ETV Bharat / business

ವಾರಾಂತ್ಯದ ರಜೆ ಮೋಜು: ಪ್ರವಾಸಿ ತಾಣಗಳಲ್ಲಿ ಹೆಚ್ಚಿದ ಬುಕ್ಕಿಂಗ್​ - ವಾರಾಂತ್ಯದ ರಜೆಗಳು ವರವಾಗಿ

ಹೊಸ ಹೊಸ ಸ್ಥಳಗಳನ್ನು ಅನ್ವೇಷಿಸಲು ಅವರು ಮುಂದಾಗುತ್ತಿದ್ದಾರೆ. ವಾರಾಂತ್ಯ ಸೇರಿದಂತೆ ಇನ್ನಿತರ ಸಮಯದಲ್ಲಿ ಪ್ರವಾಸ ಕೈಗೊಳ್ಳುವ ಸಂಖ್ಯೆ ಹೆಚ್ಚುತ್ತಿದೆ

Weekend holiday fun: Increased bookings at tourist destinations

author img

By

Published : Apr 7, 2023, 2:20 PM IST

ಹೈದರಾಬಾದ್​: ಮಕ್ಕಳಿಗೆ ಬೇಸಿಗೆ ರಜೆಯ ಸಮಯದಲ್ಲಿ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ಯಲು ಮುಂದಾಗಿರುವ ಪೋಷಕರಿಗೆ ವಾರಾಂತ್ಯದ ರಜೆಗಳು ವರವಾಗಿ ಪರಿಣಮಿಸಿವೆ. ಗುಡ್​ ಫ್ರೈಡೇ, ಎರಡನೇ ಶನಿವಾರ, ಭಾನುವಾರ ಮೂರುದಿನಗಳ ರಜೆ ಹಿನ್ನಲೆ ಜನರು ಪ್ರವಾಸಿ ತಾಣ, ಮೆಚ್ಚಿನ ಸ್ಥಳಕ್ಕೆ ಹೋಗಲು ಮುಂದಾಗಿದ್ದಾರೆ. ವಾರಾಂತ್ಯದ ರಜೆ ಹಿನ್ನಲೆ ಇದೀಗ ಪ್ರವಾಸಿತಾಣಗ ಬುಕ್ಕಿಂಗ್​ ಕೂಡ ಶೇ 167ರಷ್ಟು ಹೆಚ್ಚಿದೆ ಎಂದು ಓಯೋ ವರದಿ ಮಾಡಿದೆ.

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಈ ವರ್ಷದ ವಾರಾಂತ್ಯದ ಬುಕ್ಕಿಂಗ್​ ಹೆಚ್ಚಾಗಿದೆ ಎಂದು ಸಂಸ್ಥೆ ತಿಳಿಸಿದೆ. ಅಲ್ಲದೇ, ಹೆಚ್ಚಿನ ಜನರು ಸಮುದ್ರ ಕಿನಾರೆಗಳ ಸ್ಥಳಗಳನ್ನು ಆಯ್ಕೆ ಮಾಡಿದ್ದಾರೆ. ಶೇ 57ರಷ್ಟು ಮಂದಿ ಸಮುದ್ರ ತೀರದ ಪ್ರದೇಶಗಳ ಕಡೆ ಮುಖ ಮಾಡಿದರೆ, ಶೇ 43 ಮಂದಿ ತಂಪಿನ ಅನುಭವಕ್ಕೆ ಗಿರಿ ಶಿಖರಗಳ ಆಯ್ಕೆ ಮಾಡಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.

ಆಧ್ಯಾತ್ಮ ತಾಣದತ್ತ ಒಲವು: ಇನ್ನು ಈ ಬುಕ್ಕಿಂಗ್​ಗಳಲ್ಲಿ ಮತ್ತೊಂದು ವಿಶೇಷತೆ ಎಂದರೆ, ಜನರು ಆಧ್ಯಾತ್ಮಿಕ ಮತ್ತು ಪುಣ್ಯ ಸ್ಥಾನಗಳಿಗೆ ಪ್ರದೇಶಗಳಿಗೆ ಹೆಚ್ಚಿನ ಬೇಡಿಕೆ ಹೊಂದಿದ್ದಾರೆ. ಈ ಮೂಲಕ ಭಾರತೀಯ ಪ್ರವಾಸಿಗರು ಐಷಾರಾಮಿ ಅನುಭವಗಳ ಬದಲಾಗಿ ಆಧ್ಯಾತ್ಮಕ ಅನುಭವಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡುತ್ತಿದ್ದಾರೆ. ವಾರಾಣಸಿ, ಪುರಿ, ಶಿರಡಿ, ಅಮೃತ್​ಸರ್​ ಮತ್ತು ಹರಿದ್ವಾರ ಪ್ರವಾಸಿಗರ ಟಾಪ್​​ ಆಯ್ಕೆ ಪ್ರವಾಸಿ ತಾಣಗಳಾಗಿದೆ. ಇದರ ಹೊರತಾಗಿ ತಿರುಪತಿ, ಮಥುರಾ, ವೃಂದಾವನ, ಗುರುವಯೂರು ಮತ್ತು ಮಧುರೈ ಕೂಡ ದೀರ್ಘ ವಾರಾಂತ್ಯದಲ್ಲಿ ಹೆಚ್ಚಿನ ಬೇಡಿಕೆ ಪಡೆದಿದೆ ಎಂದು ಓಯೋ ತಿಳಿಸಿದೆ.

