ETV Bharat / business

ನೀವು ನಿಮ್ಮ ಸ್ವಂತ ಕಾರಿನಲ್ಲಿ ಪ್ರಯಾಣಿಸುತ್ತೀರಾ..?: ಹಾಗಾದರೆ ವಿಮಾ ಪಾಲಿಸಿಯ ಆಡ್-ಆನ್ ತೆಗೆದುಕೊಳ್ಳಿ, ಸವಲತ್ತು ಉಪಯೋಗಿಸಿಕೊಳ್ಳಿ! - ಪ್ರಯಾಣಕ್ಕೂ ಮೊದಲು ಇದನ್ನು ಗಮನಿಸಿ

ವಾಹನ ವಿಮೆ ಆ್ಯಡ್ ಆನ್​​ ಪ್ರವಾಸಗಳ ಸಮಯದಲ್ಲಿ ನಿಮ್ಮ ಕುಟುಂಬಕ್ಕೆ ಹೆಚ್ಚುವರಿ ರಕ್ಷಣೆ ನೀಡುತ್ತದೆ. ವಾಹನದ ಎಂಜಿನ್​ ಸ್ಥಗಿತವಾಗಿದ್ದರೆ ಅಥವಾ ಅಪಘಾತದ ಸಮಯದಲ್ಲಿ ತುರ್ತು ಹೋಟೆಲ್ ಸೌಕರ್ಯಗಳನ್ನು ಕೂಡಾ ಒಳಗೊಂಡಿರುತ್ತವೆ.

Travelling long distances in your own car? Take add-on insurance covers
ನೀವು ನಿಮ್ಮ ಸ್ವಂತ ಕಾರಿನಲ್ಲಿ ಪ್ರಯಾಣಿಸುತ್ತೀರಾ
author img

By

Published : Jan 21, 2023, 8:18 AM IST

ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಬಹುತೇಕರು ತಮ್ಮ ಸ್ವಂತ ವಾಹನಗಳಲ್ಲಿ ದೂರದ ಪ್ರಯಾಣ ಬೆಳೆಸುವುದನ್ನು ಇಷ್ಟ ಪಡುತ್ತಿದ್ದಾರೆ. ವಿನೋದ, ವೈಯಕ್ತಿಕ ಅನುಕೂಲತೆ ಮತ್ತು ಸಮಯ ನಿರ್ವಹಣೆಗಾಗಿ ವೈಯಕ್ತಿಕ ಸಾರಿಗೆಗೆ ಈಗೀಗ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಹಬ್ಬ ಹರಿದಿನಗಳಲ್ಲಿ ಮತ್ತು ವಿಶೇಷ ಸಂದರ್ಭಗಳಲ್ಲಿ ಸ್ವಂತ ವಾಹನಗಳಲ್ಲಿ ತಮ್ಮಿಷ್ಟದ ಸ್ಥಳಗಳಿಗೆ ಭೇಟಿ ನೀಡುತ್ತಾರೆ ಮತ್ತು ದೂರದ ಪ್ರಯಾಣಕ್ಕೆ ಇಷ್ಟ ಪಡುತ್ತಿದ್ದಾರೆ. ಅಂದ ಹಾಗೆ ದೂರದ ಪ್ರಯಾಣ ಬೆಳೆಸಬೇಕಾದರೆ ನಿಮ್ಮ ವಾಹನವನ್ನು ಸುಸ್ಥಿತಿಯಲ್ಲಿರುವುದು ಮುಖ್ಯ.

ಅಂತಹ ಪ್ರಯಾಣಕ್ಕೆ ಹೋಗುವ ಮೊದಲು, ನೀವು ಸರಿಯಾದ ವಾಹನ ವಿಮಾ ಪಾಲಿಸಿಯನ್ನು ಹೊಂದಿರುವಿರಾ ಎಂದು ಖಚಿತಪಡಿಸಿಕೊಳ್ಳುವುದು ಅತ್ಯಂತ ಪ್ರಮುಖವಾದ ವಿಷಯ. ಇನ್ನು ನಮ್ಮದೇ ಸ್ವಂತ ವಾಹನದಲ್ಲಿ ಪ್ರಯಾಣ ಮಾಡುವುದು ಯಾವಾಗಲೂ ಖುಷಿ ನೀಡುತ್ತದೆ. ನಿಮ್ಮ ಸ್ವಂತ ಕಾರಿನಲ್ಲಿ ನೆಚ್ಚಿನ ತಾಣಗಳು, ಕಡಲತೀರಗಳು ಮತ್ತು ಸ್ಥಳೀಯ ಹಳ್ಳಿಗಳು ಮತ್ತು ಪಟ್ಟಣಗಳಿಗೆ ಹೋಗುವುದು ಸಿಹಿ ಅನುಭವವನ್ನು ನೀಡುತ್ತದೆ. ಆದರೆ ಹೀಗೆ ಪ್ರಯಾಣ ಬೆಳೆಸುವ ಮುನ್ನ ಆರ್ಥಿಕ ಭದ್ರತೆ ಇದೆಯಾ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಹಾಗೂ ಆರ್ಥಿಕ ಭದ್ರತೆಯನ್ನು ನೀವು ಖಚಿತಪಡಿಕೊಳ್ಳುವುದು ಅತಿ ಮುಖ್ಯ.

