ETV Bharat / business

15 ವರ್ಷದಿಂದ ಸಿಕ್​ ಲೀವ್​, ₹55 ಲಕ್ಷ ಸಂಬಳ: ಆದ್ರೂ ಕಂಪನಿ ವಿರುದ್ಧ ಕೇಸ್​ ಜಡಿದ ಉದ್ಯೋಗಿ! - ಐದು ವರ್ಷಗಳ ಕಾಲ ಕೆಲಸದಿಂದ ದೂರ

ಹದಿನೈದು ವರ್ಷಗಳಿಂದ ಅನಾರೋಗ್ಯ ರಜೆ ಪಡೆದು ತಿಂಗಳಿಗೆ ಲಕ್ಷ ಲಕ್ಷ ಸಂಬಳ ಪಡೆಯುತ್ತಿದ್ದ ವ್ಯಕ್ತಿಯೊಬ್ಬರು ಕೆಲಸ ಕೊಟ್ಟ ಕಂಪನಿ ವಿರುದ್ಧವೇ ಕೋರ್ಟ್ ಮೆಟ್ಟಿಲೇರಿದ್ದಾರೆ.

tech worker on sick leave for 15 years  salary sues for more money  IBM worker news  15 ವರ್ಷದಿಂದ ಸಿಕ್​ ಲೀವ್  ವರ್ಷಕ್ಕೆ 55 ಲಕ್ಷ ಸಂಬಳ  ವೇತನ ಹೆಚ್ಚಿಸಿಲ್ಲವೆಂದು ಕೇಸ್​ 15 ವರ್ಷಗಳಿಂದ ಅನಾರೋಗ್ಯ ರಜೆ  ರಜೆ ಪಡೆದು ತಿಂಗಳಿಗೆ ಲಕ್ಷ ಲಕ್ಷ ಸಂಬಳ  ಕೆಲಸ ಕೊಟ್ಟ ಕಂಪನಿ ವಿರುದ್ಧವೇ ಕೇಸ್  ಮನೆಯಲ್ಲಿದ್ದರೂ ವರ್ಷಕ್ಕೆ 54 ಸಾವಿರ ಯುಕೆ ಪೌಂಡ್  ದೀರ್ಘ ರಜೆಯಲ್ಲಿರುವ ಉದ್ಯೋಗಿ  ಐದು ವರ್ಷಗಳ ಕಾಲ ಕೆಲಸದಿಂದ ದೂರ  ನಿವೃತ್ತಿಯಾಗುವವರೆಗೂ ಕೆಲಸ ಮಾಡದೆ ಸಂಬಳ
ಕೆಲಸ ಕೊಟ್ಟ ಕಂಪನಿ ವಿರುದ್ಧವೇ ಕೇಸ್​ ದಾಖಲಿಸಿದ ಉದ್ಯೋಗಿ
author img

By

Published : May 15, 2023, 8:38 AM IST

ಗಿಲ್ಡ್‌ಫೋರ್ಡ್‌ (ಇಂಗ್ಲೆಂಡ್)​: ಒಂದಲ್ಲ, ಎರಡಲ್ಲ 15 ವರ್ಷ ಸಿಕ್ ಲೀವ್! ಅದೂ ಕಚೇರಿಗೆ ಬಾರದೆಯೂ ಕೂಡಾ. ಹೀಗಿದ್ದೂ 65 ವರ್ಷ ಉದ್ಯೋಗದಲ್ಲಿ ಮುಂದುವರಿದಿದ್ದಾರೆ! ಯಾವುದೇ ಕೆಲಸ ಮಾಡದೇ ವರ್ಷಕ್ಕೆ 54 ಸಾವಿರ ಯುಕೆ ಪೌಂಡ್ (55.3 ಲಕ್ಷ ರೂ.) ಸಂಬಳ ಪಡೆದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ಉದ್ಯೋಗಿಗೆ ಪ್ರಸಿದ್ಧ ಟೆಕ್ ಕಂಪನಿ ಐಬಿಎಂ ನೀಡಿದ ವಿಶೇಷ ಸೌಲಭ್ಯವಿದು. ಆದರೆ, ಈ ಉದ್ಯೋಗಿ ಕಂಪನಿ ವಿರುದ್ಧವೇ ಪ್ರಕರಣ ದಾಖಲಿಸಿದ್ದಾರೆ.

