ETV Bharat / business

ಟಿಸಿಎಸ್ ಭಾರತದ ಅತ್ಯುತ್ತಮ ಬ್ರ್ಯಾಂಡ್; ರಿಲಯನ್ಸ್, ಇನ್ಫೋಸಿಸ್‌ಗೆ ನಂತರದ ಸ್ಥಾನ

author img

By

Published : Jun 1, 2023, 8:52 AM IST

ಭಾರತದ ಅತ್ಯುತ್ತಮ ಬ್ರಾಂಡ್​ ಆಗಿ ಐಟಿ ದೈತ್ಯ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಹೊರಹೊಮ್ಮಿದೆ. ಎರಡು ಮತ್ತು ಮೂರನೇ ಸ್ಥಾನಗಳಲ್ಲಿ ರಿಲಯನ್ಸ್ ಹಾಗೂ ಇನ್ಫೋಸಿಸ್ ಕಂಪನಿಗಳಿವೆ.

TCS most valued Indian brand  most valued Indian brand according to Interbrand  total brand value of the top ten brands  ಭಾರತದ ಅತ್ಯುತ್ತಮ ಬ್ರ್ಯಾಂಡ್ ಆಗಿ ಹೊರ ಹೊಮ್ಮಿದ ಟಿಸಿಎಸ್  ಐಟಿ ದೈತ್ಯ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್  ಎರಡು ಮತ್ತು ಮೂರನೇ ಸ್ಥಾನ  ರಿಲಯನ್ಸ್ ಹಾಗೂ ಇನ್ಫೋಸಿಸ್ ಕಂಪನಿಗಳು  ಅತ್ಯಂತ ಮೌಲ್ಯಯುತ ಭಾರತೀಯ ಬ್ರಾಂಡ್  ಟಾಪ್ 50 ಬ್ರಾಂಡ್‌ಗಳ ಪಟ್ಟಿ  ಬ್ರಾಂಡ್‌ಗಳ ಪಟ್ಟಿಯನ್ನು ಇಂಟರ್‌ಬ್ರಾಂಡ್ ಬಿಡುಗಡೆ
ಭಾರತದ ಅತ್ಯುತ್ತಮ ಬ್ರ್ಯಾಂಡ್ ಆಗಿ ಹೊರ ಹೊಮ್ಮಿದ ಟಿಸಿಎಸ್

ನವದೆಹಲಿ: ಐಟಿ ದೈತ್ಯ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಅತ್ಯಂತ ಮೌಲ್ಯಯುತ ಭಾರತೀಯ ಬ್ರಾಂಡ್ ಎಂಬ ಮನ್ನಣೆ ಗಳಿಸಿದೆ. ಟಾಪ್ 50 ಬ್ರಾಂಡ್‌ ಪಟ್ಟಿಯನ್ನು ಇಂಟರ್‌ಬ್ರಾಂಡ್ ಬಿಡುಗಡೆ ಮಾಡಿದೆ. ಟಿಸಿಎಸ್ ₹ 1,09,576 ಕೋಟಿ ಬ್ರಾಂಡ್ ಮೌಲ್ಯದೊಂದಿಗೆ ಅಗ್ರಸ್ಥಾನದಲ್ಲಿದೆ. ರಿಲಯನ್ಸ್ ಇಂಡಸ್ಟ್ರೀಸ್ (₹ 65,320 ಕೋಟಿ) ಮತ್ತು ಇನ್ಫೋಸಿಸ್ (₹ 53,324) ಎರಡು ಮತ್ತು ಮೂರನೇ ಸ್ಥಾನಗಳನ್ನು ಪಡೆದುಕೊಂಡಿವೆ.

