ETV Bharat / business

ಷೇರು ಮಾರುಕಟ್ಟೆಗಳಲ್ಲಿ ಯುವ ಹೂಡಿಕೆದಾರರ ಹೆಚ್ಚಳ: 30 ವರ್ಷದೊಳಗಿನವರೇ ಅಧಿಕ - ಅಧ್ಯಯನ - Substantial jump in number of young investors

ದೇಶದ ಷೇರು ಮಾರುಕಟ್ಟೆಗಳಲ್ಲಿ ಯುವ ಹೂಡಿಕೆದಾರರ ಪ್ರಮಾಣ ಏರಿಕೆ ಕಂಡಿದೆ. 18 ರಿಂದ 30 ವರ್ಷ ವಯಸ್ಸಿನೊಳಗಿನ ಹೂಡಿಕೆದಾರರೇ ಹೆಚ್ಚಿದ್ದಾರೆ ಎಂದು ಭಾರತೀಯ ಚಿಲ್ಲರೆ ಬ್ರೋಕರೇಜ್ ಮಾರುಕಟ್ಟೆಯ ಬೈನ್ ಅಂಡ್​​ ಕಂಪನಿಯ ಅಧ್ಯಯನ ಹೇಳಿದೆ.

ಷೇರು ಮಾರುಕಟ್ಟೆಗಳಲ್ಲಿ ಯುವ ಹೂಡಿಕೆದಾರರು ಹೆಚ್ಚಳ

author img

By ETV Bharat Karnataka Team

Published : Nov 29, 2023, 8:40 PM IST

ನವದೆಹಲಿ: ಆರ್ಥಿಕ ತಿಳಿವಳಿಕೆ, ತಿಕ್ಕಾಟವಿಲ್ಲದ ಗ್ರಾಹಕರ ಆನ್​ಬೋರ್ಡಿಂಗ್​ ಮತ್ತು ಬಳಕೆದಾರ ಸ್ನೇಹಿ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಂದಾಗಿ ಷೇರು ಮಾರುಕಟ್ಟೆಗಳಲ್ಲಿ ಯುವ ಹೂಡಿಕೆದಾರರ ಪ್ರಮಾಣ ಗಣನೀಯ ಏರಿಕೆಗೆ ಕಾರಣವಾಗಿದೆ. ಡಿಜಿಟಲ್ ಹಾಗೂ ಡಿಸ್ಕೌಂಟ್‌ನ ಸಕ್ರಿಯ ಗ್ರಾಹಕರಲ್ಲಿ ಶೇಕಡಾ 70 ರಿಂದ 80 ರಷ್ಟಿದೆ. ಭಾರತೀಯ ಚಿಲ್ಲರೆ ಬ್ರೋಕರೇಜ್ ಮಾರುಕಟ್ಟೆಯ ಬೈನ್ ಅಂಡ್​​ ಕಂಪನಿಯ ಇತ್ತೀಚಿನ ಅಧ್ಯಯನದ ಪ್ರಕಾರ 18-30 ವರ್ಷ ವಯಸ್ಸಿನೊಳಗಿನ ಹೂಡಿಕೆದಾರರೇ ಹೆಚ್ಚಿದ್ದಾರೆ ಎಂದು ತಿಳಿದು ಬಂದಿದೆ.

ಬ್ಯಾಂಕ್​ಗಳ ಹೂಡಿಕೆ ಮತ್ತು ದಲ್ಲಾಳಿಗಳಲ್ಲಿ ಶೇಕಡಾ 70-75 ರಷ್ಟು ಜನರು 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿದ್ದಾರೆ. ದೇಶದ 2ನೇ ದರ್ಜೆಯ ನಗರಗಳೂ ಆರ್ಥಿಕವಾಗಿ ಬಲಾಢ್ಯವಾಗುತ್ತಿವೆ. ಇದು ಈಗಿನ ನಗದು ವಹಿವಾಟಿನ 3/1 ಭಾಗವನ್ನು ಹೊಂದಿವೆ ಎಂದು ಅಧ್ಯಯನ ಹೇಳಿದೆ.

ಚಿಲ್ಲರೆ ವ್ಯಾಪಾರ ಅಭಿವೃದ್ಧಿ: ಭಾರತೀಯ ಚಿಲ್ಲರೆ ಬ್ರೋಕರೇಜ್ ಉದ್ಯಮವು ಗಮನಾರ್ಹವಾದ ಬೆಳವಣಿಗೆ ಕಂಡಿದೆ. 2019 ರ ಹಣಕಾಸು ವರ್ಷದಲ್ಲಿ ಈ ಉದ್ಯಮವು 14 ಸಾವಿರ ಕೋಟಿಗಳಷ್ಟಿದ್ದರೆ, 2023 ರಲ್ಲಿ 27 ಸಾವಿರ ಕೋಟಿಯಷ್ಟು ದಾಟಿದೆ. ಅಂದರೆ ಸರಿಸುಮಾರು ಶೇಕಡಾ 17 ರಷ್ಟು ಹೆಚ್ಚಳ ಕಂಡಿದೆ ಎಂದು ಸಿಎಜಿಆರ್​ ವರದಿ ಹೇಳಿದೆ.

