ಚೆನ್ನೈ(ತಮಿಳುನಾಡು) : ಚೆನ್ನೈ ಮೂಲದ ಕಂಪನಿಯಾದ ಸುಂದರಂ ಫೈನಾನ್ಸ್ ತನ್ನ ಠೇವಣಿದಾರರಿಗೆ ಶುಭ ಸುದ್ದಿ ನೀಡಿದೆ. ಗ್ರಾಹಕರು ತನ್ನಲ್ಲಿ 2 ಮತ್ತು 3 ವರ್ಷಗಳಿಂದ ಇಟ್ಟಿರುವ ಠೇವಣಿಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದೆ. ಪರಿಷ್ಕರಿಸಿದ ಬಡ್ಡಿದರ ಮೇ 9ರಿಂದಲೇ ಜಾರಿಗೆ ಬರಲಿದೆ.
ಕಂಪನಿ ತಿಳಿಸಿದಂತೆ 2 ವರ್ಷಗಳ ಠೇವಣಿಗಳ ಮೇಲೆ ಈಗಿರುವ ಶೇ.5.65 ರಿಂದ ಶೇ.5.90ರಷ್ಟು ಹೆಚ್ಚಳ ಮತ್ತು 3 ವರ್ಷಗಳ ಠೇವಣಿಗಳ ಮೇಲೆ ಶೇ.5.80ರ ಬದಲಾಗಿ ಶೇ.6.05 ರಷ್ಟು ಬಡ್ಡಿದರವನ್ನು ಪರಿಷ್ಕರಿಸಲಾಗಿದೆ ಎಂದಿದೆ.
ಇದಲ್ಲದೇ ಹಿರಿಯ ನಾಗರಿಕರಿಗೆ 2 ವರ್ಷಗಳ ಠೇವಣಿಗಳ ಮೇಲೆ ಶೇ.6.15 ರಿಂದ ಶೇ.6.40ರಷ್ಟು ಹೆಚ್ಚಳ ಮತ್ತು ಮೂರು ವರ್ಷಗಳ ಅವಧಿಯ ಠೇವಣಿಗಳ ಮೇಲೆ ಶೇ.6.30ರ ಬದಲಾಗಿ ಶೇ.6.55ಕ್ಕೆ ಹೆಚ್ಚಳ ಮಾಡಿದೆ.
ಕಂಪನಿಯು ಠೇವಣಿಗಳ ಮೇಲಿನ ಬಡ್ಡಿದರಗಳನ್ನು 12 ತಿಂಗಳವರೆಗೆ ಉಳಿಸಿಕೊಂಡಿದೆ. ಇದು ಹಿರಿಯ ನಾಗರಿಕರಿಗೆ ಶೇ.6ರಷ್ಟಿದ್ದರೆ, ಸಾಮಾನ್ಯರಿಗೆ ಶೇ.5.50ರಷ್ಟು ನೀಡಿದೆ. ಮಾರ್ಚ್ 31ಕ್ಕೆ ಅನ್ವಯಿಸುವಂತೆ ಕಂಪನಿಯಲ್ಲಿ 4,103 ಕೋಟಿ ರೂಪಾಯಿ ಠೇವಣಿ ಇದೆ.
ಓದಿ: 2 ವರ್ಷದ ಬಳಿಕ ರೆಪೊ ದರ ಹೆಚ್ಚಳ: ಶೇ.4.40ಕ್ಕೆ ಏರಿಸಿ ಆರ್‌ಬಿಐ ಘೋಷಣೆ