ಭವಿಷ್ಯದಲ್ಲಿ ಯಾವುದೇ ಸಮಸ್ಯೆಯನ್ನು ತಪ್ಪಿಸಲು, ನಿಮ್ಮ ವಾಹನವನ್ನು ಯಾವಾಗಲೂ ಸಮಗ್ರ ವಿಮಾ ಪಾಲಿಸಿ ಮತ್ತು ಪೂರಕ ಪಾಲಿಸಿಗಳೊಂದಿಗೆ (ಆಡ್-ಆನ್) ಇರಿಸಿಕೊಳ್ಳಿ. ದುರದೃಷ್ಟಕರ ಅಪಘಾತಗಳು ಅಥವಾ ಕಾರ್ ರಿಪೇರಿ ಸಂದರ್ಭದಲ್ಲಿ ಆರ್ಥಿಕ ರಕ್ಷಣೆ ಒದಗಿಸಲು ಇವು ಉಪಯುಕ್ತವಾಗಿವೆ. ಆನ್-ರೋಡ್ ರಿಪೇರಿ ಸೌಲಭ್ಯಗಳನ್ನು ಒದಗಿಸಲು ವಿಮಾ ಕಂಪನಿಗಳು ಈಗ ಪೈಪೋಟಿಯಲ್ಲಿ ತೊಡಗಿವೆ. ಅವುಗಳನ್ನು ಗಮನದಲ್ಲಿಟ್ಟುಕೊಂಡು ನಿಮಗೆ ಸೂಕ್ತವಾದ ಪಾಲಿಸಿಯನ್ನು ಮಾಡಿಸಿ.

ವಿಮಾ ಪಾಲಿಸಿ ನಿಮ್ಮ ಹಣ ಉಳಿತಾಯ ಮಾಡುತ್ತೆ: ಎಂಜಿನ್ ನಿಮ್ಮ ಕಾರಿನ ಅತ್ಯಂತ ದುಬಾರಿ ಮತ್ತು ಪ್ರಮುಖ ಭಾಗವಾಗಿದೆ ಎಂಬುದು ಗಮನದಲ್ಲಿರಲಿ. ವಿಮಾ ಪಾಲಿಸಿ ಸ್ಥಗಿತದ ಸಂದರ್ಭದಲ್ಲಿ ಇಂಜಿನ್​ ವೈಫಲ್ಯ ಸರಿದೂಗಿಸಲು 'ಎಂಜಿನ್ ಪ್ರೊಟೆಕ್ಷನ್ ಕವರ್' ಅನ್ನು ಬಳಸಬಹುದು. ಈ ಪೂರಕ ನೀತಿಯು ನಿಮ್ಮ ಪ್ರಯಾಣದ ಸಮಯದಲ್ಲಿ ಮಾತ್ರವಲ್ಲದೇ ವರ್ಷವಿಡೀ ಎಂಜಿನ್ ವೈಫಲ್ಯದ ಸಂದರ್ಭದಲ್ಲಿ ಸಹಾಯ ಮಾಡುತ್ತದೆ. ಇದು ಎಂಜಿನ್ ದುರಸ್ತಿ ಅಥವಾ ಹೊಸ ಎಂಜಿನ್‌ನ ಫಿಟ್‌ಮೆಂಟ್ ಶುಲ್ಕದ ವೆಚ್ಚವನ್ನು ಒಳಗೊಂಡಿರುತ್ತದೆ.

