ETV Bharat / business

ಗಂಭೀರ ಕಾಯಿಲೆಗಳು ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗುತ್ತದೆ; ಆರೋಗ್ಯ ವಿಮೆ ಪಾಲಿಸಿಯಲ್ಲಿ ಈ ಬಗ್ಗೆ ಕೂಡ ಗಮನಹರಿಸಿ - ಕ್ರಿಟಿಕಲ್​ ಕೇರ್ ಹೇಲ್ತ್​​​​ ಪಾಲಿಸಿ ವಿಮೆ

ಕ್ರಿಟಿಕಲ್​ ಕೇರ್ ಹೇಲ್ತ್​​​​ ಪಾಲಿಸಿ ವಿಮೆ ಹೊಂದಿರುವವರಿಗೂ ದೀರ್ಘವಾದಿ ಕಾಯಿಲೆಗಳ ಸಂಬಂಧ ಕಂಪನಿ ಪರಿಹಾರ ನೀಡುತ್ತದೆ.

ಗಂಭೀರ ಕಾಯಿಲೆಗಳು ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗುತ್ತದೆ; ಆರೋಗ್ಯ ವಿಮೆ ಪಾಲಿಸಿಯಲ್ಲಿ ಈ ಬಗ್ಗೆ ಕೂಡ ಗಮನಹರಿಸಿ
serious-illnesses-lead-to-financial-crisis-pay-attention-to-health-insurance-policy
author img

By

Published : Nov 16, 2022, 6:40 PM IST

ಹೈದರಾಬಾದ್​: ಸೇಲ್ಸ್​ ಮ್ಯಾನೇಜರ್​ ಆಗಿ ಬಹಳ ನಿಷ್ಠಾವಂತಬಾಗಿ ಕಾರ್ಯ ನಿರ್ವಹಿಸುತ್ತಿದ್ದ ರಾಜೀವ್​ ಸಂಸ್ಥೆಗೆ ಸಾಕಷ್ಟು ಹೆಸರು, ಲಾಭವನ್ನು ತರುತ್ತಿದ್ದ. ಈ ಪ್ರಕ್ರಿಯೆ ವೇಳೆ ಒತ್ತಡ ನಿವಾರಣೆಗೆ ಆತ ಧೂಮಪಾನ ಚಟಕ್ಕೆ ಬಲಿಯಾದ ಈ ಚಟದಿಂದಾಗಿ ಆತನ ಆರೋಗ್ಯ ಹದಗೆಟ್ಟು, ಕೆಲಸ ವೇಳೆ ಅನಾರೋಗ್ಯಕ್ಕೆ ಒಳಗಾದ. ಸಹೋದ್ಯೋಗಿಗಳು ತಕ್ಷಣಕ್ಕೆ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ, ಆತನ ದೇಹದ ಎಡಭಾಗ ಗಂಭೀರ ಪಾರ್ಶ್ವವಾಯುಗೆ ತುತ್ತಾಗಿತ್ತು.

ರಾಜೀವ್​​ ಚಿಕಿತ್ಸೆ ಹಣ ಆರೋಗ್ಯ ವಿಮೆಯಿಂದ ಕಟ್ಟಲಾಯಿತು. ಈ ಆರೋಗ್ಯ ವಿಮೆ ಆತನ ಚಿಕಿತ್ಸೆ ಮಾತ್ರ ಭರಿಸಿತು. ಆದರೆ, ಆತನಿಗೆ ನಿರಂತರ ವೈದ್ಯಕೀಯ ನಿಗಾ ಬೇಕಾಗಿದ್ದು, ಆತ ಕೆಲಸ ಮಾಡಲು ಸಾಧ್ಯವಿಲ್ಲ. ಈ ಎಲ್ಲವೂ ಆತನ ಕುಟುಂಬಕ್ಕೆ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಯಿತು.

