ನವದೆಹಲಿ: ಏಪ್ರಿಲ್ ಅಂತ್ಯ ಮತ್ತು ಮೇ ಆರಂಭದಲ್ಲಿ ಅಕಾಲಿಕ ಮಳೆ ಬಿದ್ದು ಹವಾನಿಯಂತ್ರಣಗಳು, ರೆಫ್ರಿಜರೇಟರ್‌ಗಳು ಮತ್ತು ಕೂಲರ್‌ಗಳಂತಹ ಉತ್ಪನ್ನಗಳ ಮಾರಾಟಕ್ಕೆ ಹೊಡೆತ ಬಿದ್ದಿದೆ. ವಿಶೇಷವಾಗಿ ಎಸಿಗಳಿಗೆ ಉತ್ತಮ ಕಾಲವಾಗಿರುವ ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಗ್ರಾಹಕರು ತಮ್ಮ ಖರೀದಿ ವಿಳಂಬಗೊಳಿಸಿದ್ದಾರೆ ಎಂದು ಉದ್ಯಮ ಮೂಲಗಳು ಹೇಳುತ್ತವೆ. ಕಳೆದ ವರ್ಷದ ಏಪ್ರಿಲ್‌ಗೆ ಹೋಲಿಸಿದರೆ ಎಸಿ ಮಾರಾಟ ಶೇ. 15ರಷ್ಟು ಕಡಿಮೆಯಾಗಿದೆ ಎಂದು ಅವರು ಅಂದಾಜಿಸಿದ್ದಾರೆ.
ಮಳೆ ನಿಂತಲ್ಲಿ ಬೇಡಿಕೆ ಹೆಚ್ಚು: ಪ್ಯಾನಾಸೋನಿಕ್, ಗೋದ್ರೇಜ್ ಮತ್ತು ದೈಕಿನ್‌ನಂತಹ ಕಂಪನಿಗಳು ಅಕಾಲಿಕ ಮಳೆ ಕೊನೆಗೊಂಡ ತಕ್ಷಣ ಮಾರಾಟ ಹೆಚ್ಚಬಹುದು ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಈ ವರ್ಷ ಏಪ್ರಿಲ್‌ನಲ್ಲಿ ವಾತಾವರಣ ತಂಪಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಮಾರಾಟದಲ್ಲಿ ಕಡಿಮೆ ಬೆಳವಣಿಗೆ ಕಂಡುಬಂದಿದೆ. ಜನರು ತಮ್ಮ ಖರೀದಿ ವಿಳಂಬಗೊಳಿಸಿದ್ದಾರೆ ಎಂದು ಪ್ಯಾನಾಸೋನಿಕ್ ವಕ್ತಾರರು ಹೇಳಿದರು.
‘ಬೇಸಿಗೆ ಹೆಚ್ಚಾದ್ರೆ ವ್ಯಾಪಾರದಲ್ಲಿ ಚೇತರಿಕೆ’: ಗ್ರಾಹಕ ಎಲೆಕ್ಟ್ರಾನಿಕ್ಸ್ ಮತ್ತು ಉಪಕರಣಗಳ ತಯಾರಕರ ಸಂಘದ (ಸಿಇಎಎಂಎ) ಪ್ರಕಾರ, ಉತ್ತರ ಭಾರತದಲ್ಲಿ ಅಕಾಲಿಕ ಮಳೆ ಎಸಿಗಳು, ಫ್ರಿಜ್‌ಗಳು ಮತ್ತು ಕೂಲರ್‌ಗಳ ಮಾರಾಟದ ಮೇಲೆ ತಾತ್ಕಾಲಿಕ ಪರಿಣಾಮ ಬೀರಿದೆ. ಪೂರ್ವ ಮತ್ತು ದಕ್ಷಿಣ ಭಾರತದಲ್ಲಿ ಏಪ್ರಿಲ್‌ವರೆಗೆ ಉತ್ತಮ ಬೆಳವಣಿಗೆ ದಾಖಲಾಗಿದೆ. ಮೇ ತಿಂಗಳಲ್ಲಿ ತಾಪಮಾನ ಏರಿಕೆಯಾದರೆ ಬೇಡಿಕೆ ಮತ್ತೆ ಹೆಚ್ಚಾಗುತ್ತದೆ ಎಂದು ತಿಳಿಸಿದೆ.
