲ್ಪಟ್ಟ ಆಹಾರವಾಗಿದೆ.

Biryani is the most-ordered dish on Zomato in 2023.

author img

By ETV Bharat Karnataka Team

Published : Dec 25, 2023, 7:29 PM IST

ಮುಂಬೈ: ಜೊಮಾಟೊ 2023 ರಲ್ಲಿ ತನ್ನ ಫುಡ್ ಆರ್ಡರ್ ಟ್ರೆಂಡ್​ಗಳನ್ನು ಬಹಿರಂಗಪಡಿಸಿದ್ದು, ಈ ಬಾರಿಯೂ ಬಿರಿಯಾನಿಯೇ ಅತಿ ಜನಪ್ರಿಯ ಆಹಾರವಾಗಿ ಹೊರಹೊಮ್ಮಿದೆ. ಅತಿ ಹೆಚ್ಚು ಆರ್ಡರ್​ ಪಡೆದ ಆಹಾರಗಳ ಪೈಕಿ ಪಿಜ್ಜಾ 2ನೇ ಸ್ಥಾನದಲ್ಲಿದೆ. 2023ರಲ್ಲಿ ಜೊಮಾಟೊ ಪ್ಲಾಟ್​ಫಾರ್ಮ್​ನಲ್ಲಿ ಬಿರಿಯಾನಿಗಾಗಿ 10.09 ಕೋಟಿ ಆರ್ಡರ್ ಬಂದಿದ್ದರೆ, ಪಿಜ್ಜಾ 7.45 ಕೋಟಿ ಆರ್ಡರ್​ಗಳನ್ನು ಪಡೆದುಕೊಂಡಿದೆ.

2023ರಲ್ಲಿ ತಾನು ಡೆಲಿವರಿ ಮಾಡಿದ ಬಿರಿಯಾನಿಗಳನ್ನು ಒಟ್ಟಾಗಿ ಸುರಿದರೆ ದೆಹಲಿಯ ಕುತುಬ್ ಮಿನಾರ್​ಅನ್ನು ಎಂಟು ಬಾರಿ ತುಂಬಬಹುದು ಮತ್ತು ಪಿಜ್ಜಾಗಳು ಕೋಲ್ಕತ್ತಾದ ಐದಕ್ಕೂ ಹೆಚ್ಚು ಈಡನ್ ಗಾರ್ಡನ್ ಕ್ರಿಕೆಟ್ ಕ್ರೀಡಾಂಗಣಗಳ ಪ್ರದೇಶವನ್ನು ಆವರಿಸಬಹುದು ಎಂದು ಜೊಮಾಟೊ ಹೇಳಿದೆ.

ನೂಡಲ್ಸ್ ಬೌಲ್ಸ್ 4.55 ಕೋಟಿ ಆರ್ಡರ್​ಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಸ್ವಿಗ್ಗಿಯಿಂದ ಕೇಕ್ ರಾಜಧಾನಿ ಬಿರುದು ಪಡೆದ ಬೆಂಗಳೂರು 2023 ರಲ್ಲಿ ಜೊಮಾಟೊದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಬೆಳಗಿನ ತಿಂಡಿಗಳನ್ನು ಆರ್ಡರ್ ಮಾಡಿದೆ. ಏತನ್ಮಧ್ಯೆ, ದೆಹಲಿ ಬಳಕೆದಾರರು ಹೆಚ್ಚಾಗಿ ರಾತ್ರಿಯ ಊಟಗಳನ್ನು ಆರ್ಡರ್ ಮಾಡಿದ್ದಾರೆ.

ಜೊಮಾಟೊದ ವರ್ಷದ ಅತಿದೊಡ್ಡ ಆರ್ಡರ್ ಬೆಂಗಳೂರಿನಿಂದ ಬಂದಿದ್ದು, ಇಲ್ಲಿನ ಬಳಕೆದಾರರೊಬ್ಬರು 46,273 ರೂ.ಗಳ ಒಂದೇ ಆರ್ಡರ್ ಮಾಡಿದ್ದಾರೆ. ಏತನ್ಮಧ್ಯೆ, ಮುಂಬೈನ ಬಳಕೆದಾರರೊಬ್ಬರು ಕೇವಲ ಒಂದು ದಿನದಲ್ಲಿ 121 ಆರ್ಡರ್ ಗಳನ್ನು ನೀಡಿದ್ದಾರೆ. ಮತ್ತೋರ್ವ ಬೆಂಗಳೂರು ಬಳಕೆದಾರ ಜೊಮಾಟೊ ಮೂಲಕ 6.6 ಲಕ್ಷ ರೂ.ಗಳ ಮೌಲ್ಯದ 1,389 ಗಿಫ್ಟ್ ಆರ್ಡರ್ ಗಳನ್ನು ಕಳುಹಿಸಿದ್ದಾರೆ.

ಮುಂಬೈ ನಿವಾಸಿಗಳು ಅತ್ಯಧಿಕ ಆಹಾರ ಪ್ರಿಯರು ಎಂದು ಜೊಮಾಟೊ ಹೇಳಿದೆ. ಮುಂಬೈನ ಹನೀಸ್ ಹೆಸರಿನ ಬಳಕೆದಾರರು 2023 ರಲ್ಲಿ 3,580 ಆರ್ಡರ್​ ಮಾಡಿದ್ದಾರೆ. ಇದು ದಿನಕ್ಕೆ ಸರಾಸರಿ ಒಂಬತ್ತು ಆರ್ಡರ್​ ಆಗುತ್ತದೆ.

ಸ್ವಿಗ್ಗಿ ಕೂಡ ಇತ್ತೀಚೆಗೆ ತನ್ನ ವರ್ಷದ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿತ್ತು. ಸ್ವಿಗ್ಗಿಯಲ್ಲಿ ಕೂಡ ಬಿರಿಯಾನಿ ಸತತ 8 ವರ್ಷಗಳಿಂದ ಅತ್ಯಧಿಕ ಆರ್ಡರ್​ ಆಗುತ್ತಿರುವ ಆಹಾರವಾಗಿದೆ. 2023 ರಲ್ಲಿ ಸ್ವಿಗ್ಗಿಯಲ್ಲಿ ಪ್ರತಿ ಸೆಕೆಂಡಿಗೆ 2.5 ಬಿರಿಯಾನಿಗಳನ್ನು ಆರ್ಡರ್ ಮಾಡಲಾಗಿದೆ. ಹೈದರಾಬಾದ್​ನ ವ್ಯಕ್ತಿಯೊಬ್ಬರು ಈ ವರ್ಷ 1,633 ಬಿರಿಯಾನಿಗಳನ್ನು ಆರ್ಡರ್ ಮಾಡಿದ್ದಾರೆ. ಮುಂಬೈನ ವ್ಯಕ್ತಿಯೊಬ್ಬ ಸ್ವಿಗ್ಗಿಯಲ್ಲಿ ಈ ವರ್ಷ 42.3 ಲಕ್ಷ ರೂ. ಮೌಲ್ಯದ ಆಹಾರ ತರಿಸಿಕೊಂಡಿದ್ದಾನೆ.

ಇದನ್ನೂ ಓದಿ: ಜಿಯೋ ₹2,999 ಪ್ಲಾನ್ ವ್ಯಾಲಿಡಿಟಿ ಹೆಚ್ಚಳ: 389 ದಿನಗಳವರೆಗೆ ಪ್ರತಿದಿನ 2.5 ಜಿಬಿ ಡೇಟಾ ಆಫರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.