ನಿತ್ಯ ಕೆಲಸಕ್ಕೆ ಎದ್ದು ಓಡುವುದು ಸುಲಭದ ಮಾತಲ್ಲ. ಕಚೇರಿ ಸಮಯಕ್ಕೆ, ಬಸ್, ಟ್ರೈನ್ ಇನ್ನಿತರ ವಾಹನದ ಸಮಯಕ್ಕೆ ದಿನಚರಿ ರೂಢಿಸಿಕೊಳ್ಳುವುದು ಅಗತ್ಯವಾಗಿದೆ. ಜೊತೆಗೆ ಈ ಮಧ್ಯೆ ಟ್ರಾಫಿಕ್ನಂತಹ ಈ ರೀತಿಯ ಸಮಸ್ಯೆಗಳು ಇದಕ್ಕೆ ಮತ್ತಷ್ಟು ತಲೆನೋವು ತರುತ್ತದೆ. ಇದಕ್ಕೆ ಅನೇಕ ವೇಳೆ ರಿಮೋಟ್ ಕೆಲಸ ಪರಿಹಾರವಾಗಿ ಕಾಣುವುದು ಸುಳ್ಳಲ್ಲ. ಆಧುನಿಕ ಕೆಲಸಗಳು ಇಂತಹ ಅವಕಾಶಗಳನ್ನು ಹೊಂದಿದ್ದು, ಈ ರೀತಿಯ ಉದ್ಯೋಗಗಳನ್ನು ಹುಡುಕುವುದು ಅಗತ್ಯವೂ ಆಗುತ್ತದೆ.
ಲಾಕ್ ಡೌನ್ ಬಳಿಕ ಬಹುತೇಕ ಸಂಸ್ಥೆಗಳು ಈ ರಿಮೋಟ್ ವರ್ಕ್ ಆಯ್ಕೆಯ ಅವಕಾಶವನ್ನು ನೀಡಿದವು. ಇಂದಿಗೂ ಅನೇಕ ಕಂಪನಿಗಳು ಈ ರೀತಿಯ ಉದ್ಯೋಗ ಅನುಕೂಲತೆ ಕಲ್ಪಿಸಿ, ಮನೆಯಿಂದಲೇ ಕೆಲಸ ಮಾಡುವ ಅವಕಾಶ ನೀಡಿದೆ. ಇದರಿಂದ ಕಚೇರಿ ಹೊರತಾಗಿ ಪ್ರವಾಸ ತಾಣ, ಪಾರ್ಕ್ ಸೇರಿದಂತೆ ನಿಮ್ಮಿಷ್ಟದ ತಾಣದಿಂದಲೇ ಕೆಲಸ ಮಾಡಬಹುದು.
- ರಿಮೋಟ್ ಕೆಲಸಗಳು ಅನೇಕ ಪ್ರಯೋಜನ ಹೊಂದಿರುವುದು ಸುಳ್ಳಲ್ಲ. ಇದು ನಿಮ್ಮ ಸಮಯವನ್ನು ಉಳಿತಾಯ ಮಾಡಿ, ಸಾರಿಗೆ ವೆಚ್ಚ ಸೇರಿದಂತೆ ಅನೇಕ ಖರ್ಚುಗಳನ್ನು ಉಳಿಸುತ್ತದೆ
- ರಿಮೋಟ್ ಕೆಲಸದಲ್ಲಿ ನಿಗದಿತ ಸಮಯದಲ್ಲಿ ಕೆಲಸ ಮುಗಿಯುವುದರಿಂದ ಉಳಿದ ಸಮಯವನ್ನು ಇತರ ಶೈಕ್ಷಣಿಕ ಚಟುವಟಿಕೆಗೆ ಬಳಕೆ ಮಾಡಬಹುದಾಗಿದೆ. ಅಲ್ಲದೇ, ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಬೆಳಗ್ಗೆ ಅಥವಾ ಸಂಜೆ ಸಮಯದಲ್ಲಿ ತಮ್ಮಿಷ್ಟದ ಕೋರ್ಸ್ಗಳಿಗೆ ಸೇರಬಹುದಾಗಿದೆ.
