ETV Bharat / business

ಅಲ್ಪಾವಧಿ ಹೂಡಿಕೆಗಳ ಆಯ್ಕೆ ಮಾಡುವಾಗ ಎಚ್ಚರಿಕೆ ಅಗತ್ಯ.. ಏಕೆ ಅಂತೀರಾ? - ಅಲ್ಪಾವಧಿಯ ಹೂಡಿಕೆದಾರರು

ಪ್ರಸ್ತುತ ದಿನಗಳಲ್ಲಿ ಹೆಚ್ಚುತ್ತಿರುವ ಬಡ್ಡಿದರಗಳನ್ನು ಪರಿಗಣಿಸಿ, ಅಲ್ಪಾವಧಿಯ ಹೂಡಿಕೆದಾರರು ಸರಿಯಾದ ಆಯ್ಕೆಗಳನ್ನು ಮಾಡಲು ಜಾಗರೂಕತೆ ಅಗತ್ಯವಿದೆ. ಸೂಕ್ತ ಆಯ್ಕೆ ಮಾತ್ರ ಕಷ್ಟಪಟ್ಟು ಗಳಿಸಿದ ಹಣ ಯಾವುದೇ ನಷ್ಟವಾಗದೇ ಗ್ಯಾರಂಟಿ ರಿಟರ್ನ್ ಗಳನ್ನು ಪಡೆಯಲು ಅವಕಾಶವಿದೆ.

short term investment
ಅಲ್ಪಾವಧಿಯ ಹೂಡಿಕೆ
author img

By

Published : Nov 10, 2022, 5:37 PM IST

ಹೈದರಾಬಾದ್: ಹೂಡಿಕೆದಾರರು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಬಡ್ಡಿದರಗಳನ್ನು ಪರಿಗಣಿಸಿ ತಮ್ಮ ಆಯ್ಕೆಗಳನ್ನು ಮಾಡುವಲ್ಲಿ ಅತ್ಯಂತ ಜಾಗರೂಕರಾಗಿರಬೇಕು. ವಿಶೇಷವಾಗಿ ಒಂದರಿಂದ ಐದು ವರ್ಷಗಳ ಅಲ್ಪಾವಧಿಯ ಹೂಡಿಕೆಯನ್ನು ಮಾಡುವಾಗ ಎಚ್ಚರಿಕೆಯಿಂದ ಸರಿಯಾದ ಯೋಜನೆಗಳನ್ನೆ ಆಯ್ಕೆ ಮಾಡಬೇಕು. ಆಗ ಮಾತ್ರ ಕಷ್ಟಪಟ್ಟು ಗಳಿಸಿದ ಹಣಕ್ಕೆ ಯಾವುದೇ ನಷ್ಟವಾಗದೆ ಗ್ಯಾರಂಟಿ ರಿಟರ್ನ್​​​​​ಗಳನ್ನು ಪಡೆಯಲು ಸಾಧ್ಯವಾಗುತ್ತದೆ.

ಅಲ್ಪಾವಧಿಯ ಹೂಡಿಕೆಯ ಆಯ್ಕೆ ಬಹಳ ಮುಖ್ಯ: ಹೂಡಿಕೆ ಯೋಜನೆಗಳನ್ನು ಆಯ್ಕೆ ಮಾಡುವ ಮೊದಲು ಪ್ರತಿಯೊಬ್ಬ ಹೂಡಿಕೆದಾರನು ತಮ್ಮ ಒಟ್ಟಾರೆ ಅಗತ್ಯಗಳನ್ನು ಪರಿಗಣಿಸಿ ನಂತರ ಆರ್ಥಿಕ ಗುರಿಗಳನ್ನು ಸಿದ್ದಪಡಿಸಿಕೊಳ್ಳಬೇಕು. ದೀರ್ಘಕಾಲೀನ ಯೋಜನೆಗಳು ಉತ್ತಮ ಆದಾಯ ನೀಡುತ್ತವೆ. ಆದರೆ, ಅಲ್ಪಾವಧಿಯ ಹೂಡಿಕೆಗಳು ನಮಗೆ ಅಗತ್ಯವೆನಿಸಿದಾಗಲೆಲ್ಲಾ ಹಣ ಹಿಂತೆಗೆದುಕೊಳ್ಳುವ ಸೌಲಭ್ಯವನ್ನು ಒದಗಿಸುತ್ತವೆ. ಆದ್ದರಿಂದ ಸುರಕ್ಷಿತ ಅಲ್ಪಾವಧಿ ಹೂಡಿಕೆಗಳನ್ನು ಮಾತ್ರ ಆಯ್ಕೆ ಮಾಡುವುದು ಬಹಳ ಮುಖ್ಯವಾಗುತ್ತದೆ.

