ETV Bharat / business

ಷೇರು ಮಾರುಕಟ್ಟೆಯಲ್ಲಿಂದು ಮಾರಾಟ ಭರಾಟೆ: ಸೆನ್ಸೆಕ್ಸ್​ 522 & ನಿಫ್ಟಿ 160 ಅಂಕ ಕುಸಿತ - ದೇಶೀಯ ಈಕ್ವಿಟಿ ಮಾರುಕಟ್ಟೆಗಳು

ಭಾರತೀಯ ಷೇರು ಮಾರುಕಟ್ಟೆಗಳು ಬುಧವಾರ ಇಳಿಕೆಯೊಂದಿಗೆ ಮುಕ್ತಾಯಗೊಂಡಿವೆ.

Sensex, Nifty tumble as selloff dampens mood on Dalal Street; IT stocks hit

author img

By ETV Bharat Karnataka Team

Published : Oct 25, 2023, 6:47 PM IST

ಮುಂಬೈ: ಬುಧವಾರದ ವಹಿವಾಟಿನ ದಿನದ ಕೊನೆಯಲ್ಲಿ ಮಾರಾಟ ಭರಾಟೆ ಹೆಚ್ಚಾಗಿದ್ದರಿಂದ ಭಾರತದ ಬೆಂಚ್ ಮಾರ್ಕ್ ಷೇರು ಮಾರುಕಟ್ಟೆ ಸೂಚ್ಯಂಕಗಳು ಕುಸಿತದೊಂದಿಗೆ ಮುಕ್ತಾಯವಾದವು. ಬಿಎಸ್ಇ ಸೆನ್ಸೆಕ್ಸ್ 522.82 ಪಾಯಿಂಟ್ಸ್ ಕುಸಿದು 64,049.06ಕ್ಕೆ ಕೊನೆಗೊಂಡರೆ, ಎನ್ಎಸ್ಇ ನಿಫ್ಟಿ 50 159.60 ಪಾಯಿಂಟ್ಸ್ ಕುಸಿದು 19,122.15 ಕ್ಕೆ ತಲುಪಿತು. ಹೆಚ್ಚು ದೇಶೀಯ ಕೇಂದ್ರಿತವಾಗಿರುವ ವಿಶಾಲ ಮಾರುಕಟ್ಟೆ ಸೂಚ್ಯಂಕಗಳು ಚಂಚಲತೆ ಹೆಚ್ಚಾದಂತೆ ಮಾರಾಟದ ಒತ್ತಡ ಅನುಭವಿಸಿದವು.

ಇದರೊಂದಿಗೆ, ಬೆಂಚ್ ಮಾರ್ಕ್ ಸೂಚ್ಯಂಕಗಳು ಸುಮಾರು ಎಂಟು ತಿಂಗಳಲ್ಲಿ ತಮ್ಮ ಸುದೀರ್ಘ ನಷ್ಟದ ಹಾದಿಯನ್ನು ದಾಖಲಿಸಿವೆ. ಇಸ್ರೇಲ್-ಹಮಾಸ್ ಯುದ್ಧದ ಬಗೆಗಿನ ನಿರಂತರ ಕಳವಳಗಳು ಮತ್ತು ಯುಎಸ್ ಬಾಂಡ್ ಇಳುವರಿಯಲ್ಲಿನ ಏರಿಳಿತಗಳು ಹೂಡಿಕೆದಾರರನ್ನು ಆತಂಕಕ್ಕೀಡು ಮಾಡಿದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಕುಸಿತ ಕಂಡುಬಂದಿದೆ.