* ಕಳೆದ ದಶಕದಲ್ಲಿ ಇತರ ಕ್ಷೇತ್ರಗಳನ್ನು ಹಿಂದಿಕ್ಕಿ ತಂತ್ರಜ್ಞಾನ ಕ್ಷೇತ್ರ ಅಗ್ರಸ್ಥಾನ ಪಡೆದುಕೊಂಡಿದೆ. ಟಾಪ್ 5 ಬ್ರಾಂಡ್‌ಗಳಲ್ಲಿ 3 ತಂತ್ರಜ್ಞಾನ ಕಂಪನಿಗಳಿವೆ. ಹಣಕಾಸು ಸೇವಾ ವಲಯದ 9 ಕಂಪನಿಗಳು ಪಟ್ಟಿಯಲ್ಲಿ ಮುಂಚೂಣಿ ಸ್ಥಾನ ಪಡೆದಿವೆ. ಗೃಹ ನಿರ್ಮಾಣ ಮತ್ತು ಇನ್ಫ್ರಾ ವಲಯದ 7 ಕಂಪನಿಗಳಿಗೆ ಈ ಪಟ್ಟಿಯಲ್ಲಿ ಸ್ಥಾನ ಸಿಕ್ಕಿದೆ.

* ಕಳೆದ ಹತ್ತು ವರ್ಷಗಳಲ್ಲಿ FMCG ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಲಯಗಳಲ್ಲಿ ಒಂದು. ಈ ವಲಯವು ಶೇ 25 ಸಂಯುಕ್ತ ವಾರ್ಷಿಕ ಬೆಳವಣಿಗೆ ದರ (CAGR) ದಾಖಲಿಸುತ್ತಿದೆ. ಮನೆ ನಿರ್ಮಾಣ, ಇನ್ಫ್ರಾ (ಶೇ 17) ಮತ್ತು ತಂತ್ರಜ್ಞಾನ (ಶೇ 14) ನಂತರದ ಸ್ಥಾನಗಳನ್ನು ಅಲಂಕರಿಸಿವೆ. ಗೃಹ ನಿರ್ಮಾಣ ಮತ್ತು ಮೂಲಸೌಕರ್ಯ ವಲಯ ₹ 6900 ಕೋಟಿಯಿಂದ ₹34,400 ಕೋಟಿಗೆ ಬೆಳೆದರೆ, ತಂತ್ರಜ್ಞಾನ ₹ 69,300 ಕೋಟಿಯಿಂದ ₹2.5 ಲಕ್ಷ ಕೋಟಿಗೆ ಜಿಗಿದಿದೆ.

* ಅಗ್ರ 10 ಬ್ರಾಂಡ್‌ಗಳ ಒಟ್ಟು ಮೌಲ್ಯದ ಶೇ 46ನ್ನು ಅಗ್ರ ಮೂರು ಬ್ರಾಂಡ್‌ಗಳು ಹೊಂದಿವೆ. ಟಾಪ್ 5 ಬ್ರ್ಯಾಂಡ್‌ಗಳು ಒಟ್ಟು ಪಟ್ಟಿಯ ಶೇ 40 ಹೊಂದಿವೆ.

ಉದ್ಯೋಗಿಗಳಿಗೆ ನೋಟಿಸ್​: ಐಟಿ ವಲಯದ ದೈತ್ಯ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) 'ಕಚೇರಿಯಿಂದ ಕೆಲಸ' ಆದೇಶ ಉಲ್ಲಂಘಿಸಿದ ಉದ್ಯೋಗಿಗಳಿಗೆ ಮೆಮೊಗಳನ್ನು ಕಳುಹಿಸಿದೆ. ಟಾಟಾ ಗ್ರೂಪ್‌ನ ಕಂಪನಿಯು ತನ್ನ ಉದ್ಯೋಗಿಗಳಿಗೆ ತಿಂಗಳಲ್ಲಿ ಕನಿಷ್ಠ 12 ದಿನ ಕಚೇರಿಗೆ ಬರುವಂತೆ ಆದೇಶಿಸಿತ್ತು. ನೌಕರರು ರೋಸ್ಟರ್ ಉಲ್ಲಂಘಿಸಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಾಫ್ಟ್‌ವೇರ್ ಕಂಪನಿ ಮೆಮೊದಲ್ಲಿ ಎಚ್ಚರಿಕೆ ನೀಡಿದೆ.

