ETV Bharat / business

ವೈದ್ಯಕೀಯ ಮಾರುಕಟ್ಟೆಯಲ್ಲಿ ಧರಿಸಬಹುದಾದ ತಂತ್ರಜ್ಞಾನದ ಅಬ್ಬರ: 100 ಬಿಲಿಯನ್​ ಡಾಲರ್​ ವಹಿವಾಟು

author img

By ETV Bharat Karnataka Team

Published : Nov 21, 2023, 5:10 PM IST

Wearable tech: ಸ್ಮಾರ್ಟ್​ವಾಚ್​ನಂತಹ ಹಲವು ಧರಿಸಬಹುದಾದ ತಂತ್ರಜ್ಞಾನಗಳು ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮೂಡಿಸಿದೆ

wearable technology in the medical sector growing rapidly

ನವದೆಹಲಿ: ವೈದ್ಯಕೀಯ ವಲಯದಲ್ಲಿ ಧರಿಸಬಹುದಾದ ತಂತ್ರಜ್ಞಾನದ ಮಾರುಕಟ್ಟೆಯು ಈ ವರ್ಷಾಂತ್ಯಕ್ಕೆ ಅಂದರೆ 2023ರಲ್ಲಿ 100 ಬಿಲಿಯನ್​ ಡಾಲರ್​ ತಲುಪಲಿದೆ. ಅಲ್ಲದೇ ಇದು 2030ರ ಹೊತ್ತಿಗೆ ವಾರ್ಷಿಕ ಬೆಳವಣಿಗೆ ದರ ಶೇ 15ರಷ್ಟಿದೆ ಎಂದು ವರದಿ ತಿಳಿಸಿದೆ.

ಧರಿಸಬಹುದಾದ ಸಾಧನಗಳ ಜೊತೆಗಿನ ಆರೋಗ್ಯ ಸೆನ್ಸರ್​​ಗಳು ಆರೋಗ್ಯ ವಲಯದಲ್ಲಿ ಕ್ರಾಂತಿಯನ್ನೇ ಉಂಟು ಮಾಡಿವೆ. ಅಲ್ಲದೇ ಗ್ರಾಹಕರು ತಮ್ಮ ಆರೋಗ್ಯದ ಮೇಲೆ ನಿಯಂತ್ರಣ ಹೊಂದಿ ಸಬಲರನ್ನಾಗಿಸಲು ಇದು ಸಹಾಯಕವಾಗಲಿದೆ.

ದೂರದ ರೋಗಿಗಳ ನಿರ್ವಹಣೆ ಮತ್ತು ಟೆಲಿಹೆಲ್ತ್​ ಸರ್ವೀಸ್​ ಪತ್ತೆಗೆ ಮತ್ತು ಹೃದಯ ಬಡಿತ, ಗ್ಲುಕೋಸ್​ ಮಟ್ಟ ಮತ್ತು ರಕ್ತದೊತ್ತಡದಂತಹ ಪ್ರಮುಖ ಸೂಚನೆ ನಿರ್ವಹಣೆ ಸೇರಿದಂತೆ ಹಲವು ವೈದ್ಯಕೀಯ ಉದ್ದೇಶದಿಂದ ಈ ಸಾಧನಗಳನ್ನು ಬಳಕೆ ಮಾಡಲಾಗುತ್ತಿದೆ. ಫಿಟ್ನೆಸ್​ ಟ್ರ್ಯಾಕರ್​​​​ ಮತ್ತು ಆರೋಗ್ಯ ನಿರ್ವಹಣೆ ಸೇರಿದಂತೆ ವೈದ್ಯಕೀಯ ಎಲ್ಲ ಉದ್ದೇಶಕ್ಕಾಗಿ ಎಲ್ಲ ಬಗೆಯ ಬಳಕೆದಾರರಲ್ಲಿ ಈ ಸಾಧನಗಳು ಜನಪ್ರಿಯಾಗುತ್ತಿದೆ ಎಂದು ಗ್ಲೋಬಲ್​ ಡಾಟಾದ ವೈದ್ಯಕೀಯ ಸಾಧನದ ಹಿರಿಯ ವಿಶ್ಲೇಷಕ ಬ್ರೈನ್​ ಹಿಕ್ಸ್​​ ತಿಳಿಸಿದ್ದಾರೆ.

