ಹೈದರಾಬಾದ್: ಪ್ರತಿ ತಿಂಗಳ ತಪ್ಪದೇ ಪ್ರಿಮಿಯಂಗಳನ್ನ ಕಟ್ಟಿ, ಮನೆಯ ಎಲ್ಲ ಕುಟುಂಬ ಸದಸ್ಯರ ಆರೋಗ್ಯ ವಿಮೆ ಮಾಡುವ ಮೂಲಕ ಅವರನ್ನು ಸುರಕ್ಷಿತವಾಗಿರಿಸುತ್ತೇವೆ. ಆದರೆ, ಕೆಲವೊಂದು ತಪ್ಪಿನಿಂದಾಗಿ ವೈದ್ಯಕೀಯ ತುರ್ತು ಪರಿಸ್ಥಿತಿ ವೇಳೆ ವಿಮಾ ಕಂಪನಿಗಳು ನಿಮ್ಮ ಕ್ಲೈಮ್ ಅನ್ನು ಒಪ್ಪುವುದಿಲ್ಲ. ಇದಕ್ಕೆ ಯಾರು ಹೊಣೆಯಾಗುತ್ತಾರೆ? ಆರೋಗ್ಯ ವಿಮೆ ಒಪ್ಪಂದದ ವೇಳೆ ಮಾಡುವ ಸಣ್ಣ ತಪ್ಪಿಗೆ ವಿಮೆದಾರರು ಆರ್ಥಿಕ ನಷ್ಟ ಅನುಭವಿಸುವಂತೆ ಆಗುತ್ತದೆ.
ವಿಮಾದಾರರು ಮತ್ತು ಕಂಪನಿಗಳ ನಡುವಿನ ನಂಬಿಕೆಯನ್ನು ಈ ವಿಮೆಗಳು ಹೊಂದಿರುತ್ತವೆ. ಈ ನಂಬಿಕೆಗಳು ಪಾಲಿಸಿಯ ಕೆಲವು ನಿಯಮ ಮತ್ತು ಷರತ್ತು ಮೇಲೆ ಅವಲಂಬಿತವಾಗಿರುತ್ತದೆ. ಅನೇಕ ಬಾರಿ ವಿಮೆದಾರರು ಅರ್ಜಿ ಭರ್ತಿ ಮಾಡುವಾಗ ನಿರ್ಲಕ್ಷ್ಯ ವಹಿಸುತ್ತಾರೆ. ತಿಳಿದೋ, ತಿಳಿಯದೋ ಅವರು ಅಪೂರ್ಣ ಮಾಹಿತಿ ಪಡೆದುಕೊಂಡಿರುತ್ತಾರೆ ಇಲ್ಲವೇ ಅವರು ನೀಡುತ್ತಾರೆ.
ಈ ಸಣ್ಣ ತಪ್ಪುಗಳು ದುಬಾರಿಯಾಗುತ್ತವೆ. ಹೆಸರುಗಳ ಅಕ್ಷರಗಳ ತಪ್ಪದ ಬಳಕೆ, ಸರಿಯಾದ ವಯಸ್ಸು ನಮೂದಿಸದೇ ಇರುವುದು, ಧೂಮಪಾನ ಅಭ್ಯಾಸ, ವಾರ್ಷಿಕ ಆದಾಯದ ಮಾಹಿತಿ ತಿಳಿಸದಿರುವುದು ಆ ತಪ್ಪಿಗೆ ಉದಾಹರಣಗಳಾಗಿವೆ.
