ಹೈದರಾಬಾದ್: ವಾಹನಗಳಿಗೆ ಇನ್ಶುರೆನ್ಸ್ ಪಡೆಯುವುದು ಎಷ್ಟು ಮುಖ್ಯವೋ ಅದನ್ನು ಸಮಯಕ್ಕೆ ಸರಿಯಾಗಿ ಅಥವಾ ನಿಗದಿತ ಸಮಯದೊಳಗೆ ಪ್ರೀಮಿಯಂ ಪಾವತಿಸಿ ನವೀಕರಿಸವುದು ಕೂಡ ಅಷ್ಟೇ ಮುಖ್ಯ. ಯಾಕೆಂದರೆ ಒಂದು ವೇಳೆ ವಿಮಾ ಪಾಲಿಸಿಯ ಅವಧಿ ಮೀರಿದ ಒಂದೇ ನಿಮಿಷದ ನಂತರ ಅಪಘಾತ ಸಂಭವಿಸಿದರೂ, ವಾಹನಕ್ಕೆ ಆ ಪಾಲಿಸಿ ಕ್ಲೈಮ್ ಮಾಡಿಕೊಳ್ಳಲು ಬರುವುದಿಲ್ಲ ಎಂಬುದನ್ನು ನಾವು ನೆನಪಿಟ್ಟುಕೊಳ್ಳಿ.
ನಾಳೆ ನವೀಕರಿಸುತ್ತೇವೆ ಎಂದರೆ ಅಗಾಧ ನಷ್ಟ ಸಂಭವಿಸುವ ಪ್ರಮೇಯದಿಂದ ತಪ್ಪಿಸಿಕೊಳ್ಳಲು ದಾರಿಗಳೇ ಮುಚ್ಚಿಬಿಡುತ್ತವೆ. ವಾಹನದ ಎಲ್ಲ ಖರ್ಚನ್ನೂ ವಾಹನ ಚಾಲಕನೇ ಸ್ವತಃ ಭರಿಸುವ ಪರಿಸ್ಥಿತಿ ನಿಮ್ಮದಾಗಿರುತ್ತದೆ ಎಚ್ಚರ!
ಅದಲ್ಲದೆ, ವಿಮೆ ಇಲ್ಲದೇ ವಾಹನ ಚಲಾವಣೆ ಕಾನೂನು ರೀತಿಯಲ್ಲೂ ಅಪರಾಧ. ಒಂದು ವೇಳೆ ಕಾನೂನು ಉಲ್ಲಂಘಿಸಿದರೆ ರೂ 2,000 ವರೆಗೆ ದಂಡ ಮತ್ತು ಜೈಲು ಶಿಕ್ಷೆಯನ್ನು ಸಹ ವಿಧಿಸಲಾಗುತ್ತದೆ. ಆದ್ದರಿಂದ, ವಿಮೆ ಇಲ್ಲದೇ ವಾಹನವನ್ನು ಚಲಾಯಿಸದಿರುವುದೇ ಉತ್ತಮ. ಮತ್ತೊಂದೆಡೆ, ವಿಮಾದಾರರು ಅವಧಿ ಮೀರಿದ ಪಾಲಿಸಿಯನ್ನು ನವೀಕರಿಸಲು ಸಾಕಷ್ಟು ಷರತ್ತುಗಳನ್ನು ಹಾಕುತ್ತಾರೆ.
ಖುದ್ದಾಗಿ ವಾಹನ ತಪಾಸಣೆಗೆ ಒತ್ತಾಯಿಸುತ್ತಾರೆ. ಆಗ ವಾಹನದೊಂದಿಗೆ ವಿಮಾ ಕಂಪನಿಗೆ ಭೇಟಿ ನೀಡಬೇಕು ಅಥವಾ ನೀವಿರುವ ಸ್ಥಳಕ್ಕೆ ಅವರ ಪ್ರತಿನಿಧಿಯನ್ನು ಪರೀಕ್ಷಿಸಲು ಕಳುಹಿಸುತ್ತಾರೆ. ಇದಕ್ಕೆಲ್ಲ ನೀವು ಸಹಕರಿಸಬೇಕಾಗುತ್ತದೆ. ಜೊತೆಗೆ ಹೆಚ್ಚು ಸಮಯವನ್ನೂ ಇದು ತೆಗೆದುಕೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ, ವಿಮಾ ಕಂಪನಿಗಳು ವಿಡಿಯೊ ತಪಾಸಣೆಯನ್ನೂ ಸಹ ಮಾಡುತ್ತಿವೆ.