'ಲಿಕ್ವಿಡ್ ಫಂಡ್‌ಗಳು' ಒಂದು ರೀತಿಯ ಆಕಸ್ಮಿಕ ನಿಧಿಯಾಗಿದೆ ಇದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದರಿಂದ ಅಲ್ಪಾವಧಿಯ ಹೂಡಿಕೆಗೆ ಆಯ್ಕೆ ಮಾಡಕೊಳ್ಳಬಹುದಾಗಿದೆ. ಬ್ಯಾಂಕ್​ಗಳ ಉಳಿತಾಯ ಠೇವಣಿಗಳಿಗೆ ಹೋಲಿಸಿದರೆ ಈ ಹೂಡಿಕೆಯು ಸ್ವಲ್ಪ ಉತ್ತಮ ಆದಾಯ ನೀಡುತ್ತದೆ. ಲಿಕ್ವಿಡ್ ಫಂಡ್‌ಗಳನ್ನು ಸುರಕ್ಷಿತ ಹೂಡಿಕೆ ಆಗಿದೆ. ಹೂಡಿಕೆಯ ದಿನಾಂಕದಿಂದ ಯಾವುದೇ ಸಮಯದಲ್ಲಿ ಹಣ ಹಿಂಪಡೆಯಬಹುದು. ಹಿಂಪಡೆಯುವಾಗ ತೆರಿಗೆಯ ಕಳೆದು ನಾಲ್ಕರಿಂದ ಏಳು ಶೇಕಡಾದಷ್ಟು ಬಡ್ಡಿ ಪಡೆಯಬಹುದು.

ಲಾಭದಾಯಕ ಹೂಡಿಕೆಗೆ ಹಲವು ದಾರಿ: ಲಿಕ್ವಿಡ್ ಫಂಡ್​​ಗಳ ಅವಧಿಯು ಒಂದರಿಂದ 90 ದಿನಗಳವರೆಗೆ ಇರುತ್ತದೆ. ಅತ್ಯಂತ ಗಮನಾರ್ಹ ಅಂಶ ಎಂದರೆ ಲಿಕ್ವಿಡ್ ಫಂಡ್​​ಗಳ ಎನ್ಎವಿ ಸ್ಥಿರವಾಗಿದ್ದು, ಇದು ಅಪರೂಪದ ಸಂದರ್ಭಗಳಲ್ಲಿ ಮಾತ್ರ ಕಡಿಮೆಯಾಗುತ್ತದೆ. ಈ ಹೂಡಿಕೆ ಷೇರುಗಳನ್ನು ಮಾರಾಟ ಮಾಡಿದ ಎರಡ ರಿಂದ ಮೂರು ದಿನಗಳಲ್ಲಿ ನಮ್ಮ ಖಾತೆಗೆ ಹಣ ಜಮಾ ಮಾಡಲಾಗುತ್ತದೆ. ಇದು ಹೂಡಿಕೆದಾರರ ಸ್ನೇಹಿಯಾಗಿರುವುದು ಇದರ ಮತ್ತೊಂದು ವೈಶಿಷ್ಟ್ಯವಾಗಿದೆ.

ಇದೆ ರೀತಿ 'ಅಲ್ಟ್ರಾ ಶಾರ್ಟ್ ಪೀರಿಯಡ್ ಫಂಡ್' ಗಳಿವೆ. ಇದರಲ್ಲಿ ಹೂಡಿಕೆಗಳನ್ನು ಕೇವಲ ಮೂರರಿಂದ ಆರು ತಿಂಗಳವರೆಗೆ ಮಾಡಬಹುದು. ಈ ಅಲ್ಟ್ರಾ ಶಾರ್ಟ್ ಫಂಡ್ ಗಳು ಕಂಪನಿಗಳಿಗೆ ಸಾಲವನ್ನೂ ಒದಗಿಸುತ್ತವೆ. ಈ ಕಾರಣದಿಂದಾಗಿ ಲಿಕ್ವಿಡ್ ಫಂಡ್​​ಗಳಿಗೆ ಹೋಲಿಸಿದರೆ ಈ ಅಲ್ಟ್ರಾ ಶಾರ್ಟ್ ಫಂಡ್​ಗಳಲ್ಲಿ ಸ್ವಲ್ಪ ಅಪಾಯವಿರುತ್ತದೆ. ಆದರೆ, ಬ್ಯಾಂಕುಗಳಲ್ಲಿನ ಸ್ಥಿರ ಠೇವಣಿಗಳಿಗೆ ಹೋಲಿಸಿದರೆ ಅಲ್ಟ್ರಾ ಶಾರ್ಟ್ ಹೂಡಿಕೆಗಳು ಸಮಾನ ಅಥವಾ ಸ್ವಲ್ಪ ಹೆಚ್ಚಿನ ಆದಾಯವನ್ನು ನೀಡುತ್ತವೆ.