ಯಾವುದೇ ಮುಚ್ಚು ಮರೆ ಬೇಡ: ವಿಮೆ ಮಾಡಿಸುವ ವೇಳೆ ನಿಮ್ಮ ವೈದ್ಯಕೀಯ ಇತಿಹಾಸದ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು. ಬಹುತೇಕ ಜನರು, ಅನೇಕ ಮಾಹಿತಿ ನೀಡಿದರೂ ವಿಮೆಯಲ್ಲಿ ಪ್ರೀಮಿಯಂ ಹೆಚ್ಚಿನ ಮಟ್ಟದಲ್ಲಿ ಅನ್ವಯಿಸಲಾಗುತ್ತದೆ ಎಂದು ನಂಬಿರುತ್ತದೆ. ನಿಮ್ಮ ವೈದ್ಯಕೀಯ ಮಾಹಿತಿಯನ್ನು ಮರೆಮಾಚಿ ವಿಮೆ ಪಡೆಯಬಹುದಾಗಿರುವುದರಿಂದ ಯಾವುದೇ ಸಮಸ್ಯೆ ಇಲ್ಲ. ಧೂಮಾಪಾನ ಕುರಿತು ಉಲ್ಲೇಖ ಮಾಡದಿದ್ದರೆ, ನೀವು ಮೋಸ ಮಾಡಿದ್ದೀರಾ ಎಂದು ಕಂಪನಿ ಕ್ಲೈಮ್ ಮಾಡಬಹುದು. ಈ ಹಿನ್ನೆಲೆಯಲ್ಲಿ ಆರೋಗ್ಯ ಕುರಿತ ಸಂಪೂರ್ಣ ಮಾಹಿತಿ ಬಹಿರಂಗಪಡಿಸಬೆಕು.
ಪಾಲಿಸಿ ರಿನ್ಯೂವಲ್ ಬಗ್ಗೆಯೂ ಇರಲಿ ಗಮನ: ಕಂಪನಿಗಳು ಒಂದು ತಿಂಗಳ ಮುಂಚೆಯೇ ವಿಮೆದಾರರಿಗೆ ಪಾಲಿಸಿ ಕುರಿತು ಅಲರ್ಟ್ ಮಾಡುತ್ತದೆ. ಸಾಮಾನ್ಯವಾಗಿ ಅವಧಿ ಮೀರಿದ ಬಳಿಕವೂ ರಿನ್ಯೂವಲ್ ಮಾಡಲು 30 ದಿನಗಳ ಕಾಲಾವಕಾಶ ಇರುತ್ತದೆ. ಈ ಸಮಯ ಮೀರಿದಾಗ ನೀವು ಕೆಲವು ಲಾಭಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ.
ಹೊಸ ಪಾಲಿಸಿ ಪಡೆದ ಬಳಿಕ 30 ದಿನಗಳ ವೈಟಿಂಗ್ ಪಿರಿಯಡ್ ಇರುತ್ತದೆ. ಈ ಸಮಯದಲ್ಲಿ ಅಪಘಾತವಾಗಿ ಆಸ್ಪತ್ರೆ ದಾಖಲಾದಲ್ಲಿ ಮಾತ್ರ ವೈದ್ಯಕೀಯ ವೆಚ್ಚವನ್ನು ಕಂಪನಿ ನೀಡುತ್ತದೆ. ಕ್ರಿಟಿಕಲ್ ಇಲ್ನೆಸ್ ಕವರೇಜ್ನಲ್ಲಿ ರೋಗಪತ್ತೆಯಾಗಿ 30 ದಿನವಾದ ಬಳಿಕವೇ ವಿಮೆ ಕ್ಲೈಮ್ ಮಾಡಬಹುದಾಗಿದೆ. ಕೆಲವು ಪೂರ್ವ ಅಸ್ತಿತ್ವದಲ್ಲಿರುವ ಕಾಯಿಲೆಗಳಿಗೆ 2-4 ವರ್ಷಗಳ ಕಾಯುವ ಸಮಯವನ್ನು ಪರಿಗಣಿಸಲಾಗುತ್ತದೆ. ಈ ವೇಳೆ, ಈ ಪರಿಹಾರವು ಲಭ್ಯ ಆಗದೇ ಇರಬಹುದು. ಆದ್ದರಿಂದ, ಅಂತಹ ಹೊರಗಿಡುವಿಕೆಗಳಿಗೆ ವಿವರಗಳನ್ನು ನೀಡಬೇಕಾಗುತ್ತದೆ. ಈ ಎಲ್ಲ ವಿವರಗಳ ಬಗ್ಗೆ ಪಾಲಿಸಿ ತೆಗೆದುಕೊಳ್ಳುವಾಗ ಸರಿಯಾಗಿ ಗಮನಿಸಬೇಕಾಗುತ್ತದೆ.
