ETV Bharat / business

ಸಾಮ್ಹಿ ಹೋಟೆಲ್ಸ್​, ಮೋತಿಸನ್ಸ್​ ಜ್ಯುವೆಲ್ಲರ್ಸ್​ IPOಗೆ ಸೆಬಿ ಅನುಮತಿ - ರಿಟೇಲ್ ಆಭರಣ ಕಂಪನಿ ಮೋತಿಸನ್ ಜ್ಯುವೆಲ್ಲರ್ಸ್​ಗಳ ಐಪಿಒ

ಸಾಮ್ಹಿ ಹೋಟೆಲ್ಸ್ ಮತ್ತು ಜೈಪುರ ಮೂಲದ ರಿಟೇಲ್ ಆಭರಣ ಕಂಪನಿ ಮೋತಿಸನ್ ಜ್ಯುವೆಲ್ಲರ್ಸ್​ಗಳ ಐಪಿಒ ಆಫರ್​ಗೆ ಸೆಬಿ ಅನುಮತಿ ನೀಡಿದೆ.

Sebi gives nod to Samhi Hotels, Motisons Jewellers to float IPOs

author img

By ETV Bharat Karnataka Team

Published : Sep 5, 2023, 7:50 PM IST

ಮುಂಬೈ : ಸಾಮ್ಹಿ ಹೋಟೆಲ್ಸ್ ಮತ್ತು ಜೈಪುರ ಮೂಲದ ರಿಟೇಲ್ ಆಭರಣ ಕಂಪನಿ ಮೋತಿಸನ್ ಜ್ಯುವೆಲ್ಲರ್ಸ್​ಗಳಿಗೆ ಆರಂಭಿಕ ಸಾರ್ವಜನಿಕ ಕೊಡುಗೆ ಅಂದರೆ ಐಪಿಒ ಮೂಲಕ ಬಂಡವಾಳ ಸಂಗ್ರಹಿಸಲು ಬಂಡವಾಳ ಮಾರುಕಟ್ಟೆ ನಿಯಂತ್ರಕ ಸೆಬಿ ಸೆಪ್ಟೆಂಬರ್ 5 ರಂದು ಹಸಿರು ನಿಶಾನೆ ತೋರಿಸಿದೆ. ಈ ವರ್ಷದ ಮಾರ್ಚ್​​ನಲ್ಲಿ ಎರಡೂ ಸಂಸ್ಥೆಗಳು ತಮ್ಮ ಪ್ರಾಥಮಿಕ ದಾಖಲೆಗಳನ್ನು ಸೆಬಿಗೆ ಮರು ಸಲ್ಲಿಸಿದ್ದವು ಮತ್ತು ಆಗಸ್ಟ್ 28-31 ರ ಅವಧಿಯಲ್ಲಿ ಅದರ ವೀಕ್ಷಣಾ ಪತ್ರಗಳನ್ನು ಪಡೆದಿವೆ ಎಂದು ಸೆಬಿ ಮಾಹಿತಿ ನೀಡಿದೆ. ಸೆಬಿ ಪರಿಭಾಷೆಯಲ್ಲಿ ನೋಡುವುದಾದರೆ ಅದರ ಅವಲೋಕನವು ಐಪಿಒ ಪ್ರಾರಂಭಿಸಲು ಅನುಮತಿ ನೀಡಿರುವುದನ್ನು ಸೂಚಿಸುತ್ತದೆ.

