ETV Bharat / business

ಶೇ 0.75ರಷ್ಟು ದಾಖಲೆ ಮಟ್ಟದ ಬಡ್ಡಿದರ ಏರಿಸಿದ ಫೆಡರಲ್​ ಬ್ಯಾಂಕ್​​.. ಸಾಲ ಇನ್ನು ದುಬಾರಿ!! - US Federal Reserve

1994ರಿಂದ ಇದೇ ಮೊದಲ ಬಾರಿಗೆ ಒಂದೇ ಸಲಕ್ಕೆ ಅತೀ ಹೆಚ್ಚು ಆನ್ - ಶಾಟ್ ಹೆಚ್ಚಳ ಮಾಡಿರುವ ಅಮೆರಿಕ ಕೇಂದ್ರ ಬ್ಯಾಂಕ್​ ಶೇ. 0.75ರಷ್ಟು ಸಾಲದ ಮೇಲಿನ ಬಡ್ಡಿದರವನ್ನು ಹೆಚ್ಚಿಸುವ ಮೂಲಕ ಹೆಚ್ಚುತ್ತಿರುವ ಹಣದುಬ್ಬರವನ್ನು ನಿಯಂತ್ರಣಕ್ಕೆ ತರಲು ಮುಂದಾಗಿದೆ.

US Fed makes biggest rate hike since 1994
ಶೇ 0.75ರಷ್ಟು ದಾಖಲೆಯ ಮಟ್ಟದ ಸಾಲದ ಮೇಲಿನ ಬಡ್ಡಿದರ ಏರಿಸಿದ ಅಮೇರಿಕಾ
author img

By

Published : Jun 16, 2022, 11:43 AM IST

ವಾಷಿಂಗ್ಟನ್: ಕಳೆದ 40 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಗರಿಷ್ಠ ಪ್ರಮಾಣದಲ್ಲಿ ಅಮೆರಿಕದಲ್ಲಿ ಹಣದುಬ್ಬರ ದರ ಏರಿಕೆಯಾಗಿದೆ. ದಿನೇ ದಿನೇ ಏರಿಕೆ ಕಾಣುತ್ತಿರುವ ಹಣದುಬ್ಬರವನ್ನು ನಿಯಂತ್ರಣಕ್ಕೆ ತರಲು ಇಲ್ಲಿನ ಫೆಡರಲ್​ ರಿಸರ್ವ್​ ಕೇಂದ್ರೀಯ ಬ್ಯಾಂಕ್​ ಸಾಲದ ಮೇಲಿನ ಬಡ್ಡಿದರವನ್ನು ಶೇಕಡಾ 0.75ರಷ್ಟು ಹೆಚ್ಚಿಸಿದೆ. ಇದು 1994ರಿಂದ ಇದೇ ಮೊದಲ ಬಾರಿಗೆ ಒಂದೇ ಸಲಕ್ಕೆ ಅತಿ ಹೆಚ್ಚು ಆನ್-ಶಾಟ್ ಹೆಚ್ಚಳ ಮಾಡಲಾಗಿದೆ.

ಫೆಡರಲ್ ಬ್ಯಾಂಕ್​ನ ಎರಡು ದಿನಗಳ ಮಹತ್ವದ ಸಭೆಯ ಬಳಿಕ ಈ ದರ ಹೆಚ್ಚಳವನ್ನು ಘೋಷಿಸಲಾಗಿದೆ. ಇದು ಫೆಡ್‌ನ ಉನ್ನತ ನಿರ್ಧಾರ ತೆಗೆದುಕೊಳ್ಳುವ ಫೆಡರಲ್ ಓಪನ್ ಮಾರ್ಕೆಟ್ ಕಮಿಟಿಯ ಹಲವಾರು ಸದಸ್ಯರು ಸೂಚಿಸಿದ ಶೇ 0.50 ಅಂಕಗಳ ಸಣ್ಣ ದರ ಏರಿಕೆಯ ಬದಲಾಗಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಫೆಡರಲ್​ ರಿಸರ್ವ್​ನ ಮುಖ್ಯಸ್ಥ ಜೆರೋಮ್​ ಹೆಚ್​ ಪೋವೆಲ್​, ಹಣದುಬ್ಬರ ತಡೆಯುವ ನಿಟ್ಟಿನಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಲೇಬರ್​ ಮಾರುಕಟ್ಟೆ ಅತ್ಯಂತ ಬಿಗಿಯಾಗಿದ್ದು, ಹಣದುಬ್ಬರ ಹೆಚ್ಚಾಗಿದೆ. ಇದರ ವಿರುದ್ಧ ಹೋರಾಡಬೇಕಾದರೆ ಬಡ್ಡಿದರ ಏರಿಕೆಯ ಕ್ರಮ ಅಗತ್ಯವಾಗಿದೆ ಎಂದು ತಮ್ಮ ನಿಲುವನ್ನು ಅವರು ಸಮರ್ಥಿಸಿಕೊಂಡಿದ್ದಾರೆ.