ನಿಯಮ- ಷರತ್ತು ಸರಿಯಾಗಿ ಓದಿ: ವಿಮೆ ಅಥವಾ ಸ್ಕೀಂ ಪಡೆಯುವ ಮುನ್ನ ಅದರ ನಿಯಮ ಮತ್ತು ಷರತ್ತುಗಳನ್ನು ಸಂಪೂರ್ಣವಾಗಿ ತಿಳಿಯಬೇಕು. ಈ ಎಲ್ಲ ಪಾಲಿಸಿ ದಾಖಲತಿಗಳನ್ನು ಎರಡು ಬಾರಿಯಾದರೂ ಪರಿಶೀಲಿಸಬೇಕು. ಯಾವುದಕ್ಕೇ ಏನು ಅನ್ವಯವಾಗುವುದಿಲ್ಲ ಎಂಬುದರ ಕುರಿತು ಎಲ್ಲ ವಿಮಾ ಕಂಪನಿಗಳು ತಮ್ಮದೇ ಆದ ನಿಯಮ ಮತ್ತು ಷರತ್ತುಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿರುತ್ತದೆ. ಅವುಗಳ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ಹೊಂದಿರಬೇಕು.
ಇವುಗಳ ಬಗ್ಗೆ ಬಹುತೇಕರು ನಿರ್ಲಕ್ಷ್ಯಿಸುತ್ತಾರೆ. ಬಳಿಕ ಕ್ಲೈಮ್ ತಿರಸ್ಕೃತವಾದಾಗ ಇದರ ಸಮಸ್ಯೆ ಅನುಭವಿಸುತ್ತಾರೆ. ಭವಿಷ್ಯದಲ್ಲಿ ಆಗುವ ಈ ತಪ್ಪುಗಳನ್ನು ತಡೆಯಲು ಮುಂಚೆಯೇ ಜಾಗ್ರತೆವಹಿಸುವುದು ಅವಶ್ಯ.
ಮೊದಲೇ ಮಾಹಿತಿ ನೀಡಿ: ಮೆಡಿಕಲ್ ಕ್ಲೈಮ್ಗಳು ತಿರುಸ್ಕೃತವಾಗಲು ಮತ್ತೊಂದು ಕಾರಣ ಎಂದರೆ ನಿಗದಿತ ಅವಧಿ ಕುರಿತು ವಿಮೆದಾರರು ಕಂಪನಿಗಳಿಗೆ ಮಾಹಿತಿ ನೀಡಲು ವಿಫಲವಾಗುವುದು. ಅಪಘಾತದಂತಹ ತುರ್ತು ಪರಿಸ್ಥಿತಿಯಲ್ಲಿ ಆರೋಗ್ಯ ವಿಮೆ ಕಂಪನಿಗಳಿಗೆ ಕ್ಲೈಮ್ ಮಾಡಲು 24ರಿಂದ 48ಗಂಟೆಯೊಳಗೆ ಮಾಹಿತಿ ನೀಡಬೇಕು. ಅವರಿಗೆ ಸಾಧ್ಯವಾಗದಿದ್ದರೆ, ಅವರ ನಾಮಿನಿಗಳು ಕೂಡಲೇ ಸಂಸ್ಥೆಗೆ ಸರಿಯಾದ ಸಮಯಕ್ಕೆ ಮಾಹಿತಿ ನೀಡಬೇಕು. ಆಗ ಮಾತ್ರ ಸೂಕ್ತ ಪರಿಹಾರಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಹೀಗಾಗಿ ವಿಮೆ ಮಾಡಿಸುವಾಗ ಆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡಿರಬೇಕು.
ಇದನ್ನೂ ಓದಿ: ಜಾಣತನದಿಂದ ಆರೋಗ್ಯ ವಿಮೆ ಆಯ್ಕೆ ಮಾಡಿ: ಖರ್ಚುಗಳಿಂದ ರಕ್ಷಿಸಿಕೊಳ್ಳಿ!