ಈಕ್ವಿಟಿಗಳು ಮತ್ತು ಫ್ಯೂಚರ್ ಗಳಲ್ಲಿ ಹೂಡಿಕೆ ಮಾಡುವ ಮೂಲಕ ಸ್ವಲ್ಪ ಹೆಚ್ಚಿನ ಆದಾಯವನ್ನು ಗಳಿಸುವ ಗುರಿಯನ್ನು ಹೊಂದಿರುವವರು 'ಮಧ್ಯಸ್ಥಿಕೆ ನಿಧಿ'ಗಳಿಗೆ ಆದ್ಯತೆ ನೀಡಬಹುದು. ಇವುಗಳು ಸುಮಾರು ಎಂಟ ರಿಂದ ಒಂಬತ್ತು ಪ್ರತಿಶತದಷ್ಟು ವಾರ್ಷಿಕ ಆದಾಯ ನೀಡಬಹುದಾಗಿವೆ. ಈಕ್ವಿಟಿ ಫಂಡ್ ಗಳನ್ನು ನಿಯಂತ್ರಿಸುವ ಅದೇ ನಿಯಮಗಳು ಈ ಫಂಡ್ ಗಳ ಮೂಲಕ ಗಳಿಸುವ ಲಾಭಗಳಿಗೆ ಅನ್ವಯವಾಗುತ್ತವೆ. ಹೂಡಿಕೆದಾರರು ತಮ್ಮ ಹಣವನ್ನು ಈ ಮಧ್ಯಸ್ಥಿಕೆ ನಿಧಿಗಳಲ್ಲಿ ಮೂರ ರಿಂದ ಐದು ವರ್ಷಗಳವರೆಗೆ ಇರಿಸಬಹುದಾಗಿದೆ.

ಹೂಡಿಕೆದಾರರು ಕಡಿಮೆ ಅಪಾಯದ ಅಂಶವನ್ನು ಹೊಂದಿರುವ ಮ್ಯೂಚುವಲ್ ಫಂಡ್​ಗಳಲ್ಲಿ ಒಂದಾಗಿರುವ 'ಮನಿ ಮಾರ್ಕೆಟ್ ಫಂಡ್'ಗಳಿಗೆ ಹೂಡಿಕೆ ಮಾಡಬಹುದು. ಈ ನಿಧಿಗಳು ಸರ್ಕಾರಿ ಸೆಕ್ಯುರಿಟಿಗಳಲ್ಲಿ ಹೂಡಿಕೆ ಮಾಡುತ್ತವೆ. ಮೂರು ತಿಂಗಳಿ ನಿಂದ ಒಂದು ವರ್ಷದ ಅವಧಿಗೆ ಹೂಡಿಕೆ ಮಾಡಲು ಇವು ಸೂಕ್ತವಾಗಿವೆ. ಹೆಚ್ಚಿನ ತೆರಿಗೆ ಸ್ಲ್ಯಾಬ್ ಗಳಲ್ಲಿರುವವರು ಸ್ಥಿರ ಠೇವಣಿಗಳಿಗೆ ಪರ್ಯಾಯವಾಗಿ ಈ ಮನಿ ಮಾರ್ಕೆಟ್ ಫಂಡ್ ಗಳನ್ನು ಆಯ್ಕೆ ಮಾಡಬಹುದು.

ಇದನ್ನೂ ಓದಿ:Gold Silver Price: ರಾಜ್ಯದ ಪ್ರಮುಖ ನಗರಗಳಲ್ಲಿನ ಚಿನ್ನಾಭರಣ ಬೆಲೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.