ಗೋದ್ರೇಜ್ ಅಪ್ಲೈಯನ್ಸ್‌ನ ಪ್ರತಿನಿಧಿಯೊಬ್ಬರು ಈ ಕುರಿತು ಮಾತನಾಡಿ, ಮೇ ತಿಂಗಳಲ್ಲಿ ದೇಶದ ಹಲವೆಡೆ ಆಲಿಕಲ್ಲು ಮಳೆಯಾಗುವ ನಿರೀಕ್ಷೆ ಇದೆ. ಬೇಸಿಗೆ ಹೆಚ್ಚು ಕಾಲ ಉಳಿಯಬಹುದು. ಜೂನ್‌ನಲ್ಲಿಯೂ ಹೆಚ್ಚಿನ ತಾಪ ಕಾಣಬಹುದು. ಆದ್ದರಿಂದ ಮೇ ಮತ್ತು ಜೂನ್‌ನಲ್ಲಿ ಬೇಡಿಕೆ ಹೆಚ್ಚಾಗಬಹುದು ಎಂಬ ಆಶಾಭಾವ ವ್ಯಕ್ತಪಡಿಸಿದರು.
5 ಸ್ಟಾರ್ ರೇಟಿಂಗ್ ಎಸಿಗಳಿಗೆ ಬೇಡಿಕೆ: 1, 1.5 ಮತ್ತು 2 ಟನ್ ಎಸಿಗಳಲ್ಲಿ, 5 ಸ್ಟಾರ್ ದರದ ಎಸಿಗಳು ಹೆಚ್ಚು ಬೇಡಿಕೆಯಲ್ಲಿವೆ. ರೆಫ್ರಿಜರೇಟರ್‌ಗಳ ಫ್ರಾಸ್ಟ್ ಮುಕ್ತ ವಿಭಾಗಕ್ಕೆ ಬೇಡಿಕೆ ಜಾಸ್ತಿ. ಕಳೆದ ಹಣಕಾಸು ವರ್ಷದಲ್ಲಿ ಈ ವಿಭಾಗವು ಎರಡಂಕಿಯ ಬೆಳವಣಿಗೆ ದಾಖಲಿಸಿದೆ.
ಕೈಗೆಟುಕುವ ದರದಲ್ಲಿ 5 ಸ್ಟಾರ್ ಎಸಿ: ಕೈಗೆಟುಕುವ ಬೆಲೆಯಲ್ಲಿ 5 ಸ್ಟಾರ್ ದರದ AC ಖರೀದಿಸಲು ಬಯಸುವಿರಾ?. Realme ಕಂಪನಿಯು 1.5 ಟನ್ ಸಾಮರ್ಥ್ಯದ ತ್ವರಿತ ಕೂಲಿಂಗ್ ಮತ್ತು ದೀರ್ಘಾವಧಿಯ ಕಂಪ್ರೆಸರ್‌ಗಳೊಂದಿಗೆ ತಯಾರಿಸಿರುವ ಎಸಿ ಮಾರುಕಟ್ಟೆಯಲ್ಲಿ ಲಭ್ಯವಿದೆ. Realme ಇತ್ತೀಚಿನ ವೈಶಿಷ್ಟ್ಯಗಳೊಂದಿಗೆ ಸ್ಪ್ಲಿಟ್ ಎಸಿಗಳನ್ನು 30 ಸಾವಿರ ರೂ.ಗೆ ತಂದಿದೆ. ಈ ಕೊಡುಗೆಯನ್ನು 1 ಟನ್ ಮತ್ತು 1.5 ಟನ್ ಸಾಮರ್ಥ್ಯದೊಂದಿಗೆ ಪರಿಚಯಿಸಲಾಗಿದೆ. 4 ಸ್ಟಾರ್ ಹಾಗೂ 5 ಸ್ಟಾರ್ ರೇಟಿಂಗ್ ಹೊಂದಿರುವ ACಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇವು ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದೆ. ಎಸಿ ಬೆಲೆಗಳು ಈ ಕೆಳಗಿನಂತಿವೆ.
* 1 ಟನ್, 4 ಸ್ಟಾರ್ ರೇಟಿಂಗ್: ರೂ. 27,790
* 1.5 ಟನ್, 4 ಸ್ಟಾರ್ ರೇಟಿಂಗ್: ರೂ. 30,999
* 1.5 ಟನ್, 5 ಸ್ಟಾರ್ ರೇಟಿಂಗ್: ರೂ. 33,490