ಸ್ಮಾರ್ಟ್​ ವಾಚ್​​​​​​​​​​: ಈ ಸಾಧನಗಳನ್ನು ದೇಹದಲ್ಲಿ ಧರಿಸಬಹುದಾಗಿದೆ. ಅದರಲ್ಲಿ ಸಾಮಾನ್ಯವಾಗಿ ಜನಪ್ರಿಯ ಆಗಿರುವುದು ಮೊಣಕೈಗೆ ಕಟ್ಟುತ್ತಿರುವ ಸ್ಮಾರ್ಟ್​ವಾಚ್​ ಆಗಿದೆ. ಇದು ಮೊಬೈಲ್​ ಹೆಲ್ತ್​​ ಜೊತೆಗೆ ಬಳಕೆಯ ಸಂಯೋಜನೆಯನ್ನು ಹೊಂದಿದೆ. ಈ ಸಾಧನಗಳಲ್ಲಿನ ದತ್ತಾಂಶವನ್ನು ನೈಜ ಸಮಯವನ್ನು ಆರೋಗ್ಯ ಕಾರ್ಯಕರ್ತರೊಂದಿಗೆ ಹಂಚಿಕೊಳ್ಳಬಹುದಾಗಿದೆ. ಇದರಿಂದ ಅವರಿಗೆ ರಿಮೋಟ್​​ ನಿರ್ವಹಣೆ ಮತ್ತು ಸಮಯಕ್ಕೆ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ ಎಂದಿದ್ದಾರೆ.

ಇದಕ್ಕಿಂತ ಹೆಚ್ಚಾಗಿ ಈ ಸಾಧನಗಳು ಫಿಟ್ನೆಸ್​ ನಿರ್ವಹಣೆಮ, ಸ್ಟೈಲಿಶ್​ ಡಿಸೈನ್​ ಮತ್ತು ಎಐ ಅಲ್ಕೋರಿಧನ್​ ಒಳಗೊಳ್ಳುವಿಕೆ, ಸ್ವಂ ಆರೈಕೆ ರಕ್ಷಣಾ ವ್ಯವಸ್ಥೆಯಂತಹ ಗ್ರಾಹಕರ ಆಧಾರಿತ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಹೊಸ ಹೊಸ ಉತ್ಪನ್ನಗಳ ಅಭಿವೃದ್ಧಿ: ಇತ್ತೀಚಿನ ದಿನದಲ್ಲಿ ಈ ಮಾರುಕಟ್ಟೆಯಲ್ಲಿ ಹೊಸ ಉತ್ಪನ್ನಗಳಲ್ಲಿ ಅಭಿವೃದ್ಧಿ ಹೊಂದಿದ ತಂತ್ರಜ್ಞಾನ ಹೊಂದುವ ಮೂಲಕ ಮತ್ತಷ್ಟು ಗ್ರಾಹಕ ಆಕರ್ಷಣಿಯಾಗಿದೆ. ಜೊತೆಗೆ ಧರಿಸಬಹುದಾದ ಸಾಧನಗಳಲ್ಲಿ ಹೆಲ್ತ್​ಕೇರ್​ ಆ್ಯಪ್​ಗಳ ಹೊಸ ಅಭಿವೃದ್ಧಿ ನಡೆಸಲಾಗಿದ್ದು, ಅವು ಕೇವಲ ಆರೋಗ್ಯದ ಮಾನದಂಡಗಳನ್ನು ನಿರ್ವಹಣೆ ಮಾಡದೇ ಅವು ಅದರ ಸೂಚನೆಗೆ ಫಲಿತಾಂಶವನ್ನು ಅಂದಾಜಿಸುತ್ತದೆ. ವೈದ್ಯಕೀಯ ವೃತ್ತಿಪರರಿಗೆ ಮೌಲ್ಯಯುತ ಮಾಹಿತಿಯನ್ನು ನೀಡುವ ಮೂಲಕ ವೇಗವಾಗಿ ಬೆಳವಣಿಗೆ ಕಾಣುತ್ತಿದೆ.

ಸ್ಮಾರ್ಟ್​ವಾಚ್​ನಲ್ಲಿ ಆ್ಯಪಲ್​ ಮತ್ತು ಗರ್ಮಿನ್​ ಪ್ರಮುಖವಾಗಿದ್ದು ವೈದ್ಯಕೀಯ ಉದ್ದೇಶದ ಧರಿಬಹುದಾದ ತಂತ್ರಜ್ಞಾನದ ಮಾರುಕಟ್ಟೆಯಲ್ಲಿ ಮುನ್ನಡೆ ಸಾಧಿಸಿದ್ದಾರೆ. ಅಷ್ಟೇ ಅಲ್ಲದೇ ಆರೋಗ್ಯ ಸಂಬಂಧಿತ ಲಕ್ಷಣದ ಮತ್ತು ಫಿಟ್ನೆಸ್​ ಟ್ರಾಕ್​​ ಮಾಡುವ ಮೊದಲ ಧರಿಸಬಹುದಾದ ಸಾಧನವನ್ನು ಪರಿಚಯಿಸಿದವರಲ್ಲಿ ಮೊದಲಿಗರಾಗಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಮಕ್ಕಳ ಮಿದುಳಿನ ಮೇಲೆ ಟೆಕ್​ ಸಾಧನಗಳ ಪರಿಣಾಮವೇನು?: ಅಧ್ಯಯನದಲ್ಲಿ ಕುತೂಹಲದ ಮಾಹಿತಿ ಬಹಿರಂಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.