2008 ರಿಂದ ಸುದೀರ್ಘ ರಜೆಯಲ್ಲಿರುವ ಉದ್ಯೋಗಿಯ ಹೆಸರು ಇಯಾನ್ ಕ್ಲಿಫರ್ಡ್. ಇಂಗ್ಲೆಂಡ್‌ನ ಸರ್ರೆಯ ಗಿಲ್ಡ್‌ಫೋರ್ಡ್‌ ನಿವಾಸಿ. ಓದಿದ್ದು ಲಂಡನ್‌ನ ಕಿಂಗ್ಸ್ ಕಾಲೇಜಿನಲ್ಲಿ. 2000 ರಲ್ಲಿ ಲೋಟಸ್ ಡೆವಲಪ್ಮೆಂಟ್ ಎಂಬ ಕಂಪನಿಗೆ ಸೇರಿದರು. ಆ ಬಳಿಕ ಕಂಪನಿಯನ್ನು ಐಬಿಎಂ ಖರೀದಿಸಿದೆ. ಹಾಗಾಗಿ ಇಯಾನ್ ಕ್ಲಿಫರ್ಡ್ ಹೊಸ ಕಂಪನಿಯ ಉದ್ಯೋಗಿಯಾದರು.

ಇಯಾನ್ ಅವರು ಸೆಪ್ಟೆಂಬರ್ 2008 ರಲ್ಲಿ ಅನಾರೋಗ್ಯ ರಜೆ ತೆಗೆದುಕೊಂಡಿದ್ದರು. ಐದು ವರ್ಷಗಳ ಕಾಲ ಕೆಲಸದಿಂದ ದೂರವೇ ಉಳಿದಿದ್ದರು. ಆಗ ಅವರಿಗೆ ಸುಮಾರು 35 ವರ್ಷ ವಯಸ್ಸು. ಆದರೆ 2013ರಲ್ಲಿ ಐಬಿಎಂ ವಿರುದ್ಧವೇ ದೂರು ದಾಖಲಿಸಿದ್ದಾರೆ. ಈ ಐದು ವರ್ಷಗಳಲ್ಲಿ ವೇತನ ಹೆಚ್ಚಿಸಿಲ್ಲ, ರಜೆ ಭತ್ಯೆಯನ್ನೂ ನೀಡಿಲ್ಲ ಎನ್ನುವುದು ಅವರ ದೂರು. ಏಪ್ರಿಲ್ 2013 ರಲ್ಲಿ, ಐಬಿಎಂ ಮತ್ತು ಇಯಾನ್ ನಡುವೆ ರಾಜಿ ಸಂಧಾನ ನಡೆಯಿತು. ಅದರಂತೆ, ಕಂಪನಿಯ ಅಂಗವಿಕಲ ಯೋಜನೆಯಲ್ಲಿ ಸೇರಿಸಲು ಆಡಳಿತ ಮಂಡಳಿ ಒಪ್ಪಿಕೊಂಡಿತು.

ನಿವೃತ್ತಿವರೆಗೂ ಕೆಲಸ ಮಾಡದೆ ಸಂಬಳ!: ಐಬಿಎಂ ಯೋಜನೆ ಬಹಳ ವಿಶೇಷವಾಗಿದೆ. ಈ ಯೋಜನೆಯನ್ನು ಅಂಗವಿಕಲ ನೌಕರರ ಕಲ್ಯಾಣಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಇದರಂತೆ, ಅನಾರೋಗ್ಯದಿಂದ ಕೆಲಸ ಮಾಡಲು ಸಾಧ್ಯವಾಗದ ವ್ಯಕ್ತಿಯನ್ನು ಕೆಲಸದಿಂದ ತೆಗೆದು ಹಾಕುವುದಿಲ್ಲ. ಆತ ಅಥವಾ ಆಕೆ ಉದ್ಯೋಗಿಯಾಗಿಯೇ ಮುಂದುವರಿಯುತ್ತಾರೆ. ಅವರು ಕೆಲಸ ಮಾಡುವ ಅಗತ್ಯವೂ ಇಲ್ಲ. ಸಂಪೂರ್ಣ ಚೇತರಿಸಿಕೊಳ್ಳುವವರೆಗೆ/ ನಿವೃತ್ತಿಯಾಗುವವರೆಗೂ ಪಡೆದ ಸಂಬಳದ ಶೇ 75 ರಷ್ಟನ್ನು ಉದ್ಯೋಗಿಗೆ ವಿಶೇಷ ಭತ್ಯೆಯಾಗಿ ನೀಡಲಾಗುತ್ತದೆ.