ವರದಿಗಳ ಪ್ರಕಾರ, ಟಿಸಿಎಸ್‌ ಮೆಮೊದಲ್ಲಿ, "ನಿಯೋಜಿತ ರೋಸ್ಟರ್‌ನ ಪ್ರಕಾರ ನಿಮ್ಮ ಕಚೇರಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ವರದಿ ಮಾಡುವುದನ್ನು ಪ್ರಾರಂಭಿಸಲು ನಿಮಗೆ ಎಚ್ಚರಿಕೆ ನೀಡಲಾಗಿದೆ ಸೂಚಿಸಲಾಗಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಟಿಸಿಎಸ್ ನೌಕರರಿಗೆ ವಾರದಲ್ಲಿ ಮೂರು ದಿನ ಕಚೇರಿಗೆ ಬರುವಂತೆ ಸೂಚಿಸಿತ್ತು. ಕಳೆದ ಕೆಲವು ತಿಂಗಳುಗಳಿಂದ ಭಾರತದಲ್ಲಿನ ಉದ್ಯೋಗಿಗಳನ್ನು ಕಚೇರಿಗೆ ಬರುವಂತೆ ಪ್ರೋತ್ಸಾಹಿಸುತ್ತಿದೆ.

ಟಿಸಿಎಸ್ ತೊರೆದ ರಾಜೇಶ್ ಗೋಪಿನಾಥನ್: ಟಿಸಿಎಸ್​ ತೊರೆಯುವ ಮುನ್ನ ನಿರ್ಗಮಿತ ಟಿಸಿಎಸ್ ಸಿಇಒ ರಾಜೇಶ್ ಗೋಪಿನಾಥನ್ ಅವರು ತಮ್ಮ ಉದ್ಯೋಗಿಗಳಿಗೆ ಭಾವನಾತ್ಮಕ ಇಮೇಲ್ ಕಳುಹಿಸಿದ್ದರು. ಗೋಪಿನಾಥನ್ ಮೇ 31 ರಂದು ಕಂಪನಿಯ ಸಿಇಒ ಹುದ್ದೆಯಿಂದ ಕೆಳಗಿಳಿದಿದ್ದಾರೆ. ಆರು ವರ್ಷಗಳ ಕಾಲ ಈ ಸ್ಥಾನದಲ್ಲಿ ಇದ್ದರು. ಮೇ 29 ರಂದು ಕಳುಹಿಸಿರುವ ಇಮೇಲ್​ನಲ್ಲಿ ತಮ್ಮ ಅಧಿಕಾರಾವಧಿಯ ಸಾಧನೆಗಳನ್ನು ತಿಳಿಸಿದ್ದಾರೆ. ಈ ಅವಧಿಯಲ್ಲಿ ಕಂಪನಿಯ ಆದಾಯವು $ 10.4 ಬಿಲಿಯನ್ ಹೆಚ್ಚಾಗಿದೆ ಎಂದು ಬರೆದಿದ್ದಾರೆ. ಕಂಪನಿಯು ಲಾಭಾಂಶ ಮತ್ತು ಷೇರು ಮರುಖರೀದಿಗಳ ಮೂಲಕ ಹೂಡಿಕೆದಾರರಿಗೆ $27.3 ಬಿಲಿಯನ್ ಹಿಂದಿರುಗಿಸಿದೆ.

ಇಂದಿನಿಂದ ಹೊಸ ಸಿಇಒ: ಗೋಪಿನಾಥನ್ ಅವರು ಕಂಪನಿಯೊಂದಿಗೆ ತಮ್ಮ 22 ವರ್ಷಗಳ ಭಾಂದವ್ಯದ ಬಗ್ಗೆ ಬರೆದಿದ್ದಾರೆ. ಈಗ ಕಂಪನಿಯ ಹಿಡಿತ ಕೃತಿವಾಸನ್ ಅವರ ಕೈ ಸೇರಿದೆ. ಜೂನ್ 1 ರಂದು ಸಿಇಒ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ. TCS ಭಾರತದ ಅತಿದೊಡ್ಡ ಸಾಫ್ಟ್‌ವೇರ್ ಕಂಪನಿಯಾಗಿದೆ. ಟಾಟಾ ಸಮೂಹ ಒಡೆತನ ಹೊಂದಿದೆ.

ಇದನ್ನೂ ಓದಿ: ಭಾರತೀಯ ಕುಟುಂಬಗಳ ಉಳಿತಾಯ ಪ್ರಮಾಣ ಶೇ 7.6ಕ್ಕೆ ಇಳಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.