ಮುಂಬೈ(ಮಹಾರಾಷ್ಟ್ರ): ಹೂಡಿಕೆದಾರರಿಂದ ಅನಿರೀಕ್ಷಿತ ಪ್ರತಿಕ್ರಿಯೆಯೊಂದಿಗೆ ಹೊಸ ದಾಖಲೆ ಸೃಷ್ಟಿಸಿರುವ ಟಾಟಾ ಟೆಕ್ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಷೇರುಗಳು ಇಂದು ಷೇರುಪೇಟೆಯಲ್ಲಿ ಲಿಸ್ಟ್ ಆಗಿವೆ. ವಿಶೇಷವೆಂದರೆ, ಎಲ್ಲರ ನಿರೀಕ್ಷೆಯಂತೆ ಷೇರುಗಳು ಬಂಪರ್ ಬೆಲೆಗೆ ಲಿಸ್ಟಿಂಗ್ ಆದವು. ಇಶ್ಯೂ ಬೆಲೆಗೆ ಹೋಲಿಸಿದರೆ ಷೇರುಗಳು ಶೇ.140ರಷ್ಟು ಲಾಭದೊಂದಿಗೆ ವಹಿವಾಟು ಆರಂಭಿಸಿದ್ದು ಷೇರು ಮಾರುಕಟ್ಟೆ ತಜ್ಞ ಹುಬ್ಬೇರಿಸಿತು.
ಟಾಟಾ ಟೆಕ್ ಐಪಿಒ: ಟಾಟಾ ಟೆಕ್ ಐಪಿಒ ಇಶ್ಯೂ ಬೆಲೆ ₹500 ಮತ್ತು ಈ ಷೇರು ಇಂದು ಮುಂಬೈ ಷೇರು ಮಾರುಕಟ್ಟೆಯಲ್ಲಿ (ಬಿಎಸ್‌ಇ) ₹1,200 ರ ಸಮೀಪದಲ್ಲಿ ಪಟ್ಟಿ ಮಾಡಲಾಯಿತು. ಲಿಸ್ಟಿಂಗ್‌ನಲ್ಲಿಯೇ ಪ್ರತಿ ಷೇರಿಗೆ ₹700 ಲಾಭವಾಗಿರುವುದು ಗಮನಾರ್ಹ. ಈ ಲೆಕ್ಕಾಚಾರದಂತೆ, ಐಪಿಒದಲ್ಲಿ ಷೇರುಗಳನ್ನು ಹಂಚಿಕೆ ಮಾಡಿದವರು ಪ್ರತಿ ಲಾಟ್ (30 ಷೇರುಗಳು) ಮೇಲೆ 15 ಸಾವಿರ ರೂ.ಗಳನ್ನು ಹೂಡಿಕೆ ಮಾಡಿದ್ದಾರೆ. ಅಷ್ಟೇ ಅಲ್ಲ, ಈ ಮುಖೇನ ಲಿಸ್ಟಿಂಗ್ ಬೆಲೆಯಲ್ಲಿ 21 ಸಾವಿರ ರೂಪಾಯಿ ಲಾಭ ಗಳಿಸಿದ್ದಾರೆ. ನಂತರ ಷೇರುಗಳು ಬಿಎಸ್‌ಇಯಲ್ಲಿ 1,400 ರೂಪಾಯಿಯ ನಂತರ ತುಸು ಇಳಿಕೆ ಕಂಡು ಬೆಳಿಗ್ಗೆ 10:37ರ ಸುಮಾರಿಗೆ 1,303.80 ರೂಪಾಯಿಯ ಸಮೀಪ ವಹಿವಾಟು ನಡೆಸುತ್ತಿತ್ತು.
ಟಾಟಾ ಸಮೂಹದಿಂದ ಎರಡು ದಶಕಗಳ ನಂತರ ಬಂದಿರುವ ಟಾಟಾ ಟೆಕ್ ಐಪಿಒಗೆ ಭಾರಿ ಪ್ರತಿಕ್ರಿಯೆ ಸಿಕ್ಕಿದ್ದು ಗೊತ್ತೇ ಇದೆ. 3,042 ಕೋಟಿ ರೂಪಾಯಿ ಸಂಗ್ರಹಿಸಿದ ಈ IPO ಬೃಹತ್ ಚಂದಾದಾರಿಕೆ ಪಡೆಯಿತು. ಒಟ್ಟು 4.5 ಕೋಟಿ ಷೇರುಗಳನ್ನು ಚಂದಾದಾರಿಕೆಗೆ ಇಡಲಾಗಿದ್ದು, ಕೊನೆಯ ದಿನದ ಅಂತ್ಯಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ಬಂದಿದೆ. ಒಟ್ಟು 312.42 ಕೋಟಿ ಷೇರುಗಳಿಗೆ ಬಿಡ್ ಸ್ವೀಕರಿಸಲಾಗಿದೆ. ನೀಡಿಕೆಯ ಬೆಲೆಯನ್ನು ಸುಮಾರು 500 ರೂಪಾಯಿ ಎಂದು ಲೆಕ್ಕ ಹಾಕಿದರೆ, ಈ ಮೊತ್ತವು 1.56 ಲಕ್ಷ ಕೋಟಿ ರೂಪಾಯಿಗೆ ಸಮನಾಗಿರುತ್ತದೆ.
ಟಾಟಾ ಟೆಕ್ 18 ಅಂತರರಾಷ್ಟ್ರೀಯ ವಿತರಣಾ ಕೇಂದ್ರಗಳನ್ನು ಹೊಂದಿದೆ. ಸುಮಾರು 11 ಸಾವಿರ ನೌಕರರು ಕೆಲಸ ಮಾಡುತ್ತಿದ್ದಾರೆ. ವ್ಯವಹಾರಗಳು ಎಂಜಿನಿಯರಿಂಗ್, ಸಂಶೋಧನೆ ಮತ್ತು ಅಭಿವೃದ್ಧಿ ಸೇವೆಗಳು, ಡಿಜಿಟಲ್ ಎಂಟರ್‌ಪ್ರೈಸ್ ಸೇವೆಗಳು, ಶಿಕ್ಷಣ ಕೊಡುಗೆಗಳು, ಮೌಲ್ಯವರ್ಧಿತ ಮರುಮಾರಾಟ ಮತ್ತು ಐ-ಉತ್ಪನ್ನಗಳ ಕೊಡುಗೆಗಳಾಗಿವೆ. ಇದು ಮುಖ್ಯವಾಗಿ ಟಾಟಾ ಮೋಟಾರ್ಸ್, ಜಾಗ್ವಾರ್ ಲ್ಯಾಂಡ್ ರೋವರ್ ಮತ್ತು ಟಾಟಾ ಗ್ರೂಪ್‌ನ ಇತರ ಕಂಪನಿಗಳಿಗೆ ಸೇವೆ ಸಲ್ಲಿಸುತ್ತದೆ.
ಓದಿ: ಎಲ್ಐಸಿಯಿಂದ ಹೊಸ ಪಾಲಿಸಿ: 5 ವರ್ಷ ಕಟ್ಟಿದ್ರೆ ಸಾಕು, ಜೀವನ ಪೂರ್ತಿ ಆದಾಯ!