ETV Bharat / business

ಹಣದುಬ್ಬರದ ಭಯ:  ಅಮೆರಿಕ ಬಳಿಕ ಬಡ್ಡಿದರ ಹೆಚ್ಚಿಸಿದ ಸ್ವಿಸ್ - Switzerlands central bank

ವಿಶ್ವಾದ್ಯಂತ ಆಹಾರ ಮತ್ತು ಇಂಧನ ಬೆಲೆಗಳು ಹೆಚ್ಚುತ್ತಿರುವ ಕಾರಣ ಹಣದುಬ್ಬರದ ಒತ್ತಡವನ್ನು ನಿವಾರಿಸುವ ನಿಟ್ಟಿನಲ್ಲಿ ಸ್ವಿಟ್ಜರ್ಲೆಂಡ್‌ನ ಸೆಂಟ್ರಲ್ ಬ್ಯಾಂಕ್ ಬಡ್ಡಿ ದರವನ್ನ 1/2 ಪಾಯಿಂಟ್​ ಹೆಚ್ಚಿಸಿದೆ.

ಸ್ವಿಸ್ ಬ್ಯಾಂಕ್​
ಸ್ವಿಸ್ ಬ್ಯಾಂಕ್​
author img

By

Published : Jun 17, 2022, 7:42 AM IST

ಜಿನೆವಾ: ಸ್ವಿಟ್ಜರ್ಲೆಂಡ್‌ನ ಸೆಂಟ್ರಲ್ ಬ್ಯಾಂಕ್ ಗುರುವಾರ ಬಡ್ಡಿ ದರವನ್ನ 1/2 ಪಾಯಿಂಟ್​ ಹೆಚ್ಚಿಸಿದೆ. ಸುಮಾರು 15 ವರ್ಷಗಳ ನಂತರ ಮೊದಲ ಬಾರಿಗೆ ಬಡ್ಡಿ ದರ ಹೆಚ್ಚಳ ಮಾಡಲಾಗಿದ್ದು, ವಿಶ್ವಾದ್ಯಂತ ಆಹಾರ ಮತ್ತು ಇಂಧನ ಬೆಲೆಗಳು ಹೆಚ್ಚುತ್ತಿರುವ ಕಾರಣ ಹಣದುಬ್ಬರದ ಒತ್ತಡವನ್ನು ನಿವಾರಿಸುವ ನಿಟ್ಟಿನಲ್ಲಿ ಏರಿಕೆ ಮಾಡಿದೆ.

ದರ ಏರಿಕೆ ಶುಕ್ರವಾರದಿಂದ ಜಾರಿಗೆ ಬರಲಿದೆ. ಸ್ಥಿರ ಕರೆನ್ಸಿ ಎಂದು ಪರಿಗಣಿಸಲಾದ ಸ್ವಿಸ್ ಫ್ರಾಂಕ್, ಮಾರುಕಟ್ಟೆಗಳಲ್ಲಿ ಯೂರೋ ಮತ್ತು ಅಮೆರಿಕ ಡಾಲರ್ ವಿರುದ್ಧ ಜಿಗಿದಿದೆ. ಸೈಟ್​ ಡಿಪಾಸಿಟ್ ಮೇಲಿನ ದರವನ್ನು ಅರ್ಧ ಪಾಯಿಂಟ್‌ನಿಂದ 0.25 ಪ್ರತಿಶತಕ್ಕೆ ಹೆಚ್ಚಿಸಲಾಗುವುದು ಎಂದು ಬ್ಯಾಂಕ್ ಹೇಳಿದೆ.

ಸ್ವಿಸ್ ಸೆಂಟ್ರಲ್ ಬ್ಯಾಂಕ್ ಕೊನೆಯದಾಗಿ ಜನವರಿ 2015 ರಲ್ಲಿ ಬಡ್ಡಿದರಗಳನ್ನು ಬದಲಾಯಿಸಿತ್ತು. ಆದರೆ, ಸೆಪ್ಟೆಂಬರ್ 2007 ರಲ್ಲಿ ಬಡ್ಡಿದರ ಹೆಚ್ಚಳ ಮಾಡಿತ್ತು. ಇತ್ತೀಚಿನ ತಿಂಗಳುಗಳಲ್ಲಿ ಜಾಗತಿಕ ಆರ್ಥಿಕ ಬೆಳವಣಿಗೆಯು ಗಮನಾರ್ಹವಾಗಿ ನಿಧಾನಗೊಂಡಿದೆ. ಉಕ್ರೇನ್‌- ರಷ್ಯಾದ ಯುದ್ಧದಿಂದ ಮತ್ತು ಚೀನಾದಲ್ಲಿ ಕಂಡುಬಂದ ಕೊರೊನಾ ವೈರಸ್, ಲಾಕ್‌ಡೌನ್‌ಗಳ ಪರಿಣಾಮದಿಂದ ಆರ್ಥಿಕ ಕ್ಷೇತ್ರದ ಮೇಲೆ ಹೊಡೆತ ಬಿದ್ದಿದ್ದು, ಕೆಲವು ಸರಕುಗಳ ಬೆಲೆಗಳನ್ನು ಹೆಚ್ಚಿಸಿವೆ. ಇಂಧನ ದರ ಸಹ ಹೆಚ್ಚಾಗುತ್ತಿದೆ ಎಂದು ರಾಷ್ಟ್ರೀಯ ಬ್ಯಾಂಕ್ ಹೇಳಿದೆ.

ಇದನ್ನೂ ಓದಿ: ಮಾಸ್ಟರ್​​ ಕಾರ್ಡ್​ ವ್ಯವಹಾರದ ಮೇಲಿನ ನಿರ್ಬಂಧ ತೆರವು ಮಾಡಿದ ಆರ್​ಬಿಐ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.