ಪ್ರದೇಶವಾರು ಬುಕ್ಕಿಂಗ್​ ಗಮನಿಸಿದಾಗ ಈ ಪ್ರವಾಸಿ ತಾಣಗಳಲ್ಲಿ ಹೆಚ್ಚಿನ ಬುಕ್ಕಿಂಗ್​ಗಳನ್ನು ದಕ್ಷಿಣ ಭಾರತೀಯರು ಮಾಡಿದ್ದರು, ಬಳಿಕ ಪೂರ್ವ, ಉತ್ತರ ಮತ್ತು ಪಶ್ಚಿಮ ರಾಜ್ಯಗಳು ಕ್ರಮವಾಗಿದೆ. ದೆಹಲಿ, ಮುಂಬೈ, ಹೈದರಾಬಾದ್​ ಮತ್ತು ಕೋಲ್ಕತ್ತಾ ದಂತಹ ವಾಣಿಜ್ಯ ನಗರಗಳು ಕೂಡ ಹೆಚ್ಚಿನ ಜನರ ಪ್ರವಾಸಕ್ಕೆ ಗಮನ ಸೆಳೆದಿದೆ. ಹೋಟೆಲ್‌ನಲ್ಲಿ ಬುಕ್ಕಿಂಗ್​​ ವೈಶಿಷ್ಟ್ಯಗಳು, ಸುಲಭ ರದ್ದತಿ ಮತ್ತು ಮರುಪಾವತಿ ನೀತಿಗಳು ಮತ್ತು 3 - ಕ್ಲಿಕ್ ಬುಕಿಂಗ್ ಪ್ರಕ್ರಿಯೆಯಂತಹ ನಮ್ಮ ಅಪ್ಲಿಕೇಶನ್‌ನಲ್ಲಿನ ವೈಶಿಷ್ಟ್ಯಗಳೊಂದಿಗೆ, ಜನರು ತಮ್ಮ ರಜಾದಿನಗಳನ್ನು ಮುಕ್ತವಾಗಿ ಯೋಜಿಸುವುದನ್ನು ಮುಂದುವರಿಸಬಹುದು ಎಂದು ತಿಳಿಸಿದೆ.

ಹೊಸ ಸ್ಥಳಗಳ ಅನ್ವೇಷಣೆ: ಕೋವಿಡ್​ ಬಳಿಕ ಅಂದರೆ, ಕಳೆದ ವರ್ಷದಿಂದ ಭಾರತದಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಹೊಸ ಹೊಸ ಸ್ಥಳಗಳನ್ನು ಅನ್ವೇಷಿಸಲು ಅವರು ಮುಂದಾಗುತ್ತಿದ್ದಾರೆ. ವಾರಾಂತ್ಯ ಸೇರಿದಂತೆ ಇನ್ನಿತರ ಸಮಯದಲ್ಲಿ ಪ್ರವಾಸ ಕೈಗೊಳ್ಳುವ ಸಂಖ್ಯೆ ಹೆಚ್ಚುತ್ತಿದೆ ಎಂದು ಓಯೋ ವಕ್ತಾರರು ತಿಳಿಸಿದ್ದಾರೆ. ಕಳೆದ ವರ್ಷ ಕೂಡ ಗುಡ್​ಫ್ರೈಡೆ ವಾರಾಂತ್ಯದಲ್ಲಿ ಹೆಚ್ಚಿನ ಪ್ರವಾಸಿ ಬೇಡಿಕೆಗಳು ಕಂಡು ಬಂದಿದ್ದು, ಅದು ಮುಂದುವರೆದಿದೆ. ಮೋಜು ಮಸ್ತಿ ತಾಣಗಳಿಗಿಂತ ಆಧ್ಯಾತ್ಮಿಕ ಮತ್ತು ಪುಣ್ಯ ಸ್ಥಳಗಳಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು, ಇದರಿಂದ ಉತ್ತಮ ಕೊಡುಗೆ ಜೊತೆಗೆ ಬೆಳವಣಿಗೆ ಕಾಣಬಹುದಾಗಿದೆ ಎಂದು ಪ್ರವಾಸಿ ಸಂಸ್ಥೆಗಳು ತಿಳಿಸಿವೆ.

ಇದನ್ನೂ ಓದಿ: ಭಾರತದಲ್ಲಿ ಪ್ರಿ ವೆಡ್ಡಿಂಗ್​ ಶೂಟ್​ಗೆ ಸ್ಥಳ ಹುಡುಕುತ್ತಿದ್ರೆ, ಇಲ್ಲಿವೆ ನೋಡಿ ರಮಣೀಯ ತಾಣಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.