ETV Bharat / business

ದಾಖಲೆಯ 100 ಮಿಲಿಯನ್ ಟನ್ ಕಲ್ಲಿದ್ದಲು ಉತ್ಪಾದಿಸಿದ ಎಸ್​ಇಸಿಎಲ್​

author img

By ETV Bharat Karnataka Team

Published : Oct 30, 2023, 6:07 PM IST

ಸೌತ್ ಈಸ್ಟರ್ನ್ ಕೋಲ್ ಫೀಲ್ಡ್ಸ್ ಲಿಮಿಟೆಡ್ ದಾಖಲೆಯ 100 ಮಿಲಿಯನ್ ಟನ್ ಕಲ್ಲಿದ್ದಲು ಉತ್ಪಾದಿಸಿದೆ.

SECL dispatches record 100 million tonnes of coal in current fiscal

ನವದೆಹಲಿ: ಕೋಲ್ ಇಂಡಿಯಾದ ಅಂಗಸಂಸ್ಥೆಯಾದ ಸೌತ್ ಈಸ್ಟರ್ನ್ ಕೋಲ್ ಫೀಲ್ಡ್ಸ್ ಲಿಮಿಟೆಡ್ (ಎಸ್ಇಸಿಎಲ್) 2023-24ರ ಹಣಕಾಸು ವರ್ಷದಲ್ಲಿ ದಾಖಲೆಯ 100 ದಶಲಕ್ಷ ಟನ್ ಕಲ್ಲಿದ್ದಲು ಉತ್ಪಾದನೆ ಮಾಡಿದೆ. ಛತ್ತೀಸಗಢ ಮೂಲದ ಈ ಕಂಪನಿಯು ಪ್ರಾರಂಭವಾದಾಗಿನಿಂದ ಸಾಧಿಸಿದ ಅತ್ಯಂತ ವೇಗದ 100 ಮೆಟ್ರಿಕ್ ಟನ್ ಕಲ್ಲಿದ್ದಲು ಉತ್ಪಾದನೆ ಇದಾಗಿದೆ ಎಂದು ಸೋಮವಾರ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸೌತ್ ಈಸ್ಟರ್ನ್ ಕೋಲ್ ಫೀಲ್ಡ್ಸ್ ಲಿಮಿಟೆಡ್ ಪೂರೈಸುವ ಒಟ್ಟು ಕಲ್ಲಿದ್ದಲಿನ ಪೈಕಿ ಶೇಕಡಾ 80 ಕ್ಕಿಂತ ಹೆಚ್ಚು ವಿದ್ಯುತ್ ವಲಯಕ್ಕೆ ಹೋಗುತ್ತದೆ. ಕಂಪನಿಯು ಸುಮಾರು 81 ಮಿಲಿಯನ್ ಟನ್ ಕಲ್ಲಿದ್ದಲನ್ನು ದೇಶಾದ್ಯಂತದ ವಿದ್ಯುತ್ ಸ್ಥಾವರಗಳಿಗೆ ರವಾನಿಸಿದೆ.

ಕೊರ್ಬಾ ಜಿಲ್ಲೆಯಲ್ಲಿರುವ ಎಸ್ಇಸಿಎಲ್​ನ ಮೆಗಾ ಯೋಜನೆಗಳಾದ ಗೆವ್ರಾ, ದಿಪ್ಕಾ ಮತ್ತು ಕುಸ್ಮುಂಡಾಗಳು ಒಟ್ಟು 100 ಮಿಲಿಯನ್ ಟನ್ ಕಲ್ಲಿದ್ದಲು ಪೂರೈಸುವಲ್ಲಿ ಗಮನಾರ್ಹ ಕೊಡುಗೆ ನೀಡಿವೆ. ದೇಶದ ಅತಿದೊಡ್ಡ ಕಲ್ಲಿದ್ದಲು ಗಣಿಯಾದ ಗೆವ್ರಾ 30.3 ಮೆಟ್ರಿಕ್ ಟನ್, ದಿಪ್ಕಾ ಮತ್ತು ಕುಸ್ಮುಂಡಾ ಕ್ರಮವಾಗಿ 19.1 ಮೆಟ್ರಿಕ್ ಟನ್ ಮತ್ತು 25.1 ಮೆಟ್ರಿಕ್ ಟನ್ ಕಲ್ಲಿದ್ದಲನ್ನು ಉತ್ಪಾದನೆ ಮಾಡಿವೆ. ಒಟ್ಟು ಉತ್ಪಾದನೆಯಲ್ಲಿ ಎಲ್ಲಾ ಮೂರು ಮೆಗಾ ಯೋಜನೆಗಳ ಒಟ್ಟು ಪಾಲು ಶೇಕಡಾ 74 ಕ್ಕಿಂತ ಹೆಚ್ಚಾಗಿದೆ.

