ETV Bharat / business

ಡಿಜಿಟಲ್​ ರೂಪಾಯಿ ಎಂದರೇನು? ಅದರ ಕಾರ್ಯನಿರ್ವಹಣೆ ಹೇಗಿರುತ್ತೆ.. ಇಲ್ಲಿದೆ ಉಪಯುಕ್ತ ಮಾಹಿತಿ! - ಬಿಟ್‌ಕಾಯಿನ್ ಗಿಂತ ಭಿನ್ನ

ಡಿಜಿಟಲ್ ರೂಪಾಯಿ ಎಂದರೇನು?: ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC) ಅಥವಾ ಡಿಜಿಟಲ್ ರೂಪಾಯಿ ಎಂಬುದು ಕೇಂದ್ರೀಯ ಬ್ಯಾಂಕ್ ನೀಡುವ ಕರೆನ್ಸಿ ನೋಟುಗಳ ಡಿಜಿಟಲ್ ರೂಪವಾಗಿದೆ.

what-is-digital-rupee-know-the-answer-to-every-question
ಡಿಜಿಟಲ್​ ರೂಪಾಯಿ ಎಂದರೇನು? ಅದರ ಕಾರ್ಯನಿರ್ವಹಣೆ ಹೇಗಿರುತ್ತೆ
author img

By

Published : Nov 1, 2022, 10:18 PM IST

ನವದೆಹಲಿ: ಭಾರತದ ಮೊದಲ ಡಿಜಿಟಲ್ ರೂಪಾಯಿ ಪೈಲಟ್ ಯೋಜನೆ ಇಂದಿನಿಂದ ಆರಂಭವಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಇಂದು ನವೆಂಬರ್ 1 ರಂದು ಸಗಟು ವಿಭಾಗದಲ್ಲಿ ಕೇಂದ್ರ ಬ್ಯಾಂಕ್ ಬೆಂಬಲಿತ ಡಿಜಿಟಲ್ ರೂಪಾಯಿಗೆ ಪ್ರಾಯೋಗಿಕವಾಗಿ ಚಾಲನೆ ನೀಡಿದೆ.

ಡಿಜಿಟಲ್ ರೂಪಾಯಿ - ಚಿಲ್ಲರೆ ವಿಭಾಗದಲ್ಲಿ ಮೊದಲ ಪೈಲಟ್ ಅನ್ನು ಗ್ರಾಹಕರು ಮತ್ತು ವ್ಯಾಪಾರಿಗಳ ನಿಕಟ ಬಳಕೆದಾರರ ಗುಂಪುಗಳಲ್ಲಿ ಆಯ್ದ ಸ್ಥಳಗಳಲ್ಲಿ ಒಂದು ತಿಂಗಳೊಳಗೆ ಪ್ರಾರಂಭಿಸಲು ಯೋಜಿಸಲಾಗಿದೆ ಎಂದು RBI ಘೋಷಿಸಿದೆ.

ಒಂಬತ್ತು ಬ್ಯಾಂಕ್ ಗುರುತಿಸಲಾಗಿದೆ: ಡಿಜಿಟಲ್ ರೂಪಾಯಿ ಸಗಟು ವಿಭಾಗದಲ್ಲಿ ಆರಂಭಿಸಲಾಗುತ್ತಿರುವ ಪ್ರಾಯೋಗಿಕ ಯೋಜನೆಗೆ ಒಂಬತ್ತು ಬ್ಯಾಂಕ್ ಗಳನ್ನು ಗುರುತಿಸಲಾಗಿದೆ. ಈ ಒಂಬತ್ತು ಬ್ಯಾಂಕ್‌ಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಯೆಸ್ ಬ್ಯಾಂಕ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಮತ್ತು ಎಚ್‌ಎಸ್‌ಬಿಸಿ ಎಂದು ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಡಿಜಿಟಲ್ ರೂಪಾಯಿ ಎಂದರೇನು?: ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC) ಅಥವಾ ಡಿಜಿಟಲ್ ರೂಪಾಯಿ ಎಂಬುದು ಕೇಂದ್ರೀಯ ಬ್ಯಾಂಕ್ ನೀಡುವ ಕರೆನ್ಸಿ ನೋಟುಗಳ ಡಿಜಿಟಲ್ ರೂಪವಾಗಿದೆ. ಡಿಜಿಟಲ್ ಕರೆನ್ಸಿ ಅಥವಾ ರೂಪಾಯಿ ಹಣದ ಎಲೆಕ್ಟ್ರಾನಿಕ್ ರೂಪವಾಗಿರುತ್ತದೆ. ಇದನ್ನು ಸಂಪರ್ಕವಿಲ್ಲದ ವಹಿವಾಟುಗಳಲ್ಲಿ ಬಳಸಬಹುದು. ಕೇಂದ್ರ ಬಜೆಟ್ 2022 ಅನ್ನು ಪ್ರಸ್ತುತಪಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಆರ್‌ಬಿಐ ಶೀಘ್ರದಲ್ಲೇ ತನ್ನದೇ ಆದ ಡಿಜಿಟಲ್ ಕರೆನ್ಸಿ ಪ್ರಾರಂಭಿಸಲಿದೆ ಎಂದು ಘೋಷಿಸಿದ್ದರು.