ಪ್ರಮುಖ ವಲಯ ಸೂಚ್ಯಂಕಗಳಲ್ಲಿ, ಹನ್ನೊಂದು ಸೂಚ್ಯಂಕಗಳು ನಷ್ಟ ಅನುಭವಿಸಿವೆ. ಹಣಕಾಸು ಮತ್ತು ಮಾಹಿತಿ ತಂತ್ರಜ್ಞಾನ ವಲಯಗಳು ಕ್ರಮವಾಗಿ ಶೇ 0.93 ಮತ್ತು ಶೇ 1.03ರಷ್ಟು ಕುಸಿದಿವೆ. ನಿಫ್ಟಿ 50 ಷೇರುಗಳಲ್ಲಿ ಕೇವಲ ಹತ್ತು ಷೇರುಗಳು ಮಾತ್ರ ಏರಿಕೆ ಕಂಡವು. ನಿಫ್ಟಿ 50ಯಲ್ಲಿ ಟಾಟಾ ಸ್ಟೀಲ್, ಕೋಲ್ ಇಂಡಿಯಾ, ಹಿಂಡಾಲ್ಕೊ, ಟಾಟಾ ಕನ್ಸೂಮರ್ ಪ್ರಾಡಕ್ಟ್ಸ್ ಮತ್ತು ಎಸ್​ಬಿಐ ಲಾಭ ಗಳಿಸಿದ ಪ್ರಮುಖ ಷೇರುಗಳಾಗಿವೆ. ಮತ್ತೊಂದೆಡೆ, ಅಪೊಲೊ ಆಸ್ಪತ್ರೆ, ಅದಾನಿ ಎಂಟರ್​ಪ್ರೈಸಸ್, ಎಸ್​ಬಿಐ ಲೈಫ್, ಸಿಪ್ಲಾ ಮತ್ತು ಐಷರ್ ಮೋಟಾರ್ಸ್ ಹೆಚ್ಚು ನಷ್ಟ ಅನುಭವಿಸಿದ ಷೇರುಗಳಾಗಿವೆ.

ದೇಶೀಯ ಈಕ್ವಿಟಿ ಮಾರುಕಟ್ಟೆಗಳು ಮತ್ತು ಬಲವಾದ ಅಮೆರಿಕನ್ ಕರೆನ್ಸಿಯಿಂದ ನಕಾರಾತ್ಮಕ ಸೂಚನೆಗಳನ್ನು ಅನುಸರಿಸಿ ರೂಪಾಯಿ ಬುಧವಾರ ಯುಎಸ್ ಡಾಲರ್ ವಿರುದ್ಧ 2 ಪೈಸೆ ಕುಸಿದು 83.18 ಕ್ಕೆ (ತಾತ್ಕಾಲಿಕ) ಸ್ಥಿರವಾಯಿತು. ಆದಾಗ್ಯೂ, ಕಚ್ಚಾ ತೈಲ ಬೆಲೆಗಳು ಇಳಿಕೆಯಾಗಿರುವುದು ಮತ್ತು ವಿದೇಶಿ ಈಕ್ವಿಟಿ ಹೂಡಿಕೆದಾರರು ಖರೀದಿ ಮಾಡಿದ್ದರಿಂದ ಭಾರತೀಯ ಕರೆನ್ಸಿಗೆ ಒಂದಿಷ್ಟು ಬಲ ಬಂದಿತು ಎಂದು ವಿದೇಶಿ ವಿನಿಮಯ ಡೀಲರ್‌ಗಳು ತಿಳಿಸಿದ್ದಾರೆ.

ಇಂಟರ್ ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ, ಸ್ಥಳೀಯ ರೂಪಾಯಿ 8 ಪೈಸೆ ಬಲವಾಗಿ 83.08 ಕ್ಕೆ ಪ್ರಾರಂಭವಾಯಿತು ಮತ್ತು ಡಾಲರ್ ವಿರುದ್ಧ ಗರಿಷ್ಠ 83.08 ಮತ್ತು ಕನಿಷ್ಠ ಮಟ್ಟ 83.19 ರ ನಡುವೆ ವಹಿವಾಟು ನಡೆಸಿತು. ಇದು ಅಂತಿಮವಾಗಿ ಡಾಲರ್ ವಿರುದ್ಧ 83.18 (ತಾತ್ಕಾಲಿಕ) ಕ್ಕೆ ಸ್ಥಿರವಾಯಿತು. ರೂಪಾಯಿ ಹಿಂದಿನ ಮುಕ್ತಾಯಕ್ಕಿಂತ 2 ಪೈಸೆ ನಷ್ಟ ದಾಖಲಿಸಿತು.

ಇದನ್ನೂ ಓದಿ: ಬಿಟ್​ಕಾಯಿನ್​ಗೆ ಬಂತು ಮತ್ತೆ ಬೇಡಿಕೆ; 35 ಸಾವಿರ ಡಾಲರ್ ತಲುಪಿದ ಬೆಲೆ, ಒಂದೂವರೆ ವರ್ಷದಲ್ಲೇ ಗರಿಷ್ಠ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.