ETV Bharat / business

ಕ್ರೆಡಿಟ್​ ಸ್ಕೋರ್​ ನಿಮ್ಮ ಸಾಲದ ಅರ್ಹತೆ ನಿರ್ಧರಿಸುತ್ತೆ... ಉತ್ತಮ ಸ್ಕೋರ್​​ಗೆ ನೀವು ಮಾಡಬೇಕಿರುವುದೇನು? - ಕ್ರೆಡಿಟ್ ಸ್ಕೋರ್ ಹೆಚ್ಚು ಮಾಡಿಕೊಳ್ಳಲು ಏನು ಮಾಡಬೇಕು

ಸಾಲದಾತರು ಸಾಮಾನ್ಯವಾಗಿ 750 ಕ್ಕಿಂತ ಹೆಚ್ಚಿನ ಅಂಕಗಳೊಂದಿಗೆ ಅಪ್ಲಿಕೇಶನ್‌ಗಳನ್ನು ಪರಿಗಣಿಸುತ್ತಾರೆ. ಹಾಗಾಗಿ ಈ ಬಗ್ಗೆ ನಿಖರವಾದ ಮಾಹಿತಿ ಹಾಗೂ ಅರಿವನ್ನು ಪಡೆದುಕೊಳ್ಳಿ. ನೀವು ಸಾಲವನ್ನು ಪಡೆದುಕೊಳ್ಳಲು ವಿಫಲರಾಗಿದ್ದರೆ ಅಥವಾ ನಿರಾಕರಿಸಲ್ಪಟ್ಟಿದ್ದರೆ ನಿಮ್ಮ ಕ್ರೆಡಿಟ್​ ಸ್ಕೋರ್ ಮತ್ತಷ್ಟು ಕುಸಿಯುವ ಸಾಧ್ಯತೆಯಿದೆ.ಹಾಗಾದರೆ, ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚು ಮಾಡಿಕೊಳ್ಳಲು ಏನು ಮಾಡಬೇಕು?

ಕ್ರೆಡಿಟ್​ ಸ್ಕೋರ್​ ನಿಮ್ಮ ಸಾಲದ ಅರ್ಹತೆ ನಿರ್ಧರಿಸುತ್ತೆ.
ಕ್ರೆಡಿಟ್​ ಸ್ಕೋರ್​ ನಿಮ್ಮ ಸಾಲದ ಅರ್ಹತೆ ನಿರ್ಧರಿಸುತ್ತೆ... ಉತ್ತಮ ಸ್ಕೋರ್​​ಗೆ ನೀವು ಮಾಡಬೇಕಿರುವುದೇನು?
author img

By

Published : Dec 23, 2022, 8:40 AM IST

ಹೈದರಾಬಾದ್: ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೆ ಸಾಲ ಅಥವಾ ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳಲು ಕಷ್ಟವಾಗುತ್ತದೆ. ನೇಮಕ ಮಾಡುವಾಗಲೂ ಕಂಪನಿಗಳು ಈ ಅಂಕವನ್ನು ನೋಡುತ್ತಿವೆ. 3-ಅಂಕಿಯ ಸ್ಕೋರ್ ನಿಮ್ಮ ಹಣಕಾಸಿನ ಸ್ಥಿತಿಯನ್ನು ಹೇಳುತ್ತದೆ ಮತ್ತು ಒಟ್ಟುಗೂಡಿಸುತ್ತದೆ. ಸಾಲದ ಅನುಮೋದನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸಾಮಾನ್ಯವಾಗಿ ಸಣ್ಣ ಸಣ್ಣ ಸಮಸ್ಯೆಗಳು ನಿಮ್ಮ ಕ್ರೆಡಿಟ್ ಅರ್ಹತೆಯನ್ನು ಕಡಿಮೆ ಮಾಡಬಹುದು.

ಕ್ರೆಡಿಟ್​ ಸ್ಕೋರ್​ ಹೆಚ್ಚಿಸಿಕೊಳ್ಳಲು ಏನು ಮಾಡಬೇಕು: ನಿಮ್ಮ ಸ್ಕೋರ್ ಭಾರಿ ಪ್ರಮಾಣದಲ್ಲಿ ಕಡಿಮೆಯಿದ್ದರೆ ತಕ್ಷಣವೇ ಕಾರಣಗಳನ್ನು ವಿಶ್ಲೇಷಿಸಿ. ಕೆಲವೊಮ್ಮೆ ನಿಮ್ಮ ಕ್ರೆಡಿಟ್ ವರದಿಯಲ್ಲಿನ ಸಣ್ಣ ಸಣ್ಣ ತಪ್ಪುಗಳು ನಿಮ್ಮ ಸ್ಕೋರ್ ಕಡಿಮೆಯಾಗಲು ಕಾರಣವಾಗಬಹುದು. ರೇಟಿಂಗ್ ಏಜೆನ್ಸಿಯನ್ನು ಸಂಪರ್ಕಿಸುವ ಮೂಲಕ ಅದನ್ನು ಸರಿಪಡಿಸಬಹುದು. ನಿಮಗೆ ಅಗತ್ಯವಿಲ್ಲದಿದ್ದರೂ ಸಾಲಕ್ಕಾಗಿ ಅರ್ಜಿ ಸಲ್ಲಿಸುವುದು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಹಾನಿಗೊಳಿಸುತ್ತದೆ.