ಇಂದಿನ 75 ಬೇಸಿಸ್ ಪಾಯಿಂಟ್ ಹೆಚ್ಚಳ ದೊಡ್ಡ ಮಟ್ಟದ್ದಾಗಿದ್ದು, ಸಾಮಾನ್ಯವಾದದ್ದಲ್ಲ ಎಂಬುದು ನಿಜ. ಆದರೆ, ಜುಲೈನಲ್ಲಿ ಮುಂದಿನ ಹೆಚ್ಚಳ 50 ಅಥವಾ 75 ಮೂಲಾಂಶಗಳ ನಡುವೆ ಇರಬಹುದು. ಅದನ್ನೂ ನಾವು ಸಭೆಗಳಲ್ಲಿ ಚರ್ಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಇದೇ ವೆಳೆ ಪೋವೆಲ್​ ಹೇಳಿದ್ದಾರೆ. ಮುಂಬರುವ ದಿನಗಳಲ್ಲಿ ರೆಪೋ, ರಿಸರ್ವ್​ ರೆಪೋ ಏರಿಕೆ ಮಾಡುವ ಸಾಧ್ಯತೆ ಇದ್ದು, ವೈಯಕ್ತಿಕ ಹಾಗೂ ಗೃಹ ಹಾಗೂ ಇನ್ನಿತರ ಸಾಲಗಳ ಮೇಲಿನ ಬಡ್ಡಿದರ ಏರಿಕೆ ಆಗುವ ಸಾಧ್ಯತೆಗಳಿವೆ.

ಪ್ರಪಂಚದಾದ್ಯಂತದ ದೇಶಗಳು ಹಣದುಬ್ಬರದ ವಿರುದ್ಧದ ಅಸ್ತ್ರವಾಗಿ ಬಡ್ಡಿದರ ಹೆಚ್ಚಳವನ್ನೇ ಬಳಸುತ್ತಿವೆ. ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಪ್ರಮುಖ ಬಡ್ಡಿದರವನ್ನು ಕೂಡ(ರೆಪೋ ದರ ಎಂದು ಕರೆಯಲಾಗುತ್ತದೆ) ಕಳೆದ ವಾರ 0.5 ರಿಂದ 4.9 ರಷ್ಟು ಹೆಚ್ಚಿಸಿತ್ತು.

ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಕಳೆದ ವಾರ ತನ್ನ ಪ್ರಮುಖ ಬಡ್ಡಿದರವನ್ನು ಮುಂದಿನ ತಿಂಗಳು ಹೆಚ್ಚಿಸುವುದಾಗಿ ಮತ್ತು ಸೆಪ್ಟೆಂಬರ್‌ನಲ್ಲಿ ಅದನ್ನು ಅನುಸರಿಸುವುದಾಗಿ ಘೋಷಿಸಿದೆ. ಯುರೋಪಿಯನ್​ ಸೆಂಟ್ರಲ್​ ಬ್ಯಾಂಕ್​ನ ಈ ನಿರ್ಧಾರ ಒಂದು ದಶಕಕ್ಕೂ ಹೆಚ್ಚು ಅವಧಿಯಲ್ಲಿ ಇದೇ ಮೊದಲು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : $1=₹78.23! ಸಾರ್ವಕಾಲಿಕ ಕುಸಿತ ಕಂಡ ಭಾರತೀಯ ಕರೆನ್ಸಿ; ಕಾರಣವೇನು ಗೊತ್ತೇ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.