ನವದೆಹಲಿ: ತೆರಿಗೆ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಚೀನಾ ಮೂಲದ ವಿವೋ ಮೊಬೈಲ್ ಕಂಪನಿಯ ಮೇಲೆ ಇಡಿ ದಾಳಿ ನಡೆಸಿದೆ. ಈ ಮಧ್ಯೆಯೇ ಸಂಸ್ಥೆಯ ನಿರ್ದೇಶಕರಾದ ಝೆಂಗ್‌ಶೆನ್ ಔ ಮತ್ತು ಜಾಂಗ್ ಜೀ ಭಾರತದಿಂದ ಪಲಾಯನ ಮಾಡಿದ್ದಾರೆ ಎಂದು ಇಡಿ ತಿಳಿಸಿದೆ.
ಚೀನಾದ ಸಂಸ್ಥೆಯ ವಿರುದ್ಧ ಇಡಿ ಅಧಿಕಾರಿಗಳು ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಉಲ್ಲಂಘನೆಯಡಿ ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ದಕ್ಷಿಣದ ಕೆಲ ರಾಜ್ಯಗಳ 40 ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ ಮಾಡಿ ತೀವ್ರ ತಪಾಸಣೆಗೆ ಒಳಪಡಿಸಿದೆ. ಈ ಮಧ್ಯೆಯೇ ಚೀನಾ ಕಂಪನಿಯ ನಿರ್ದೇಶಕರು ದೇಶದಿಂದ ಕಾಲ್ಕಿತ್ತಿದ್ದಾರೆ.
ಇದೇ ಪ್ರಕರಣ ಕುರಿತು ಈಗಾಗಲೇ ಕೇಂದ್ರೀಯ ತನಿಖಾ ದಳ (ಸಿಬಿಐ), ತೆರಿಗೆ ಇಲಾಖೆ(ಐಟಿ) ಚೀನಾದ ಮೊಬೈಲ್ ಉತ್ಪಾದನಾ ಸಂಸ್ಥೆಗಳ ಮೇಲೆ ತನಿಖೆ ನಡೆಸುತ್ತಿದ್ದು, ಇದೀಗ ಜಾರಿ ನಿರ್ದೇಶನಾಲಯ(ಇಡಿ) ಕೂಡ ದಾಳಿ ಮಾಡಿದೆ.
ಇದನ್ನೂ ಓದಿ: ಕನ್ಹಯ್ಯಾ ಲಾಲ್ ಹತ್ಯೆ ಕುರಿತು ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ ಬಾಲಕಿಗೆ ಜೀವ ಬೆದರಿಕೆ