ಅನೇಕ ಜನರು ಕಿಡ್ನಿ ಸಮಸ್ಯೆ, ಕ್ಯಾನ್ಸರ್​, ಪ್ಯಾರಾಲಿಸಿಸ್​ ನಂತಹ ಗಂಭೀರ ಸಮಸ್ಯೆಗೆ ಗುರಿಯಾಗುತ್ತಾರೆ. ಇದಕ್ಕೆ ಅವರ ಜೀವನ ಶೈಲಿ ಮತ್ತು ಫಾಸ್ಟ್​ ಫುಡ್​, ಅಭ್ಯಾಸಗಳು ಕೂಡ ಕಾರಣವಾಗುತ್ತದೆ. ಈ ಗಂಭೀರ ಕಾಯಿಲೆಗಳಿಗೆ ಹೆಚ್ಚಿನ ವ್ಯಯವಾಗಲಿದೆ. ಸಾಮಾನ್ಯ ಆರೋಗ್ಯ ವಿಮೆ ಕೇವಲ ಚಿಕಿತ್ಸೆ ಭರಿಸುತ್ತದೆ. ಆರೋಗ್ಯ ವಿಮೆಯಲ್ಲಿ ಕ್ರಿಟಿಕಲ್​ ಕೇರ್​ ನಿಯಮಗಳನ್ನು ಹೊಂದಿರದಿದ್ದರೆ, ಇಂತಹ ದೀರ್ಘಕಾಲದ ಕಾಯಿಲೆಗಳು, ಹೆಚ್ಚಿನ ಆರ್ಥಿಕ ಕಷ್ಟಕ್ಕೂ ಕಾರಣವಾಗುತ್ತದೆ.

ದೀರ್ಘಾವಧಿ ಕಾಯಿಲೆಗಳ ಸಂಬಂದ ಪರಿಹಾರ: ಕ್ರಿಟಿಕಲ್​ ಕೇರ್ ಹೇಲ್ತ್​​​​ ಪಾಲಿಸಿ ವಿಮೆ ಹೊಂದಿರುವವರಿಗೂ ದೀರ್ಘಾವಾದಿ ಕಾಯಿಲೆಗಳ ಸಂಬಂಧ ಕಂಪನಿ ಪರಿಹಾರ ನೀಡುತ್ತದೆ. ಈ ಯೋಜನೆಗೆ ಕನಿಷ್ಠ ಹಣ 5 ಲಕ್ಷ ರೂ ಆಗಿದೆ. ಕ್ಯಾನ್ಸರ್​, ಹೃದಯ ಶಸ್ತ್ರಚಿಕಿತ್ಸೆ, ಬ್ರೈನ್​​, ನರ ದೌರ್ಬಲ್ಯ, ಪಾರ್ಶ್ವಾವಾಯು, ಕುರುಡುತನ, ಯಕೃತ್​, ಶ್ವಾಸಕೋಶ ಮತ್ತು ಕಿಡ್ನಿಯಂತಹ ನಾಲ್ಕು ರೀತಿಯ ಗಂಭೀರ ಕಾಯಿಲೆಗಳನ್ನು ಕಂಪನಿಗಳು ಈ ವಿಮಾ ಯೋಜನೆ ಅಡಿ ನೀಡುತ್ತದೆ. ವಿಮೆದಾರರು 100ರಷ್ಟು ಇದನ್ನು ಕ್ಲೈಮ್​ ಮಾಡಬಹುದು.

ಸಾಮಾನ್ಯ ಆರೋಗ್ಯ ವಿಮೆ ಕೇವಲ ಚಿಕಿತ್ಸೆ ಬಿಲ್​ಗಳನ್ನು ಪಾವತಿಸುತ್ತದೆ. ಆದರೆ, ಈ ಕ್ರಿಟಿಕಲ್​ ಕೇರ್​ ಕವರ್​ ಅಡಿ 100 ರಷ್ಟು ವೈದ್ಯಕೀಯ ವೆಚ್ಚ ಭರಿಸಬಹುದು. ವಿಮೆದಾರರು 400 ಪ್ರತಿಶತ ಜಂಟಿ ಕವರ್​ ಅನ್ನು ಕೂಡ ಹೊಂದ ಬಹುದಾಗಿದೆ. ಕ್ರಿಟಿಕಲ್ ಕೇರ್ ಪಾಲಿಸಿಗಳ ಅಡಿಯಲ್ಲಿ ಬರುವ ಪರಿಹಾರವು ಹಣಕಾಸಿನ ಸಹಾಯವಾಗಿ ಕಾರ್ಯನಿರ್ವಹಿಸುತ್ತದೆ.