ಕರಡು ದಾಖಲೆಗಳ ಪ್ರಕಾರ, ಸಾಮ್ಹಿ ಹೋಟೆಲ್ಸ್ 1,000 ಕೋಟಿ ರೂ.ಗಳ ಈಕ್ವಿಟಿ ಷೇರುಗಳ ಹೊಸ ವಿತರಣೆ ಮತ್ತು ಅಸ್ತಿತ್ವದಲ್ಲಿರುವ ಷೇರುದಾರರಿಂದ 90 ಲಕ್ಷ ಈಕ್ವಿಟಿ ಷೇರುಗಳ ಆಫರ್ ಫಾರ್ ಸೇಲ್ (ಒಎಫ್ಎಸ್) ಒಳಗೊಂಡ ಐಪಿಒ ಅನ್ನು ಪ್ರಸ್ತಾಪಿಸಿದೆ. ಪ್ರಸ್ತಾವಿತ ಒಎಫ್​ಎಸ್​ ಬ್ಲೂ ಚಂದ್ರ ಪ್ರೈವೇಟ್ ಲಿಮಿಟೆಡ್​ನ 42.36 ಲಕ್ಷ ಈಕ್ವಿಟಿ ಷೇರುಗಳು, ಗೋಲ್ಡ್​​ಮನ್ ಸ್ಯಾಚ್ಸ್ ಇನ್ವೆಸ್ಟ್​ಮೆಂಟ್​ ಹೋಲ್ಡಿಂಗ್ಸ್ (ಏಷ್ಯಾ) ಲಿಮಿಟೆಡ್​ನ 24.78 ಲಕ್ಷ ಈಕ್ವಿಟಿ ಷೇರುಗಳು, ಜಿಟಿಐ ಕ್ಯಾಪಿಟಲ್ ಆಲ್ಫಾ ಪ್ರೈವೇಟ್ ಲಿಮಿಟೆಡ್​ನ 15.47 ಲಕ್ಷ ಈಕ್ವಿಟಿ ಷೇರುಗಳು ಮತ್ತು ಇಂಟರ್​ ನ್ಯಾಷನಲ್ ಫೈನಾನ್ಸ್ ಕಾರ್ಪೊರೇಷನ್​ನ 7.39 ಲಕ್ಷ ಈಕ್ವಿಟಿ ಷೇರುಗಳ ಮಾರಾಟವನ್ನು ಒಳಗೊಂಡಿದೆ.

ಇದು ಲಿಸ್ಟಿಂಗ್ ನಿಯಮಗಳನ್ನು ಪಾಲಿಸುವ ಸಲುವಾಗಿ ಅಸ್ತಿತ್ವದಲ್ಲಿರುವ ಷೇರುದಾರರ ಭಾಗಶಃ ನಿರ್ಗಮನವಾಗಿದೆ. ಕಂಪನಿಯು ಸೆಪ್ಟೆಂಬರ್ 2019 ರಲ್ಲಿ ತನ್ನ ಐಪಿಒ ದಾಖಲೆಗಳನ್ನು ಸೆಬಿಗೆ ಸಲ್ಲಿಸಿತ್ತು ಮತ್ತು ಆರಂಭಿಕ ಷೇರು ಮಾರಾಟವನ್ನು ಪ್ರಾರಂಭಿಸಲು 2019 ರ ನವೆಂಬರ್​ನಲ್ಲಿ ಮಾರುಕಟ್ಟೆ ನಿಯಂತ್ರಕರ ಅನುಮೋದನೆಯನ್ನು ಪಡೆದಿತ್ತು. ಆದರೆ ಕಂಪನಿಯು ಐಪಿಒ ಆರಂಭಿಸಿರಲಿಲ್ಲ. ಹೊಸ ಐಪಿಒದಿಂದ ಬರಲಿರುವ ನಿರೀಕ್ಷಿತ 750 ಕೋಟಿ ರೂ. ನಿವ್ವಳ ಆದಾಯವನ್ನು ಸಾಲ ಪಾವತಿಗೆ ಮತ್ತು ಸಾಮಾನ್ಯ ಕಾರ್ಪೊರೇಟ್ ಉದ್ದೇಶಗಳಿಗಾಗಿ ಬಳಸುವುದಾಗಿ ಸಂಸ್ಥೆ ತಿಳಿಸಿದೆ.

ಫೆಬ್ರವರಿ 28, 2023 ರ ಹೊತ್ತಿಗೆ ಸಾಮ್ಹಿ ಹೋಟೆಲ್ಸ್​ ಬೆಂಗಳೂರು, ಹೈದರಾಬಾದ್, ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್​ಸಿಆರ್), ಪುಣೆ, ಚೆನ್ನೈ ಮತ್ತು ಅಹಮದಾಬಾದ್ ಸೇರಿದಂತೆ ಭಾರತದ 12 ಪ್ರಮುಖ ನಗರ ಕೇಂದ್ರಗಳಲ್ಲಿ 25 ಕಾರ್ಯಾಚರಣೆಯಲ್ಲಿರುವ ಹೋಟೆಲ್​ಗಳಲ್ಲಿ 3,839 ಕೊಠಡಿಗಳ ಆಸ್ತಿಯನ್ನು ಹೊಂದಿದೆ.