ಆದ್ದರಿಂದ ಜಾಗರೂಕರಾಗಿರಿ. ಸಾಲದಾತರು ಸಾಮಾನ್ಯವಾಗಿ 750 ಕ್ಕಿಂತ ಹೆಚ್ಚಿನ ಅಂಕಗಳೊಂದಿಗೆ ಅಪ್ಲಿಕೇಶನ್‌ಗಳನ್ನು ಪರಿಗಣಿಸುತ್ತಾರೆ. ಹಾಗಾಗಿ ಈ ಬಗ್ಗೆ ನಿಖರವಾದ ಮಾಹಿತಿ ಹಾಗೂ ಅರಿವನ್ನು ಪಡೆದುಕೊಳ್ಳಿ. ನೀವು ಸಾಲವನ್ನು ಪಡೆದುಕೊಳ್ಳಲು ವಿಫಲರಾಗಿದ್ದರೆ ಅಥವಾ ನಿರಾಕರಿಸಲ್ಪಟ್ಟಿದ್ದರೆ ನಿಮ್ಮ ಕ್ರೆಡಿಟ್​ ಸ್ಕೋರ್ ಮತ್ತಷ್ಟು ಕುಸಿಯುವ ಸಾಧ್ಯತೆಯಿದೆ.

ಸಾಲದ ಮೇಲೆ ನಿಯಂತ್ರಣ ಇರಲಿ: ನಿಮ್ಮ ಕ್ರೆಡಿಟ್ ರೇಟಿಂಗ್ ಸುಧಾರಿಸಲು ನಿಮ್ಮ ಸಾಲದ ಮೇಲೆ ನಿಯಂತ್ರಣ ಹೊಂದುವುದು ತುಂಬಾ ಮುಖ್ಯವಾಗಿರುತ್ತದೆ. ನಿಮ್ಮ ಎಲ್ಲ ಸಾಲಗಳನ್ನು ಸೂಕ್ಷ್ಮವಾಗಿ ಗಮನಿಸಿ. ಹೆಚ್ಚಿನ ಬಡ್ಡಿ ಸಾಲಗಳು ಮತ್ತು ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ತ್ವರಿತವಾಗಿ ಪಾವತಿಸಲು ಯೋಜಿಸಿ. ಇದು ಇತರ ಸಾಲಗಳ ಮೇಲೆ ಸ್ವಲ್ಪ ನಿಯಂತ್ರಣ ನೀಡುತ್ತದೆ. ಇದು ನಿಮ್ಮ ಸ್ಕೋರ್ ಅನ್ನು ಹೆಚ್ಚಿಸಲು ಸಹ ಸುಲಭಗೊಳಿಸುತ್ತದೆ. ಇನ್ನು ಕ್ರೆಡಿಟ್ ಕಾರ್ಡ್ ಬಳಕೆಯ ಅನುಪಾತವನ್ನು ಸಾಧ್ಯವಾದಷ್ಟು ಕಡಿಮೆ ಇಟ್ಟುಕೊಳ್ಳಬೇಕು. ಕಾರ್ಡ್ ಅನ್ನು ಅದರ ಕ್ರೆಡಿಟ್ ಮಿತಿಯ ಶೇಕಡಾ 30 ರಿಂದ 40 ಕ್ಕಿಂತ ಹೆಚ್ಚು ಬಳಸಬಾರದು.

ಇದನ್ನು ಓದಿ: ನಿದ್ದೆಗೆಟ್ಟು ಯಶಸ್ಸಿನ ಬೆನ್ನೇರಿದ ಪಿಂಕ್ವಿಲ್ಲಾ ನಂದಿನಿ ಶೆಣೈ.. ಸಾಫ್ಟ್​ವೇರ್​ ಕೆಲಸ ಬಿಟ್ಟು ಉದ್ಯಮಿಯಾದ ಯಶೋಗಾಥೆ

