ಬೆಂಗಳೂರು: ಗುರುವಾರದಂದು ಬಿಟ್ಕಾಯಿನ್ ಮೌಲ್ಯ 1.78 ಪ್ರತಿಶತದಷ್ಟು ಏರಿಕೆಯಾಗಿ ಅದರ ಮೌಲ್ಯ 34,690 ಡಾಲರ್ಗೆ ತಲುಪಿದೆ. ಭಾರತೀಯ ಕರೆನ್ಸಿಯಲ್ಲಿ ಇದು ಸುಮಾರು 28.8 ಲಕ್ಷ ರೂ. ಆಗುತ್ತದೆ. ಆರು ತಿಂಗಳಲ್ಲಿ ಇದೇ ಮೊದಲ ಬಾರಿಗೆ ಬಿಟ್ ಕಾಯಿನ್ ಬೆಲೆ 35,000 ಡಾಲರ್ (ಸುಮಾರು 29 ಲಕ್ಷ ರೂ.) ಸಮೀಪಕ್ಕೆ ತಲುಪಿದೆ.
ಕಳೆದ 24 ಗಂಟೆಗಳಲ್ಲಿ ಬಿಟ್ ಕಾಯಿನ್ ಬೆಲೆ 740 ಡಾಲರ್ (ಸುಮಾರು 61,560 ರೂ.) ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ, ಬಹುತೇಕ ಕ್ರಿಪ್ಟೋಕರೆನ್ಸಿಗಳ ಮೌಲ್ಯ ಹೆಚ್ಚಾಗಿವೆ. ಇದರೊಂದಿಗೆ ವಿಭಿನ್ನ ಕ್ರಿಪ್ಟೊಗಳನ್ನು ಹೊಂದಿದವರು ಇಂದು ಸಾಕಷ್ಟು ಲಾಭ ಮಾಡಿಕೊಂಡಿದ್ದಾರೆ. ಈಥರ್ ಕ್ರಿಪ್ಟೊ ಮೌಲ್ಯ ಗುರುವಾರ ಶೇಕಡಾ 0.08 ರಷ್ಟು ಏರಿಕೆಯಾಗಿದ್ದು, ಇದರ ವಹಿವಾಟು ಮೌಲ್ಯ 1,793 ಡಾಲರ್ (ಸುಮಾರು 1.49 ಲಕ್ಷ ರೂ.) ಗೆ ತಲುಪಿದೆ. ಒಂದು ದಿನದಲ್ಲಿ ಈಥರ್ನ ಬೆಲೆ 5 ಡಾಲರ್ (ಸುಮಾರು 415 ರೂ.) ಏರಿಕೆಯಾಗಿದೆ.
ಕ್ರಿಪ್ಟೋ ವಲಯದ ಒಟ್ಟಾರೆ ಮೌಲ್ಯಮಾಪನವು ಕಳೆದ 24 ಗಂಟೆಗಳಲ್ಲಿ ಶೇಕಡಾ 1.94 ರಷ್ಟು ಏರಿಕೆಯಾಗಿದೆ. ಕಾಯಿನ್ ಮಾರ್ಕೆಟ್ ಕ್ಯಾಪ್ ಪ್ರಕಾರ, ಡಿಜಿಟಲ್ ಅಸೆಟ್ ಕ್ಷೇತ್ರದ ಮಾರುಕಟ್ಟೆ ಬಂಡವಾಳ ಪ್ರಸ್ತುತ 1.28 ಟ್ರಿಲಿಯನ್ ಡಾಲರ್ (ಸುಮಾರು 1,06,53,267 ಕೋಟಿ ರೂ.) ಆಗಿದೆ. ಬೈನಾನ್ಸ್ ಕಾಯಿನ್, ರಿಪ್ಪಲ್, ಲೈಟ್ ಕಾಯಿನ್, ಸ್ಟೆಲ್ಲಾರ್, ಯುನಿಸ್ವಾಪ್ ಮತ್ತು ಬಿಟ್ ಕಾಯಿನ್ ಎಸ್ವಿ ಕರೆನ್ಸಿಗಳ ಬೆಲೆ ಇಳಿಕೆಯಾಗಿದೆ. ಹಾಗೆಯೇ ನಿಯೋ ಕಾಯಿನ್, ಝ್ಕಾಶ್, ಡ್ಯಾಶ್, ಸ್ಟೇಟಸ್, ಆರ್ಡರ್ ಮತ್ತು ಬ್ರೈನ್ ಟ್ರಸ್ಟ್ ಸಹ ಪ್ರಸ್ತುತ ಕಡಿಮೆ ಮೌಲ್ಯಗಳಲ್ಲಿ ವಹಿವಾಟು ನಡೆಸುತ್ತಿವೆ.