ಟೈರ್ ಪ್ರೊಟೆಕ್ಟರ್ ಕವರ್: ವಿಮಾ ಕಂಪನಿಗಳು 'ಟೈರ್ ಪ್ರೊಟೆಕ್ಟರ್ ಕವರ್' ಅನ್ನು ಸಹ ನೀಡುತ್ತವೆ. ದೂರದ ಪ್ರಯಾಣದ ಸಮಯದಲ್ಲಿ ವಾಹನದ ಟೈರ್‌ಗಳನ್ನು ಯಾವಾಗಲೂ ಸುಸ್ಥಿತಿಯಲ್ಲಿಡಬೇಕು. ಕಾರನ್ನು ನಿಲ್ಲಿಸದೇ ಹೆಚ್ಚು ಗಂಟೆಗಳ ಕಾಲ ಚಾಲನೆ ಮಾಡುವುದರಿಂದ ಟೈರ್‌ಗಳಿಗೆ ಹಾನಿಯಾಗುತ್ತದೆ. ರಸ್ತೆಗಳು ಸುಸ್ಥಿತಿಯಲ್ಲಿಲ್ಲದಿದ್ದರೆ ಟೈರ್‌ಗಳು ಬೇಗನೆ ಹಾಳಾಗುತ್ತವೆ. ಈ ಆಡ್-ಆನ್ ಕವರ್‌ನೊಂದಿಗೆ, ಹೊಸ ಟೈರ್‌ಗಳು ಹಾನಿಗೊಳಗಾದರೆ ಖರೀದಿಸುವ ವೆಚ್ಚವನ್ನು ಮರುಪಡೆಯಬಹುದು.

ವಾಹನ ಕೈಕೊಟ್ಟಾಗ ಸಹಾಯಕ್ಕೆ ಬರುತ್ತೆ: ಪ್ರಯಾಣದ ಮಧ್ಯದಲ್ಲಿ ವಾಹನ ಕೆಟ್ಟು ಹೋದರೆ, ವಿಮಾ ಕಂಪನಿಯು ವಾಹನವನ್ನು ಹತ್ತಿರದ ದುರಸ್ತಿ ಕೇಂದ್ರಕ್ಕೆ ಸಾಗಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ '24 ಗಂಟೆಗಳ ರಸ್ತೆಬದಿಯ ಸಹಾಯ ಕವರ್' ತೆಗೆದುಕೊಳ್ಳಬೇಕು. ವಾಹನ ಕೆಟ್ಟುಹೋದರೆ, ಅಪಘಾತ ಸಂಭವಿಸಿದಾಗ ಮತ್ತು ಪ್ರಯಾಣದ ಮಧ್ಯದಲ್ಲಿ ನಿಲ್ಲಿಸಿದರೆ ತುರ್ತು ವಸತಿ ಅಗತ್ಯವಿದೆ. ಇದಕ್ಕಾಗಿ, 'ತುರ್ತು ಹೋಟೆಲ್ ವಸತಿ ಕವರ್' ಸಹ ನಿಮಗೆ ಲಭ್ಯವಾಗುತ್ತದೆ. ಈ ಪಾಲಿಸಿ ಹೋಟೆಲ್ ಕೋಣೆಗೆ ಪಾವತಿಸಿದ ಮೊತ್ತವನ್ನೂ ಕೂಡಾ ಪಾವತಿಸುತ್ತದೆ.

ಪ್ರಯಾಣಕ್ಕೂ ಮೊದಲು ಇದನ್ನು ಗಮನಿಸಿ: ನಿಮ್ಮ ಮೋಜಿನ ಪ್ರಯಾಣವನ್ನು ಪ್ರಾರಂಭಿಸುವ ಮೊದಲು, ಮೊದಲು ನಿಮ್ಮ ವಾಹನದ ಸ್ಥಿತಿಯನ್ನು ಪರೀಕ್ಷಿಸಿ. ಎಂಜಿನ್, ಟೈರ್ ಮತ್ತು ಲೈಟ್‌ಗಳು ಕಾರ್ಯನಿರ್ವಹಿಸುತ್ತಿವೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಿ. ಇಲ್ಲದಿದ್ದರೆ, ಸ್ಥಳೀಯ ಮೆಕ್ಯಾನಿಕ್ ಮೂಲಕ ಕಾರನ್ನು ಪರೀಕ್ಷಿಸಿ. ಟೋಲ್ ಗೇಟ್‌ಗಳ ಮೂಲಕ ತೊಂದರೆ - ಮುಕ್ತ ಪ್ರಯಾಣಕ್ಕಾಗಿ ನಿಮ್ಮ ಫಾಸ್ಟ್‌ಟ್ಯಾಗ್‌ನಲ್ಲಿ ಹಣವಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಕಾರಿನಲ್ಲಿರುವ ಪ್ರತಿಯೊಬ್ಬರೂ ಸೀಟ್ ಬೆಲ್ಟ್ ಧರಿಸಿರುವುದನ್ನು ಖಚಿತಪಡಿಸಿಕೊಳ್ಳಿ.

ಇದನ್ನು ಓದಿ: ಸಂದಿಗ್ಧ ಪರಿಸ್ಥಿತಿ ಎದುರಿಸಲು ತುರ್ತು ನಿಧಿ ಬಳಸಿ; ಅನಾವಶ್ಯಕ ಐಷಾರಾಮಿ ವಸ್ತು ಖರೀದಿಗಲ್ಲ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.