ನಾಲ್ಕು ವರ್ಗದ ಅಡಿ ಕ್ರಿಟಿಕಲ್​ ಪಾಲಿಸಿ ಕವರ್​: ಕ್ರಿಟಿಕಲ್​ ಕೇರ್​ ಪಾಲಿಸಿ ಅಡಿ ಕಾಯುವಿಕೆ ಸಮಯ ಕೂಡ ವ್ಯರ್ಥವಾಗುತ್ತದೆ. ನಾಲ್ಕು ವರ್ಗದ ಅಡಿಯಲ್ಲಿ ಅನೇಕ ಕಂಪನಿಗಳು ಈ ಕ್ರಿಟಿಕಲ್​ ಪಾಲಿಸಿಯನ್ನು ಕವರ್​ ಮಾಡುತ್ತದೆ. ಡ್ರಗ್ಸ್​ ಮತ್ತು ಮಧ್ಯಚಟದಲ್ಲಿ ಈ ಪರಿಹಾರ ನಿಮಗೆ ಸಿಗುವುದಿಲ್ಲ. ಕೆಲವು ಕಂಪನಿಗಳು ಉದ್ಯೋಗಿದಾರರ ಕಾರ್ಯ ನಿರ್ವಹಣೆ ಸಾಮರ್ಥ್ಯ ಕೂಡ ಪರಿಶೀಲನೆ ಮಾಡುತ್ತದೆ. ಅಂತಹ ಪಾಲಿಸಿಗಳನ್ನು ತೆಗೆದುಕೊಳ್ಳಲು ಯೋಜಿಸುವ ಮೊದಲು ಈ ಎಲ್ಲ ಅಂಶಗಳನ್ನು ವಿಶ್ಲೇಷಿಸಬೇಕು.

ಕುಟುಂಬದಲ್ಲಿ ದೀರ್ಘಕಾಲದ ಕಾಯಿಲೆಗಳ ಇತಿಹಾಸವನ್ನು ಹೊಂದಿರುವವರಿಗೆ ಕ್ರಿಟಿಕಲ್ ಕೇರ್ ಪಾಲಿಸಿ ಅತ್ಯಗತ್ಯವಾಗಿರುತ್ತದೆ. ಒತ್ತಡದ ವಾತಾವರಣದಲ್ಲಿ ಕೆಲಸ ಮಾಡುವವರಿಗೆ ಮತ್ತು ದುರ್ಬಲ ಜೀವನಶೈಲಿಯನ್ನು ಹೊಂದಿರುವವರಿಗೆ ಇದು ಅವಶ್ಯಕವಾಗಿದೆ.

ಕೆಲವೊಮ್ಮೆ, ಚಿಕಿತ್ಸೆ ಮತ್ತು ಪರಿಹಾರದ ನಂತರ ರೋಗವು ಬರುವ ಅಥವಾ ಅದಕ್ಕೆ ಪರ್ಯಾಯವಾಗಿ ಬೇರೋಂದು ರೋಗ ಬರಬಹುದು. ದೀರ್ಘಕಾಲದ ಕಾಯಿಲೆಗಳು ನಿರಂತರ ವೈದ್ಯಕೀಯ ವೆಚ್ಚವನ್ನು ಹೊಂದಿವೆ. ಕ್ರಿಟಿಕಲ್ ಕೇರ್ ಕವರ್‌ಗಳು ಅಂತಹ ಎಲ್ಲಾ ಅನಿವಾರ್ಯ ಸಂದರ್ಭಗಳಲ್ಲಿ ಖರ್ಚುಗಳನ್ನು ಪೂರೈಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ದೇಶದ ಅಗ್ಗದ ಎಲೆಕ್ಟ್ರಿಕ್​ ಕಾರು ಬಿಡುಗಡೆ.. ಒಮ್ಮೆ ಚಾರ್ಜ್​ ಮಾಡಿ 200 ಕಿಮೀ ದೂರ ಕ್ರಮಿಸಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.