ETV Bharat / business

ಎಲಾನ್​ ಮಸ್ಕ್​- ಟ್ವಿಟರ್​ ಫೈಟ್​.. ಮೈಕ್ರೋಬ್ಲಾಗಿಂಗ್​ನ ಭದ್ರತಾ ವೈಫಲ್ಯದ ಸಾಕ್ಷ್ಯ ನೀಡಲಿರುವ ಮಾಜಿ ಉದ್ಯೋಗಿ

ಖರೀದಿ ಒಪ್ಪಂದವನ್ನು ಅರ್ಧಕ್ಕೆ ನಿಲ್ಲಿಸಿರುವ ಎಲಾನ್​ ಮಸ್ಕ್​ ಮತ್ತು ಟ್ವಿಟರ್​​​ ಮಧ್ಯೆ ಕಾನೂನು ಹೋರಾಟ ಜೋರಾಗಿದೆ. ನಕಲಿ ಖಾತೆಗಳ ಬಗ್ಗೆ ನಿಖರ ಮಾಹಿತಿ ಕೇಳಿರುವ ಮಸ್ಕ್​ಗೆ ಅದೇ ಸಂಸ್ಥೆಯ ಸಿಬ್ಬಂದಿಯಿಂದ ನೆರವು ದೊರೆತಿದೆ.

twitter-whistleblower
ಎಲಾನ್​ ಮಸ್ಕ್​- ಟ್ವಿಟ್ಟರ್​ ಫೈಟ್
author img

By

Published : Aug 30, 2022, 6:56 AM IST

ಸ್ಯಾನ್ ಫ್ರಾನ್ಸಿಸ್ಕೋ: ನಕಲಿ ಖಾತೆಗಳಿಗಾಗಿ ಟ್ವಿಟರ್​​ ಮತ್ತು ಜಗತ್ತಿನ ನಂ.1 ಶ್ರೀಮಂತ ಎಲಾನ್​ ಮಸ್ಕ್​ ಮಧ್ಯೆ ನಡೆಯುತ್ತಿರುವ ಕಾದಾಟದಲ್ಲಿ ಮೈಕ್ರೋಬ್ಲಾಗಿಂಗ್​ನ ಭದ್ರತಾ ವಿಭಾಗದ ಮುಖ್ಯಸ್ಥ ವಿಸ್ಲ್​ಬ್ಲೋವರ್​ ಪೀಟರ್​ ಝಟ್ಕೊ ಉದ್ಯೋಗ ಕಳೆದುಕೊಂಡಿದ್ದಾರೆ. ಇವರು ಎಲಾನ್​ ಮಸ್ಕ್​ ಪಾಳಯ ಸೇರಿದ್ದು, ಟ್ವಿಟರ್​ನ ದೋಷಗಳ ಬಗ್ಗೆ ಸಾಕ್ಷ ನೀಡಲು ಮುಂದಾಗಿದ್ದಾರೆ.

ಟ್ವಿಟರ್​ನ ಭದ್ರತೆ ಮತ್ತು ನಕಲಿ ಖಾತೆಗಳ ಬಗ್ಗೆ ನಿಖರ ಮಾಹಿತಿ ನೀಡಿದ ಬಳಿಕ ಟ್ವಿಟರ್​​​ ಖರೀದಿ ಪೂರ್ಣಕ್ಕೆ ಪಟ್ಟು ಹಿಡಿದಿರುವ ಎಲಾನ್​ ಮಸ್ಕ್​​ ಮತ್ತು ಟ್ವಿಟ್ಟರ್ ಸಿಇಒ ಭಾರತೀಯ ಮೂಲಕದ ಪರಾಗ್​ ಅನುರಾಗ್​ ಮಧ್ಯೆ ಕಾದಾಟ ಜೋರಾಗಿದೆ. ಈ ಮಧ್ಯೆಯೇ ಸಂಸ್ಥೆಯಲ್ಲಿದ್ದುಕೊಂಡೇ ಮಸ್ಕ್​​ಗೆ ಸಹಾಯ ಮಾಡಿದ ಕಾರಣ ಝಟ್ಕೋರನ್ನು ಕೆಲಸದಿಂದ ವಜಾ ಮಾಡಲಾಗಿದೆ.

ಎಲಾನ್​ ಮಸ್ಕ್​ರ ಜೊತೆಗೂಡಿರುವ ಟ್ವಿಟರ್​​​​ನ ಭದ್ರತಾ ವಿಭಾಗದ ಮಾಜಿ ಮುಖ್ಯಸ್ಥ ಪೀಟರ್​ ಝಟ್ಕೋ ಬ್ಲಾಗಿಂಗ್​ನ ಭದ್ರತಾ ವೈಫಲ್ಯಗಳ ಬಗ್ಗೆ ಸಾಕ್ಷ್ಯ ನೀಡಲು ಅಮೆರಿಕದ ಸುಪ್ರೀಂಕೋರ್ಟ್​ ಮುಂದೆ ಸೆ.13 ರಂದು ಹಾಜರಾಗಲಿದ್ದಾರೆ ಎಂದು ವರದಿಯಾಗಿದೆ.

ಪೀಟರ್​ ಝಟ್ಕೊ ನ್ಯಾಯಾಂಗ ಸಮಿತಿಯ ಸಿಬ್ಬಂದಿಯನ್ನು ಖಾಸಗಿಯಾಗಿ ಭೇಟಿ ಮಾಡಿದ್ದಾರೆ. ವರದಿಯ ಪ್ರಕಾರ ಕ್ಯಾಪಿಟಲ್ ಹಿಲ್‌ನಲ್ಲಿ ಮೂರು ಸಭೆಗಳನ್ನು ನಡೆಸಿದ್ದಾರೆ. ವಿಸ್ಲ್‌ಬ್ಲೋವರ್ ದೂರಿನ ನಂತರ ಟ್ವಿಟ್ಟರ್ ಯುರೋಪಿಯನ್ ಯೂನಿಯನ್​ನಲ್ಲಿ ಗೌಪ್ಯತೆ ತನಿಖೆಗಳನ್ನು ಎದುರಿಸುತ್ತಿದೆ.

ಓದಿ: ಅಂಬಾನಿ ಉತ್ತರಾಧಿಕಾರ ಹಸ್ತಾಂತರ: ಮಗಳು ಇಶಾಗೆ ರಿಟೇಲ್, ಮಗ ಅನಂತ್​ಗೆ ಇಂಧನ ಘಟಕದ ಹೊಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.