ETV Bharat / business

ಟ್ವಿಟರ್​ನಲ್ಲಿ ಹೂಡಿಕೆ ಮಾಡಿದ ಎಲಾನ್​ ಮಸ್ಕ್​.. 73.5 ಕೋಟಿ ಮೌಲ್ಯದ ಷೇರುಗಳ ಖರೀದಿ

ಯಶಸ್ವಿ ಉದ್ಯಮಿ, ವಿಶ್ವದ ಶ್ರೀಮಂತರಲ್ಲಿ ಒಬ್ಬರಾದ ಎಲಾನ್ ಮಸ್ಕ್ ಪ್ರಮುಖ ಸಾಮಾಜಿಕ ಮಾಧ್ಯಮವಾದ ಟ್ವಿಟರ್​ನಲ್ಲಿ ಹೂಡಿಕೆ ಮಾಡಿದ್ದಾರೆ. ಇದರ ಭಾಗವಾಗಿ, ಅವರು ಸುಮಾರು 73.5 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ELON MUSK
ಎಲಾನ್​ ಮಸ್ಕ್
author img

By

Published : Apr 4, 2022, 9:27 PM IST

ವಿಶ್ವದ ಅತಿ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಟೆಸ್ಲಾ ಸಿಇಒ ಎಲಾನ್​ ಮಸ್ಕ್​ ಜನಪ್ರಿಯ ಸಾಮಾಜಿಕ ಮಾಧ್ಯಮವಾದ ಟ್ವಿಟರ್​ನಲ್ಲೂ ಶೇ.9.2 ರಷ್ಟು ಹೂಡಿಕೆ ಮಾಡಿದ್ದಾರೆ. ಇದರ ಭಾಗವಾಗಿ ಅವರು ಶೇ.73.5 ಕೋಟಿ ಮೌಲ್ಯದ ಷೇರುಗಳನ್ನು​ ಪಡೆದುಕೊಂಡಿದ್ದಾರೆ. ಎಲಾನ್​ ಮಸ್ಕ್ ಹೂಡಿಕೆ ಮಾಡಿದ ತರುವಾಯ ಷೇರು ಮಾರುಕಟ್ಟೆಯ ಆರಂಭಿಕ ವಹಿವಾಟಿನಲ್ಲೇ ಟ್ವಿಟರ್ ಷೇರುಗಳು ಶೇ.25ರಷ್ಟು ಏರಿಕೆ ಕಂಡಿವೆ.

ಯಶಸ್ವಿ ಉದ್ಯಮಿಯಾದ ಎಲಾನ್​ ಮಸ್ಕ್​ ಈ ಹಿಂದೆ ಅನೇಕ ಬಾರಿ ಟ್ವಿಟರ್​ನ ಸಾಮರ್ಥ್ಯ ಮತ್ತು ಅದರ ವಾಕ್​ಸ್ವಾತಂತ್ರ್ಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಅವರೇ ಟ್ವಿಟರ್​ನಲ್ಲಿ ಹೂಡಿಕೆ ಮಾಡಿದ್ದಾರೆ. ಅಲ್ಲದೇ ದೂರಗಾಮಿ ಆಲೋಚನೆಯಿಂದ, ಟ್ವಿಟರ್​ಗೆ ಹೊಸ ರೂಪ ತರುವ ನಿಟ್ಟಿನಲ್ಲಿ ಹೂಡಿಕೆ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.

ಅದೇ ಅವಧಿಯಲ್ಲಿ ಟೆಸ್ಲಾ ಷೇರುಗಳೂ ಕೂಡ ಸ್ವಲ್ಪಮಟ್ಟಿಗೆ ಹೆಚ್ಚಿವೆ. ಟೆಸ್ಲಾ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಉತ್ತಮ ಉತ್ಪಾದನಾ ಫಲಿತಾಂಶಗಳನ್ನು ಕಂಡ 2 ದಿನಗಳ ಬಳಿಕ, ಎಲಾನ್​ ಮಸ್ಕ್ ಟ್ವಿಟರ್ ಷೇರು ಖರೀದಿಯ ಬಗ್ಗೆ ಬಹಿರಂಗಪಡಿಸಿದ್ದರು.

ಓದಿ: ಮಾರ್ಚ್‌ನಲ್ಲಿ ಉತ್ಪಾದನಾ ಚಟುವಟಿಕೆಯಲ್ಲಿ ನಿರುತ್ಸಾಹ: 6 ತಿಂಗಳಿಂದ ನಿಧಾನಗತಿಯಲ್ಲಿ ಉತ್ಪಾದನೆ, ಮಾರಾಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.