ನವೀಕರರಿಸಲು ನಿಗದಿತ ದಿನದ ವರೆಗೆ ಕಾಯುವ ಬದಲು ಶೀಘ್ರವೇ ನವೀಕರಿಸುವುದು ಉತ್ತಮ. ನೀವು ಏಜೆಂಟ್ ಮೂಲಕ ಪಾಲಿಸಿಯನ್ನು ತೆಗೆದುಕೊಂಡಿದ್ದರೆ, ಅವನನ್ನು ಅನುಸರಿಸಿ, ಫಾರ್ಮಾಲಿಟಿಗಳನ್ನು ಪೂರ್ಣಗೊಳಿಸಬೇಕು. ಒಂದು ವೇಳೆ, ಪಾಲಿಸಿಯನ್ನು ಆನ್‌ಲೈನ್‌ನಲ್ಲಿ ಖರೀದಿಸಿದ್ದರೆ, ಕಂಪನಿಯ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ನವೀಕರಣ ಆಯ್ಕೆ ಕ್ಲಿಕ್ ಮಾಡಿ ಮತ್ತು ಪಾಲಿಸಿಯನ್ನು ವಿಸ್ತರಿಸಿ. ಅದೇ ಅಲ್ಲ ಒಂದು ವೇಳೆ ಈಗ ನೀವು ಹೊಂದಿರುವ ವಿಮಾದಾರರ ಸೇವೆಯಲ್ಲಿ ಅತೃಪ್ತರಾಗಿದ್ದರೆ, ಪಾಲಿಸಿಯನ್ನು ಹೊಸ ಕಂಪನಿಗೆ ಬದಲಾಯಿಸುವ ಅವಕಾಶವೂ ನಿಮಗಿದೆ. ಸರಿಯಾದದನ್ನು ಟಿಕ್ ಮಾಡುವ ಮೊದಲು ವಿವಿಧ ಕಂಪನಿಗಳ ಪಾಲಿಸಿ ವಿವರಗಳು ಮತ್ತು ಪ್ರೀಮಿಯಂ ದರಗಳನ್ನು ಬ್ರೌಸ್ ಮಾಡಿಕೊಳ್ಳಿ.
ನೋ ಕ್ಲೈಮ್ ಬೋನಸ್ : ಇದು ಕಂಪನಿಯು ವಿಮಾದಾರರಿಗೆ ನೀಡುವ ರಿವಾರ್ಡ್. ಒಂದು ವೇಳೆ ವಿಮಾದಾರರು ಪಾಲಿಸಿ ವರ್ಷದಲ್ಲಿ ಯಾವುದೇ ಕ್ಲೈಮ್ ವಿನಂತಿಗಳನ್ನು ಹಾಕದೇ ಇದ್ದಲ್ಲಿ ಅಂತಹವರಿಗೆ ಈ ನೋ ಕ್ಲೈಮ್ ಬೋನಸ್ ಅನ್ನು ರಿವಾರ್ಡ್ ಆಗಿ ನೀಡುತ್ತದೆ. ಶೇ.20ರಿಂದ ಶೇ 50ರವೆರೆಗೆ ಪಾಲಿಸಿ ನವೀಕರಿಸುವ ಸಂದರ್ಭ ರಿಯಾಯಿತಿ ರೂಪದಲ್ಲಿ ನೋ ಕ್ಲೈಮ್ ಬೋನಸ್ ರಿವಾರ್ಡ್ ವಿಮಾದಾರರ ಪಾಲಾಗುತ್ತದೆ.
