ಮುಂಬೈ: ರಷ್ಯಾ - ಉಕ್ರೇನ್ ಶಾಂತಿ ಮಾತುಕತೆಗಳ ಪ್ರಗತಿಯ ಮಧ್ಯೆ ಜಾಗತಿಕ ಮಾರುಕಟ್ಟೆಗಳಲ್ಲಿನ ಸಕರಾತ್ಮ ಬೆಳವಣಿಗೆಗಳ ಪರಿಣಾಮವಾಗಿ ಸತತ ಮೂರನೇ ದಿನವೂ ಮುಂಬೈ ಷೇರುಪೇಟೆಯಲ್ಲಿ ಗೂಳಿ ಓಟ ಮುಂದುವರೆದಿದೆ. ದಿನದ ಆರಂಭದಲ್ಲೇ ಸೆನ್ಸೆಕ್ಸ್ 478 ಅಂಕಗಳ ಏರಿಕೆಯಾಗಿ 58,422ರಲ್ಲಿ ವಹಿವಾಟು ನಡೆಸಿದರೆ, ನಿಫ್ಟಿ 142.85 ಅಂಕಗಳ ಜಿಗಿತದ ಬಳಿಕ 17,468ರಲ್ಲಿದೆ.
ಅಲ್ಟ್ರಾಟೆಕ್ ಸಿಮೆಂಟ್, ಬಜಾಜ್ ಫೈನಾನ್ಸ್, ಭಾರ್ತಿ ಏರ್‌ಟೆಲ್, ಏಷ್ಯನ್ ಪೇಂಟ್ಸ್, ಹೆಚ್‌ಡಿಎಫ್‌ಸಿ, ಇಂಡಸ್‌ಇಂಡ್ ಬ್ಯಾಂಕ್, ಬಜಾಜ್ ಫಿನ್‌ಸರ್ವ್ ಹಾಗೂ ಐಸಿಐಸಿಐ ಬ್ಯಾಂಕ್ ಆರಂಭಿಕ ವಹಿವಾಟಿನಲ್ಲಿ ಲಾಭ ಗಳಿಸಿದವು. ಮತ್ತೊಂದೆಡೆ, ಟಾಟಾ ಸ್ಟೀಲ್, ಟೆಕ್ ಮಹೀಂದ್ರಾ, ಸನ್ ಫಾರ್ಮಾ, ಡಾ ರೆಡ್ಡೀಸ್, ಎನ್‌ಟಿಪಿಸಿ ಹಾಗೂ ಟೈಟಾನ್ ನಷ್ಟ ಅನುಭವಿಸಿದವು.
ಏಷ್ಯಾದ ಇತರ ಮಾರುಕಟ್ಟೆಗಳಾದ ಸಿಯೋಲ್, ಶಾಂಘೈ ಮತ್ತು ಹಾಂಕಾಂಗ್ ಪೇಟೆಗಳು ಲಾಭದಲ್ಲಿದ್ದರೆ, ಟೋಕಿಯೋ ಮಧ್ಯ-ಸೆಷನ್ ವ್ಯವಹಾರಗಳ ಸಮಯದಲ್ಲಿ ಕೆಂಪು ಬಣ್ಣದಲ್ಲಿತ್ತು. ಮಂಗಳವಾರ ಅಮೆರಿಕದ ಷೇರುಪೇಟೆಗಳು ಲಾಭದೊಂದಿಗೆ ಅಂತ್ಯಗೊಂಡಿವೆ.
ಅಂತಾರಾಷ್ಟ್ರೀಯ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ ಶೇ.0.66ರಷ್ಟು ಏರಿಕೆಯಾಗಿದೆ 111.03 ಡಾಲರ್‌ಗೆ ಕ್ಕೆ ಜಿಗಿದಿದೆ. ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 4 ಪೈಸೆ ಏರಿಕೆಯಾಗಿ 75.69 ಕ್ಕೆ ತಲುಪಿದೆ.
ಇದನ್ನೂ ಓದಿ: 9 ದಿನದಲ್ಲಿ 8ನೇ ಬಾರಿಗೆ ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆ.. 150ಕ್ಕೆ ತಲುಪುತ್ತಾ ತೈಲ ದರ?