ಗುರುಗ್ರಾಮ್ ಮೂಲದ ಸಾಮ್ಹಿ ಹೋಟೆಲ್ಸ್​ ಕಂಪನಿಯು ಭಾರತದಲ್ಲಿ ಫೇರ್​ಫೀಲ್ಡ್​​ ಮ್ಯಾರಿಯಟ್ ಮತ್ತು ಹಾಲಿಡೇ ಇನ್ ಎಕ್ಸ್ ಪ್ರೆಸ್ ಬ್ರಾಂಡ್ ಗಳ ಫೇರ್ ಫೀಲ್ಡ್ ಹೋಟೆಲ್ಸ್​​ಗಳಲ್ಲಿ ಅತ್ಯಧಿಕ ಮಾಲೀಕತ್ವದ ಪಾಲನ್ನು ಹೊಂದಿದೆ. ಇದು ಮ್ಯಾರಿಯಟ್, ಹಯಾತ್ ಮತ್ತು ಐಎಚ್​ಜಿಯಂಥ ಜಾಗತಿಕ ಹೋಟೆಲ್ ಸಂಸ್ಥೆಗಳೊಂದಿಗೆ ದೀರ್ಘಕಾಲೀನ ನಿರ್ವಹಣಾ ಒಪ್ಪಂದಗಳ ಅಡಿ ಕಾರ್ಯನಿರ್ವಹಿಸುತ್ತದೆ.

ಏತನ್ಮಧ್ಯೆ, ಜೈಪುರ ಮೂಲದ ರಿಟೇಲ್​ ಆಭರಣ ಕಂಪನಿ ಮೋತಿಸನ್ ಜ್ಯುವೆಲ್ಲರ್ಸ್​ನ ಐಪಿಒ 3.34 ಕೋಟಿ ಈಕ್ವಿಟಿ ಷೇರುಗಳ ಹೊಸ ವಿತರಣೆಯನ್ನು ಒಳಗೊಂಡಿದೆ ಮತ್ತು ಇದರಲ್ಲಿ ಒಎಫ್ಎಸ್ ಇಲ್ಲ. ಕಂಪನಿಯು ಈ ವಿತರಣೆಯಿಂದ ಬರುವ ನಿವ್ವಳ ಆದಾಯವನ್ನು ವಾಣಿಜ್ಯ ಬ್ಯಾಂಕುಗಳಿಂದ ಪಡೆದ ಅಸ್ತಿತ್ವದಲ್ಲಿರುವ ಸಾಲಗಳನ್ನು ಮರುಪಾವತಿಸಲು, ಕಾರ್ಯ ಬಂಡವಾಳದ ಅವಶ್ಯಕತೆಗಳಿಗೆ ಮತ್ತು ಸಾಮಾನ್ಯ ಕಾರ್ಪೊರೇಟ್ ಉದ್ದೇಶಗಳಿಗಾಗಿ ಬಳಸಲಿದೆ ಎಂದು ಕಂಪನಿ ಹೇಳಿದೆ. ಎರಡೂ ಕಂಪನಿಗಳ ಷೇರುಗಳು ಎನ್ಎಸ್ಇ ಮತ್ತು ಬಿಎಸ್ಇ ಸ್ಟಾಕ್ ಎಕ್ಸ್​ಚೇಂಜ್​ಗಳಲ್ಲಿ ಲಿಸ್ಟ್​ ಆಗಲಿವೆ.

ಇದನ್ನೂ ಓದಿ : Closing Bell: ಐಟಿಸಿ, ರಿಲಯನ್ಸ್, ಇನ್ಫೋಸಿಸ್ ಖರೀದಿ ಅಬ್ಬರ; ಸೆನ್ಸೆಕ್ಸ್​ 152 & ನಿಫ್ಟಿ 47 ಅಂಕ ಏರಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.