ಈ ರಿಯಾಯಿತಿ ವರ್ಗಾಯಿಸಲೂಬಹುದು. ಒಂದು ವೇಳೆ, ಪಾಲಿಸಿದಾರರು ಹೊಸ ವಾಹನವನ್ನು ಖರೀದಿಸಿದರೆ ಅದಕ್ಕೂ ಸಹ ಈ ರಿಯಾಯಿತಿ ವರ್ಗಾಯಿಸಬಹುದು. ಅಸ್ತಿತ್ವದಲ್ಲಿರುವ ಪಾಲಿಸಿ ನವೀಕರಿಸಲು ವಿಮಾದಾರರು 90 ದಿನಗಳ ಕಾಲಾವಕಾಶವನ್ನು ನೀಡುತ್ತಾರೆ ಮತ್ತು ಆ ಹೆಚ್ಚುವರಿ ಸಮಯದೊಳಗೆ ನವೀಕರಿಸಿದರೆ ಮಾತ್ರ ನೀವು NCB ಪ್ರಯೋಜನವನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತೀರಿ. ನೀವು ಪ್ರೀಮಿಯಂನಲ್ಲಿ ಶೇ 50ರ ರಿಯಾಯಿತಿಯನ್ನು ಸಹ ಪಡೆಯಬಹುದು. ಹಾಗಾಗಿ, ಎನ್‌ಸಿಬಿ ಮೊತ್ತ ನಿಮ್ಮ ಪಾಲಾಗಲು ಪಾಲಿಸಿಯನ್ನು ಆದಷ್ಟು ಶೀಘ್ರವೇ ನವೀಕರಿಸುವುದು ಉತ್ತಮ.
ನಿಗದಿತ ದಿನಾಂಕದ ಮೊದಲು: ಹೆಚ್ಚಿನ ಜನರು ವಾಹನ ವಿಮೆಯಲ್ಲಿ ಹೆಚ್ಚಿನ ಆಸಕ್ತಿ ತೋರಿಸುವುದಿಲ್ಲ. ನವೀಕರಣದ ಅಂತಿಮ ದಿನಾಂಕದವರೆಗೂ ಕಾಯುತ್ತಾರೆ. ಒಮ್ಮೊಮ್ಮೆ ಕೊನೆಯ ದಿನಾಂಕದ ಗಡಿ ಮೀರಿ ಬಿಡುತ್ತಾರೆ. ಇದೇ ಕಾರಣಕ್ಕೆ ಅನೇಕ ಪಾಲಿಸಿಗಳು ಲ್ಯಾಪ್ಸ್ ಆಗುತ್ತಿವೆ. ಒಂದೆಡೆ, ವಿಮಾ ಕಂಪನಿಗಳು ನವೀಕರಣದ ಬಗ್ಗೆ ರಿಮೈಂಡಿಂಗ್ ಮೆಸೇಜ್ಗಳನ್ನು ಕಳುಹಿಸುತ್ತಲೇ ಇರುತ್ತವೆ.
ಮತ್ತೊಂದೆಡೆ, ಕಂಪನಿಯ ಅಪ್ಲಿಕೇಶನ್‌ನಲ್ಲಿ ಪಾಲಿಸಿಯ ವಿವರಗಳು ಸುಲಭವಾಗಿ ಲಭ್ಯವಿರುತ್ತವೆ. ಆದರೂ ಕೊನೆಯ ದಿನಾಂಕವನ್ನು ಸ್ಕಿಪ್ ಮಾಡುವವರೇ ಹೆಚ್ಚು. ಅಂತಹ ರಿಮೈಂಡರ್ಗಳ ಬಗ್ಗೆ ಎಚ್ಚರದಿಂದಿದ್ದು, ನಿಗದಿತ ದಿನಾಂಕಕ್ಕಿಂತ ಒಂದು ದಿನ ಮುಂಚಿತವಾಗಿ ಪಾಲಿಸಿಯನ್ನು ನವೀಕರಿಸುವ ಮೂಲಕ, ಕೆಟ್ಟ ಸಂದರ್ಭಗಳಿಂದ ತಪ್ಪಿಸಿಕೊಳ್ಳಬಹುದು ಎಂದು ಹೇಳುತ್ತಾರೆ ಬಜಾಜ್ ಅಲಿಯಾನ್ಸ್ ಜನರಲ್ ಇನ್ಶೂರೆನ್ಸ್‌ನ ಮುಖ್ಯ ವಿತರಣಾ ಅಧಿಕಾರಿ ಆದಿತ್ಯ ಶರ್ಮಾ.
ಇದನ್ನು ಓದಿ:ಸೋಮವಾರದ ಶಾಕ್! ಸೆನ್ಸೆಕ್ಸ್ 1,456 ಅಂಕ ಕುಸಿತ; ಹೂಡಿಕೆದಾರರಿಗೆ ₹6 ಲಕ್ಷ ಕೋಟಿ ನಷ್ಟ