  • ಎರಡು ವಿಧಗಳಾಗಿ CBDC ವಿಂಗಡಣೆ: 1- ಚಿಲ್ಲರೆ (CBDC-R)- ಚಿಲ್ಲರೆ ಡಿಜಿಟಲ್​ ಕರೆನ್ಸಿ ಎಲ್ಲರಿಗೂ ಲಭ್ಯವಿರುತ್ತದೆ
  • ಸಗಟು ಡಿಜಿಟಲ್​ ಕರೆನ್ಸಿ(CBDC-W) ಅನ್ನು ಆಯ್ದ ಹಣಕಾಸು ಸಂಸ್ಥೆಗಳಿಗೆ ಸೀಮಿತ ಪ್ರವೇಶಕ್ಕಾಗಿ ವಿನ್ಯಾಸಗೊಳಿಸಲಾಗಿದೆ

ಡಿಜಿಟಲ್ ರೂಪಾಯಿ ಮತ್ತು ಕ್ರಿಪ್ಟೋಕರೆನ್ಸಿ ನಡುವಿನ ವ್ಯತ್ಯಾಸ: ಕ್ರಿಪ್ಟೋಕರೆನ್ಸಿ ವಿಕೇಂದ್ರೀಕೃತ ಡಿಜಿಟಲ್ ಆಸ್ತಿ ಮತ್ತು ಬ್ಲಾಕ್‌ಚೈನ್ ತಂತ್ರಜ್ಞಾನದ ಆಧಾರದ ಮೇಲೆ ರಚಿತವಾದ ವಿನಿಮಯದ ಮಾಧ್ಯಮವಾಗಿದೆ. ಆದಾಗ್ಯೂ, ಮುಖ್ಯವಾಗಿ ಅದು ವಿಕೇಂದ್ರೀಕೃತ ಸ್ವಭಾವದಿಂದಾಗಿ ವಿವಾದಾಸ್ಪದವಾಗಿದೆ. ಅಂದರೆ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು ಅಥವಾ ಕೇಂದ್ರ ಅಧಿಕಾರಿಗಳಂತಹ ಮಧ್ಯವರ್ತಿ ಇಲ್ಲದೇ ಕಾರ್ಯನಿರ್ವಹಿಸುತ್ತದೆ. ಇದಕ್ಕೆ ಸರ್ಕಾರವಾಗಲಿ ಅಥವಾ ಕೇಂದ್ರ ಬ್ಯಾಂಕ್​ಗಳ ಗ್ಯಾರೆಂಟಿ ಇರುವುದಿಲ್ಲ.

ಆದರೆ ಇದಕ್ಕೆ ವ್ಯತಿರಿಕ್ತವಾಗಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೊರಡಿಸಿದ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC) ಡಿಜಿಟಲ್ ರೂಪದಲ್ಲಿ ಫಿಯೆಟ್ ಕರೆನ್ಸಿಯಾಗಿರುತ್ತದೆ. ಅಂದರೆ ಇದೊಂದು ಲೀಗಲ್​ ಟೆಂಡರ್​ ಆಗಿದೆ. ಇದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್​ ಭದ್ರತೆ ಒದಗಿಸುತ್ತದೆ.

ಬಿಟ್‌ಕಾಯಿನ್ ಗಿಂತ ಭಿನ್ನ: ಮಾರುಕಟ್ಟೆ ತಜ್ಞರ ಪ್ರಕಾರ, ಡಿಜಿಟಲ್ ರೂಪಾಯಿಯು ಬಿಟ್‌ಕಾಯಿನ್, ಎಥೆರಿಯಮ್ ಮತ್ತು ಇತರ ಕ್ರಿಪ್ಟೋಕರೆನ್ಸಿಗಳಿಗಿಂತ ಭಿನ್ನವಾಗಿರುತ್ತದೆ. ಅದು ಸರ್ಕಾರದಿಂದ ಬೆಂಬಲಿತವಾಗಿರುತ್ತದೆ. ಎರಡನೆಯದಾಗಿ, ಸರ್ಕಾರದ ಬೆಂಬಲದಿಂದಾಗಿ ಆಂತರಿಕ ಮೌಲ್ಯವನ್ನು ಹೊಂದಿರುವ ಡಿಜಿಟಲ್ ರೂಪಾಯಿಯು ಭೌತಿಕ ರೂಪಾಯಿಗೆ ಸಮನಾಗಿರುತ್ತದೆ. ದೇಶದಲ್ಲಿ ಆರ್‌ಬಿಐನ ಡಿಜಿಟಲ್ ಕರೆನ್ಸಿ (ಇ-ರೂಪಾಯಿ) ಪರಿಚಯಿಸಿದ ನಂತರ, ನೀವು ನಿಮ್ಮೊಂದಿಗೆ ಹಣವನ್ನು ಇಟ್ಟುಕೊಳ್ಳುವ ಅಗತ್ಯವಿಲ್ಲ ಅಥವಾ ಅದನ್ನು ಇಟ್ಟುಕೊಳ್ಳುವ ಅಗತ್ಯವೂ ಬೀಳುವುದಿಲ್ಲ.

ಇದನ್ನು ಓದಿ: ಜಿಎಸ್​ಟಿ ಸಂಗ್ರಹ : ಖಜಾನೆಗೆ ಬಂತು ದಾಖಲೆಯ ಮೊತ್ತ.. ಇದು ಎರಡನೇ ಅತಿ ಹೆಚ್ಚು ಜಿಎಸ್​ಟಿ ಕಲೆಕ್ಷನ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.