ನವದೆಹಲಿ: ಸಂಪತ್ತು ಸೃಷ್ಟಿಗೆ ಹೂಡಿಕೆ ಪ್ರಮುಖವಾಗಿದೆ. ಅತ್ಯಂತ ಅನುಭವಸ್ಥರು ಸಹ ಕೆಲವೊಮ್ಮೆ ತಮ್ಮ ಹೂಡಿಕೆಗೆ ನಿರೀಕ್ಷಿತ ಆದಾಯ ಬರುತ್ತಿಲ್ಲ ಎಂದು ಚಿಂತಿಸುತ್ತಾರೆ. ಇದು ಖಿನ್ನತೆಗೆ ಒಳಗಾಗಬಹುದು. ಹೀಗಾಗಿ ನೀವು ಸಹ ಹೂಡಿಕೆಯಲ್ಲಿ ನಷ್ಟ ಅನುಭವಿಸುತ್ತಿದ್ದರೆ ಈ ಮಾರ್ಗಗಳನ್ನು ಕಂಡುಕೊಳ್ಳಿ.
ಬದಲಾವಣೆ ಸೂಕ್ತ: ಹೂಡಿಕೆ ಮೇಲಿನ ಆದಾಯ ನಮ್ಮ ನಿರೀಕ್ಷೆಯಂತೆ ಬರದಿದ್ದಾಗ ತಪ್ಪಾಗಿದ್ದು ಎಲ್ಲಿ ಎಂಬುದು ಪರಿಶೀಲಸುವುದು ಸೂಕ್ತ. ನಿಮ್ಮ ಗುರಿಗಳು, ನಷ್ಟದ ಭಯ ಮತ್ತು ಸಮಯದ ಚೌಕಟ್ಟಿನ ಬಗ್ಗೆಯೂ ಎಚ್ಚರಿಕೆಯಿಂದ ಗಮನಿಸಬೇಕಿದೆ. ನಮ್ಮ ಹೂಡಿಕೆಯು ದೀರ್ಘಾವಧಿಯ ಗುರಿಗಳೊಂದಿಗೆ ಜೋಡಿಸಲ್ಪಟ್ಟಿದೆಯೇ? ಸೂಚ್ಯಂಕ ಇಳಿಮುಖವಾದಲ್ಲಿ ಅಪಾಯ ತಡೆದುಕೊಳ್ಳುವ ಸಾಮರ್ಥ್ಯ ನಮಗಿದೆಯಾ? ಎಂಬುದು ನಮ್ಮನ್ನ ನಾವೇ ಕೇಳಿಕೋಳ್ಳಬೇಕು. ನಿಮ್ಮ ಹೂಡಿಕೆಯು ನಿಮ್ಮ ಗುರಿಗಳನ್ನು ತಲುಪುತ್ತಿಲ್ಲ ಅಥವಾ ಹೆಚ್ಚು ನಷ್ಟ ಅನುಭವಿಸುತ್ತಿವೆ ಎಂದು ನೀವು ಭಾವಿಸಿದರೆ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳುವುದು ಅತ್ಯಂತ ಸೂಕ್ತವಾದ ಕೆಲಸವಾಗಿದೆ.
ನಿಮ್ಮ ಪೋರ್ಟ್ಪೊಲೀಯೋವನ್ನು ವೈವಿಧ್ಯಗೊಳಿಸಿ..: ನಿಮ್ಮ ಪೋರ್ಟ್‌ಫೋಲಿಯೊದಲ್ಲಿ ಯಾವ ರೀತಿಯ ಹೂಡಿಕೆಗಳಿವೆ ಎಂಬುದನ್ನು ನೋಡಿ. ಹೂಡಿಕೆಗಳನ್ನು ಸಮರ್ಪಕವಾಗಿ ವೈವಿಧ್ಯಗೊಳಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಹಣವನ್ನು ವಿವಿಧ ಹೂಡಿಕೆಯ ಮಾರ್ಗಗಳಿಗೆ ತಿರುಗಿಸುವ ಮೂಲಕ ನಷ್ಟದ ಸಾಧ್ಯತೆಗಳನ್ನು ಕಡಿಮೆ ಮಾಡಿಕೊಳ್ಳುವುದರತ್ತ ಮೊದಲ ಆದ್ಯತೆ ನೀಡಿ. ನಿಮ್ಮ ಪೋರ್ಟ್‌ಫೋಲಿಯೋ ಸರಿಯಾಗಿ ವೈವಿಧ್ಯವಾಗಿಲ್ಲ ಎಂದು ನೀವು ಕಂಡು ಕೊಂಡರೆ ಅದನ್ನು ತಕ್ಷಣವೇ ಮರು ಸಮತೋಲನಗೊಳಿಸಿ. ನಿಮ್ಮ ಹೂಡಿಕೆಯ ಅಪಾಯವನ್ನು ನಿರ್ಣಯಿಸಲು, ಹೊಸ ಹೂಡಿಕೆಗಳನ್ನು ಸೇರಿಸಲು ಮತ್ತು ಉತ್ತಮ ಆದಾಯ ಪಡೆಯಲು ಇದು ಉತ್ತಮ ಸಮಯ ಎಂದು ಗುರುತಿಸಿ ಮುಂದಕ್ಕೆ ಸಾಗಿ..