ಇದಲ್ಲದೆ, ಹೆಚ್ಚಿನ ಹಳೆಯ ಮತ್ತು ಭೂಗತ ಗಣಿಗಳು ಇರುವ ಎಸ್ಇಸಿಎಲ್​ನ ಕೊರೆಯಾ ರೇವಾ ಕೋಲ್​ಫೀಲ್ಡ್​ ಕೂಡ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 20ರಷ್ಟು ಹೆಚ್ಚು ಕಲ್ಲಿದ್ದಲನ್ನು ಉತ್ಪಾದಿಸಿದೆ.

ಎಸ್ಇಸಿಎಲ್ ಕೋಲ್ ಇಂಡಿಯಾದ ಅತಿದೊಡ್ಡ ಕಲ್ಲಿದ್ದಲು ಉತ್ಪಾದಿಸುವ ಅಂಗಸಂಸ್ಥೆಗಳಲ್ಲಿ ಒಂದಾಗಿದೆ. ಕಂಪನಿಯು 167 ಮೆಟ್ರಿಕ್ ಟನ್ ಕಲ್ಲಿದ್ದಲನ್ನು ಉತ್ಪಾದಿಸಿದೆ (ಅದರ ಇತಿಹಾಸದಲ್ಲಿ ಅತಿ ಹೆಚ್ಚು) ಮತ್ತು ಇದು ಹಣಕಾಸು ವರ್ಷ 22-23 ರಲ್ಲಿ ಸಿಐಎಲ್​ನ ಒಟ್ಟು ಕಲ್ಲಿದ್ದಲು ಉತ್ಪಾದನೆಯ ನಾಲ್ಕನೇ ಒಂದು ಭಾಗದಷ್ಟಾಗುತ್ತದೆ. ಈ ವರ್ಷ ಕಂಪನಿಯು 197 ಮೆಟ್ರಿಕ್ ಟನ್ ಕಲ್ಲಿದ್ದಲು ಉತ್ಪಾದನೆಯ ಗುರಿ ಹೊಂದಿದೆ.

67 ಬ್ಲಾಕ್‌ಗಳನ್ನು ಹೊಂದಿರುವ ಸೌತ್ ಈಸ್ಟರ್ನ್ ಕೋಲ್ ಫೀಲ್ಡ್ಸ್ ಲಿಮಿಟೆಡ್ (ಎಸ್ ಇಸಿಎಲ್) ಕಲ್ಲಿದ್ದಲು ಸಚಿವಾಲಯದ ಅಡಿಯಲ್ಲಿ ಬರುವ ಕೋಲ್ ಇಂಡಿಯಾ ಲಿಮಿಟೆಡ್‌ನ (ಸಿಐಎಲ್) ಅಗ್ರ ಮೂರು ಕಲ್ಲಿದ್ದಲು ಉತ್ಪಾದಿಸುವ ಅಂಗಸಂಸ್ಥೆಗಳಲ್ಲಿ ಒಂದಾಗಿದೆ.

ಇದನ್ನೂ ಓದಿ: ಭಾರತೀಯರು ಮಹಿಳೆಯರು ದಶಕಗಳಿಂದ ವಾರಕ್ಕೆ 70 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡ್ತಿದ್ದಾರೆ: ಎಡೆಲ್​ವೆಸ್ ಎಂಡಿ ರಾಧಿಕಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.