ಸಕಾಲದಲ್ಲಿ ಬಿಲ್​ಗಳನ್ನು ಪಾವತಿ ಮಾಡಿ: ಸಾಲದ ಕಂತುಗಳು ಮತ್ತು ಕಾರ್ಡ್ ಬಿಲ್‌ಗಳನ್ನು ಸಕಾಲದಲ್ಲಿ ಪಾವತಿಸುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಇದು ನಿಮ್ಮ ಕ್ರೆಡಿಟ್​ ಸ್ಕೋರ್​​ನ ಧನಾತ್ಮಕವಾಗಿ ಅಥವಾ ಋಣಾತ್ಮಕತೆ ಮೇಲೆ ಪರಿಣಾಮ ಬೀರುವ ಸಾಧನಗಳಲ್ಲೊಂದು. ನಿಮ್ಮ ಉತ್ತಮ ಸ್ಕೋರ್​​ ಅನ್ನು ನೀವು ನಿಗದಿತ ದಿನಾಂಕದಂದು ಮಾಡದಿರುವ ಪಾವತಿ ತಿಂದು ಹಾಕಬಹುದು. ಆದ್ದರಿಂದ ಯಾವುದೇ ಕಾರಣಕ್ಕೂ ಬಿಲ್​ಗಳನ್ನು ನಿಗದಿತ ದಿನಾಂಕದಂದೇ ಪಾವತಿಸುವುದನ್ನು ಮರೆಯಬೇಡಿ. ನಿಮ್ಮ ಎಲ್ಲಾ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗಳನ್ನು ನಿಮ್ಮ ಬ್ಯಾಂಕ್ ಖಾತೆಯಿಂದ ನೇರವಾಗಿ ಪಾವತಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ನೀವು ಶೂನ್ಯ ಭದ್ರತಾ ಸಾಲ ಹೊಂದಿರುವಿರಾ?: ನೀವು ಹಲವಾರು ಶೂನ್ಯ ಭದ್ರತಾ ಸಾಲಗಳನ್ನು ಹೊಂದಿದ್ದರೆ ಅದು ಸಹ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಗೃಹ ಸಾಲ ಮತ್ತು ಚಿನ್ನದ ಮೇಲಿನ ಸಾಲ ಇರಬೇಕು. ಇದು ನಿಮ್ಮ ಸ್ಕೋರ್ ಅನ್ನು ಉತ್ತಮಗೊಳಿಸುತ್ತದೆ. EMI ಗಳು ಹೊರೆಯಾಗಿ ಕಂಡಾಗ ಸಾಲದ ನಿಯಮಗಳನ್ನು ಮಾರ್ಪಡಿಸಿ. ಸಾಲದ ಅವಧಿಯನ್ನು ಹೆಚ್ಚಿಸುವ ಮೂಲಕ ಕಂತು ಮೊತ್ತವನ್ನು ಕಡಿಮೆ ಮಾಡಬಹುದು. ಇದರಿಂದ ಯಾವುದೇ ತೊಂದರೆಗಳಿಲ್ಲದೇ ಕಂತುಗಳನ್ನು ಪಾವತಿಸಲು ಸಾಧ್ಯವಾಗುತ್ತದೆ.

ಆರ್ಥಿಕ ಶಿಸ್ತು ಮುಖ್ಯ: ಒಂದೇ ಬಾರಿಗೆ ಒಂದಕ್ಕಿಂತ ಹೆಚ್ಚು ಸಾಲಗಳಿಗೆ ಅರ್ಜಿ ಸಲ್ಲಿಸಬೇಡಿ. ನೀವು ಸಾಲಕ್ಕಾಗಿ ಹತಾಶರಾಗಿದ್ದೀರಿ ಎಂದು ಬ್ಯಾಂಕ್‌ಗಳು ಭಾವಿಸುತ್ತವೆ. ಈ ರೀತಿಯಾಗಿ, ನೀವು ಪ್ರತಿ ಬಾರಿ ಅರ್ಜಿ ಸಲ್ಲಿಸಿದಾಗ ನಿಮ್ಮ ಸ್ಕೋರ್ ಕಡಿಮೆಯಾಗುತ್ತದೆ. ಅಂಕ ಕಡಿಮೆ ಇರುವಾಗ ಆದಷ್ಟು ಹೊಸ ಸಾಲಕ್ಕೆ ಅರ್ಜಿ ಹಾಕದಿರುವುದು ಉತ್ತಮ.

ನಿಮ್ಮ ಕ್ರೆಡಿಟ್ ವರದಿಯನ್ನು ನಿಯಮಿತವಾಗಿ ಪರಿಶೀಲಿಸಿ. ವರದಿಯಲ್ಲಿನ ಯಾವುದೇ ದೋಷಗಳನ್ನು ತಕ್ಷಣವೇ ಸರಿಪಡಿಸಲು ಇದು ನಿಮ್ಮನ್ನು ಸಕ್ರಿಯಗೊಳಿಸುತ್ತದೆ. ಕಾರ್ಡ್ ಬಿಲ್‌ಗಳನ್ನು ಪಾವತಿಸದ ಕಾರಣ ಸ್ಕೋರ್ ಮೇಲೆ ಪರಿಣಾಮ ಬೀರಿದರೆ, ಆಗ ಬಾಕಿ ಇರುವ ಎಲ್ಲ ಬಿಲ್​ಗಳನ್ನು ಪಾವತಿಸಲು ಅನುಕೂಲವಾಗುತ್ತದೆ.

ಇದನ್ನು ಓದಿ: ಕಷ್ಟಪಟ್ಟು ಸಂಪಾದಿಸಿದ ಆಸ್ತಿ ಮೇಲೆ ಸಾಲ.. ಒಳ್ಳೆಯದ್ದಾ.. ಕೆಟ್ಟದ್ದಾ?; ಇಲ್ಲಿವೆ ಕೆಲ ಟಿಪ್ಸ್​!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.