ಇಯಾನ್ ಅವರ ಅನಾರೋಗ್ಯ ರಜೆಯ ಸಮಯದಲ್ಲಿ ಅವರ ಸಂಬಳ £ 72,000 ಆಗಿತ್ತು. ಅದರಲ್ಲಿ ಶೇ.75ರಷ್ಟು ಅಂದರೆ 54 ಸಾವಿರ ಪೌಂಡ್​ಗಳನ್ನು ವಾರ್ಷಿಕ ವೇತನವಾಗಿ ನೀಡಲು ಐಬಿಎಂ ಒಪ್ಪಿಗೆ ನೀಡಿದೆ. ಹಾಗಾಗಿ, 65 ವರ್ಷ ವಯಸ್ಸಾಗುವವರೆಗೂ ಸಂಬಳ ಸಿಗಲಿದೆ. ಸುಮಾರು 30 ವರ್ಷಗಳ ಕಾಲ ಇಯಾನ್ ಕ್ಲಿಫರ್ಡ್ 15 ಲಕ್ಷ ಪೌಂಡ್ ಪಡೆಯಲಿದ್ದಾರೆ. ಇದೇ ಸಮಯದಲ್ಲಿ ಕಂಪನಿಯ ರಜಾ ಭತ್ಯೆಗಳಿಗೆ ಸಂಬಂಧಿಸಿದ ದೂರು ಸಹ ಪರಿಹರಿಸಿದೆ. 2013 ರಲ್ಲಿ ಮಾತ್ರ 8,685 ಪೌಂಡ್​ಗಳನ್ನು ಪಾವತಿಸಿದ್ದಾರೆ. ಆದರೆ, ಇನ್ನು ಮುಂದೆ ಸಂಬಳ ಹೆಚ್ಚಳ ಮತ್ತು ರಜಾ ಭತ್ಯೆಗಳ ಬಗ್ಗೆ ಕೇಳಬಾರದು ಎಂದು ಷರತ್ತು ವಿಧಿಸಲಾಗಿದೆ.

ಕಾನೂನು ಹೋರಾಟ: ಇಯಾನ್‌ಗೆ ಕೊಟ್ಟಿರುವ ಭರವಸೆಯಂತೆ ಐಬಿಎಂ ವಾರ್ಷಿಕವಾಗಿ ಇಯಾನ್​ಗೆ 54 ಸಾವಿರ ಪೌಂಡ್​ಗಳನ್ನು ಪಾವತಿಸುತ್ತಿದೆ. 15 ವರ್ಷಗಳ ಕಾಲ ಅನಾರೋಗ್ಯ ರಜೆ ಮೇಲೆ ಉದ್ಯೋಗಿಯಾಗಿ ಮುಂದುವರಿದಿದ್ದಾರೆ. 2022ರಲ್ಲಿ ಮತ್ತೊಮ್ಮೆ ಕಾನೂನು ಹೋರಾಟ ಆರಂಭಿಸಿದ್ದರು. ಉದ್ಯೋಗ ನ್ಯಾಯಮಂಡಳಿಯನ್ನು ಸಂಪರ್ಕಿಸಿದರು. ಆದರೆ ಅದೇ ಹಳೆಯ ವಾದಗಳನ್ನು ಅವರು ಪುನರಾವರ್ತಿಸಿದ್ದಾರೆ. ಹಣದುಬ್ಬರ ಹೆಚ್ಚುತ್ತಿದೆ. ಪ್ರಸ್ತುತ 54 ಸಾವಿರ ಪೌಂಡ್ ವೇತನ ಸಾಕಾಗುತ್ತಿಲ್ಲ. ವೇತನ ಹೆಚ್ಚಿಸಬೇಕು ಎಂದು ಆಗ್ರಹಿಸಿದ್ದಾರೆ. 15 ವರ್ಷಗಳಿಂದ ವೇತನ ಹೆಚ್ಚಳ ಮಾಡದಿರುವುದು ವಿಕಲಚೇತನ ಎಂಬ ತಾರತಮ್ಯ ಮಾಡುತ್ತಿದೆ ಎಂದು ದೂರಿದ್ದಾರೆ.

ಆದರೆ, ಇಯಾನ್ ಕ್ಲಿಫರ್ಡ್​ಗೆ ಉದ್ಯೋಗ ನ್ಯಾಯಮಂಡಳಿ ಆಘಾತ ನೀಡಿದೆ. ಅವರ ಅರ್ಜಿಯನ್ನು ನ್ಯಾಯಾಧೀಶ ಪಾಲ್ ಹೌಸ್ಗೊ ವಜಾಗೊಳಿಸಿದ್ದಾರೆ. ಕ್ರಿಯಾಶೀಲ ನೌಕರರಿಗೆ ವೇತನ ಹೆಚ್ಚಳವಾಗಲಿದೆಯೇ ಹೊರತು ನಿಷ್ಕ್ರೀಯ ನೌಕರರಿಗೆ ಅಲ್ಲ ಎಂದು ಸ್ಪಷ್ಟಪಡಿಸಿದೆ. ವೇತನ ಹೆಚ್ಚಳ ಮಾಡದಿರುವುದು ಅಂಗವೈಕಲ್ಯದಿಂದ ಉಂಟಾಗುವ ಅಡಚಣೆಯೇ ಹೊರತು ತಾರತಮ್ಯವಲ್ಲ ಎಂದು ತೀರ್ಮಾನಿಸಿದೆ.

ಇದನ್ನೂ ಓದಿ: ಆರ್​ಬಿಐ ಹಣಕಾಸು ನೀತಿ ಸರಿಯಾದ ಹಾದಿಯಲ್ಲಿದೆ: ಗವರ್ನರ್ ಶಕ್ತಿಕಾಂತ ದಾಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.