ಕ್ರಿಪ್ಟೋಕರೆನ್ಸಿ ಎಂಬುದು ಡಿಜಿಟಲ್ ಪಾವತಿ ವ್ಯವಸ್ಥೆಯಾಗಿದ್ದು, ಇದರ ವಹಿವಾಟುಗಳನ್ನು ನಡೆಸಲು ಬ್ಯಾಂಕಿಂಗ್ ವ್ಯವಸ್ಥೆಯ ಅಗತ್ಯವಿಲ್ಲ. ಇದು ಪೀರ್-ಟು-ಪೀರ್ ವ್ಯವಸ್ಥೆಯಾಗಿದ್ದು, ವಿಶ್ವದ ಯಾವುದೇ ಭಾಗಕ್ಕಾದರೂ ಪೇಮೆಂಟ್ ಕಳುಹಿಸಬಹುದು ಮತ್ತು ಎಲ್ಲಿಂದ ಬೇಕಾದರೂ ಪೇಮೆಂಟ್ ಪಡೆಯಬಹುದು. ನೈಜ ಜಗತ್ತಿನಲ್ಲಿ ಭೌತಿಕ ಹಣವಾಗಿ ಸಾಗಿಸುವ ಮತ್ತು ವಿನಿಮಯ ಮಾಡಿಕೊಳ್ಳುವ ಬದಲು, ಕ್ರಿಪ್ಟೋಕರೆನ್ಸಿ ಪೇಮೆಂಟ್ಗಳು ನಿರ್ದಿಷ್ಟ ವಹಿವಾಟುಗಳನ್ನು ವಿವರಿಸುವ ಆನ್ಲೈನ್ ಡೇಟಾಬೇಸ್ ಡಿಜಿಟಲ್ ದಾಖಲೆಗಳಾಗಿ ಅಸ್ತಿತ್ವದಲ್ಲಿವೆ. ಕ್ರಿಪ್ಟೊಕರೆನ್ಸಿಯು ತನ್ನ ಸುರಕ್ಷತೆಗಾಗಿ ಎನ್ಕ್ರಿಪ್ಷನ್ ತಂತ್ರಜ್ಞಾನವನ್ನು ಬಳಸುತ್ತದೆ. ವಿಶ್ವದ ಮೊದಲ ಕ್ರಿಪ್ಟೊ ಕರೆನ್ಸಿ ಬಿಟ್ ಕಾಯಿನ್ ಆಗಿದ್ದು, ಇದನ್ನು 2009 ರಲ್ಲಿ ಆರಂಭಿಸಲಾಯಿತು.
ಇದನ್ನೂ ಓದಿ : ಬಿಟ್ಕಾಯಿನ್ಗೆ ಬಂತು ಮತ್ತೆ ಬೇಡಿಕೆ; 35 ಸಾವಿರ ಡಾಲರ್ ತಲುಪಿದ ಬೆಲೆ, ಒಂದೂವರೆ ವರ್ಷದಲ್ಲೇ ಗರಿಷ್ಠ