ಇಂದಿನ ಜನರು ಆರ್ಥಿಕತೆಯನ್ನು ಹೆಚ್ಚಾಗಿ ತಿಳಿದುಕೊಳ್ಳುತ್ತಿರುವ ಕಾರಣ, ಸಾಮೂಹಿಕ ಸಿರಿವಂತಿಕೆ ಹಾಗೂ ವೈಯಕ್ತಿಕ ಸಿರಿವಂತಿಕೆ ಬೆಳೆಯುತ್ತಿದೆ. ಷೇರು ವ್ಯವಹಾರ ನಡೆಸಲು ಬೇಕಾಗುವ ಡಿಮ್ಯಾಟ್ ಖಾತೆಗಳ ಸಂಖ್ಯೆಯು 2019 ಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ. ಈ ವರ್ಷ ಇವುಗಳು 115 ಮಿಲಿಯನ್‌ ತಲುಪಿವೆ. ಕೋವಿಡ್ -19 ಸಾಂಕ್ರಾಮಿಕದ ಬಳಿಕ ಆರ್ಥಿಕ ಉಳಿತಾಯಕ್ಕೆ ಜನರು ಹೆಚ್ಚಿನ ಆದ್ಯತೆ ನೀಡುತ್ತಿರುವ ಕಾರಣ ಈ ಬೆಳವಣಿಗೆ ಉಂಟಾಗಿದೆ ಎಂಬುದನ್ನು ವರದಿ ಕಂಡು ಕೊಂಡಿದೆ.

ಉತ್ತುಂಗದಲ್ಲಿ ಡಿಜಿಟಲ್​ ಉದ್ಯಮ: ಹಣಕಾಸು ವಹಿವಾಟಿಗೆ ಅತಿ ಸುಲಭ ವ್ಯವಸ್ಥೆಯಾದ ಡಿಜಿಟಲ್​ ವೇದಿಕೆಯು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಬಂಡವಾಳ ಮಾರುಕಟ್ಟೆಗಳಲ್ಲಿ ಮಾರುಕಟ್ಟೆಗಳಲ್ಲಿ ಚಿಲ್ಲರೆ ವ್ಯಾಪಾರವೂ ಅಭಿವೃದ್ಧಿ ಕಂಡಿದೆ. ಆದಾಗ್ಯೂ ಪ್ರತಿ ಬಳಕೆದಾರರ ಸರಾಸರಿ ಆದಾಯ (ಎಆರ್​ಪಿಯು) ತುಸು ಇಳಿಕೆ ಕಂಡಿದೆ. 2019 ರಲ್ಲಿ 6 ಸಾವಿರ ಆದಾಯವಿದ್ದರೆ, 2023 ರಲ್ಲಿ 5 ಸಾವಿರಕ್ಕೆ ಇಳಿಕೆ ಕಂಡಿದೆ.

ದೇಶದ ಜಿಡಿಪಿ ದರ ಹೆಚ್ಚಳ: ದೇಶದ 2024-25 ರ ಜಿಡಿಪಿ ಬೆಳವಣಿಗೆಯ ಮುನ್ನೋಟವು ಹಿಂದಿನ ಶೇಕಡಾ 6.9 ರಿಂದ ಶೇಕಡಾ 6.4 ಕ್ಕೆ ಇರಲಿದೆ ಎಂದು ಎಸ್ ಅಂಡ್ ಪಿ ರೇಟಿಂಗ್ ಏಜೆನ್ಸಿ ತಿಳಿಸಿದೆ. ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ ಆಫ್ ಶೇಕಡಾ 6.5 ಕ್ಕಿಂತ ಕಡಿಮೆ ಇರಲಿದೆ ಎಂದು ಅಂದಾಜಿಸಿದ್ದರೆ, ಐಎಂಎಫ್, ವಿಶ್ವ ಬ್ಯಾಂಕ್, ಎಡಿಬಿ ಮತ್ತು ಫಿಚ್ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿಯನ್ನು ಶೇಕಡಾ 6.3 ರಷ್ಟು ಬೆಳವಣಿಗೆಯಾಗಲಿದೆ ಎಂದು ಅಂದಾಜಿಸಿವೆ.

ಇದನ್ನೂ ಓದಿ: 16ನೇ ಹಣಕಾಸು ಆಯೋಗದ ನಿಯಮಗಳಿಗೆ ಕೇಂದ್ರ ಸಚಿವ ಸಂಪುಟ ಅಸ್ತು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.