ವಿಶ್ಲೇಷಿಸುವುದು ಒಳ್ಳೆಯದು: ಹೂಡಿಕೆಯು ನಿರೀಕ್ಷಿತ ಆದಾಯ ತಂದು ಕೊಡದಿದ್ದಾಗ ಗುರುತಿಸುವುದು ಮತ್ತು ವಿಶ್ಲೇಷಿಸುವುದು ಬಹಳ ಮುಖ್ಯ. ಇದರ ಹಿಂದಿನ ಕಾರಣ ಪರಿಶೀಲಿಸಬೇಕು. ನಿಮ್ಮ ನಿಯಂತ್ರಣದ ಹೊರಗಿನ ಅಂಶಗಳಿಂದ ಆದಾಯವು ಕಡಿಮೆಯಾಗುತ್ತಿದ್ದರೆ ನೀವು ಮಾಡಬಹುದಾದದ್ದು ಕಡಿಮೆಯೇ ಸರಿ. ಉದಾಹರಣೆಗೆ, ಸರ್ಕಾರ ತೆಗೆದುಕೊಳ್ಳುವ ಯಾವುದೇ ನಿರ್ಧಾರದಿಂದ ನಿಮ್ಮ ಆದಾಯ ಕಡಿಮೆಯಾದರೆ, ನೀವು ಏನೂ ಮಾಡಲು ಸಾಧ್ಯವಿಲ್ಲ. ಅಥವಾ ಅಂತಾರಾಷ್ಟ್ರೀಯ ಕಾರಣಗಳಿಂದ ಮಾರುಕಟ್ಟೆ ಏರಿಳಿತಗೊಂಡು ಆದಾಯ ಕಡಿಮೆಯಾದರೆ ನಮ್ಮ ಕೈಯಲ್ಲಿ ಏನೂ ಇರುವುದಿಲ್ಲ. ಆ ಸಂದರ್ಭದಲ್ಲಿ, ಮಾರುಕಟ್ಟೆಗಳು ಚೇತರಿಸಿಕೊಳ್ಳಲು ಮತ್ತು ಸಾಮಾನ್ಯ ಸ್ಥಿತಿಗೆ ಮರಳಲು ನಾವು ಕಾಯುವುದು ಅನಿವಾರ್ಯವಾಗಲಿದೆ. ಅಥವಾ ದುರ್ಬಲ ವ್ಯವಹಾರ ಮಾದರಿ ಅಥವಾ ನಮ್ಮ ತಪ್ಪು ನಿರ್ಧಾರದಿಂದ ಲಾಭವು ಉತ್ತಮವಾಗಿರದಿದ್ದರೆ.. ತಕ್ಷಣವೇ ನಾವು ಹೂಡಿಕೆಯನ್ನು ಬೇರೆ ದಾರಿಗೆ ತಿರುಗಿಸಬೇಕು.
ಅನುಭವಿಗಳ ಸಲಹೆ..: ನಿಮ್ಮ ಹೂಡಿಕೆಗಳು ಏಕೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ನಿಮಗೆ ಖಚಿತವಿಲ್ಲದಿದ್ದಾಗ ವೃತ್ತಿಪರ ಸಲಹೆಯನ್ನು ಪಡೆಯುವುದು ಉತ್ತಮ. ಅವರು ನಿಮ್ಮ ಹೂಡಿಕೆಯ ನ್ಯೂನತೆಗಳನ್ನು ನಿಕಟವಾಗಿ ಪರೀಕ್ಷಿಸಲು ಮತ್ತು ಸಲಹೆ ನೀಡಲು ಸಾಧ್ಯವಾಗುತ್ತದೆ. ನಿಮ್ಮ ಹೂಡಿಕೆಯ ಉದ್ದೇಶಗಳು ಮತ್ತು ಅಪಾಯಕ್ಕೆ ಹೊಂದಿಕೆಯಾಗುವ ಇತರ ಹೂಡಿಕೆ ಅವಕಾಶಗಳನ್ನು ಗುರುತಿಸಲು ಅವರು ನಿಮಗೆ ಸಹಾಯ ಮಾಡುತ್ತಾರೆ.
ತಾಳ್ಮೆ ಬಹುಮುಖ್ಯ: ಹೂಡಿಕೆಯು ದೀರ್ಘಾವಧಿಯ ತಂತ್ರ ಎಂದು ಅರಿತುಕೊಳ್ಳಿ. ಆದಾಯ ಕಡಿಮೆಯಾದಾಗ ಗಾಬರಿಯಾಗಬೇಡಿ ಮತ್ತು ಅವಸರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ತಾಳ್ಮೆಯಿಂದಿರುವುದು ಬಹಳ ಮುಖ್ಯ. ನಿಮ್ಮ ಹೂಡಿಕೆ ತಂತ್ರಗಳನ್ನು ನೀವು ಮತ್ತೊಮ್ಮೆ ಪರಿಶೀಲಿಸಬೇಕು. ಅತ್ಯುತ್ತಮ ಹೂಡಿಕೆ ತಂತ್ರಗಳು ಸಹ ಅಲ್ಪಾವಧಿಯ ಹಿನ್ನಡೆಯನ್ನು ಅನುಭವಿಸುತ್ತವೆ ಎಂಬುದನ್ನು ನೆನಪಿನಲ್ಲಿಡಬೇಕು. ಹೆಚ್ಚಿನ ಹೂಡಿಕೆ ಸಾಧನಗಳು ದೀರ್ಘಾವಧಿಯಲ್ಲಿ ಉತ್ತಮ ಆದಾಯವನ್ನು ನೀಡುತ್ತವೆ.
ಓದಿ: 15 ವರ್ಷದಿಂದ ಸಿಕ್ ಲೀವ್, ₹55 ಲಕ್ಷ ಸಂಬಳ: ಆದ್ರೂ ಕಂಪನಿ ವಿರುದ್ಧ ಕೇಸ್ ಜಡಿದ ಉದ್ಯೋಗಿ!