- ಪ್ರಯಾಣದ ವೇಳೆ ವ್ಯರ್ಥವಾಗುತ್ತಿದ್ದ ಸಮಯವನ್ನು ಇತರ ತಾಂತ್ರಿಕ ಕೌಶಲ್ಯದ ಅಭಿವೃದ್ಧಿಗೆ ಬಳಕೆ ಮಾಡಬಹುದಾಗಿದೆ
- ಆನ್ಲೈನ್ ಕ್ಲಾಸ್ನಲ್ಲಿ ಆಸಕ್ತಿ ಹೊಂದಿರುವವರು ಅದಕ್ಕೆ ಸೇರಿ, ಕೌಶಲ್ಯದ ತರಬೇತಿಯನ್ನು ಪಡೆಯಬಹುದಾಗಿದೆ
- ಆಸಕ್ತಿ ಹೊಂದಿರುವ ಯಾವುದೆ ಕ್ರೀಡಾ ಚಟುವಟಿಕೆಯಲ್ಲಿ ಭಾಗಿಯಾಗಬಹುದಾಗಿದೆ. ಸಂಗೀತ, ಚಿತ್ರಕಲೆ, ಪೈಂಟಿಂಗ್, ಯೋಗ ಮತ್ತು ಧ್ಯಾನಕ್ಕೆ ಸೇರಬಹುದಾಗಿದೆ
- ರಿಮೋಟ್ ಕೆಲಸವೂ ಮಹಿಳೆಯರಿಗೆ ಹೆಚ್ಚಿನ ಆರಾಮದಾಯಕ ಕಾರ್ಯ ನಿರ್ವಹಣೆ ಆಗಿದೆ. ಇದರಿಂದ ಅವರು ಕೆಲಸದ ಜೊತೆಗೆ ಮನೆಯಲ್ಲಿ ವಯಸ್ಕರು ಅಥವಾ ಮಕ್ಕಳ ಜವಾಬ್ದಾರಿಯನ್ನು ನಿರ್ವಹಣೆ ಮಾಡಬಹುದಾಗಿದೆ.
- ಪ್ರಯಾಣದ ಸಮಯದ ಅಥವಾ ರಜೆ ಸಮಯದಲ್ಲಿ ನಿಮ್ಮಿಷ್ಟದ ಸ್ಥಳ ಮತ್ತು ವ್ಯಕ್ತಿಗಳ ಭೇಟಿಯನ್ನು ಮಾಡಬಹುದು.
- ನಗರದಲ್ಲೇ ಕೆಲಸ ಮಾಡಬೇಕು ಎಂಬ ಅಗತ್ಯವಿಲ್ಲ. ಅಂತರ್ಜಾಲದ ಲಭ್ಯತೆ ಇದ್ದರೆ, ಎಲ್ಲಿಂದಲಾದರೂ ಕೆಲಸ ಮಾಡಬಹುದಾಗಿದೆ.
- ಕುಟುಂಬದ ಜೊತೆಗೆ ಕೆಲಸ ಮಾಡಬಹುದಾಗಿದೆ.
- ಕೆಲಸ ಮತ್ತು ವೈಯಕ್ತಿಕ ಜೀವನದಲ್ಲಿನ ಸಾಮರಸ್ಯ ಕಾಪಾಡಿಕೊಳ್ಳಬಹುದಾಗಿದೆ.
- ಕಚೇರಿಯಲ್ಲಿ ಎಷ್ಟೆ ಎಚ್ಚರಿಕೆಯಿಂದ ಇದ್ದರೂ ಅಲ್ಲಿ ಕೆಲವು ಬಾರಿ ನಡೆಯುವ ಅನಗತ್ಯ ರಾಜಕೀಯಗಳಿಗೆ ಬಲಿಯಾಗಬಹುದು. ಆದರೆ, ರಿಮೋಟ್ ಕೆಲಸದಿಂದ ಈ ರೀತಿಯ ಕಿರಿಕಿರಿ ಇಲ್ಲದೇ, ನೆಮ್ಮದಿಯಾಗಿ ಕೆಲಸ ಮಾಡಬಹುದು.
- ಇನ್ನು ರಿಮೋಟ್ ವರ್ಕ್ ಕೆಲಸ ಮಾಡಬೇಕು ಎಂಬ ಇಚ್ಛೆ ನಿಮಗಿದ್ದು, ಎಲ್ಲಿ ಇದು ಲಭ್ಯವಿದೆ. ಹೇಗೆ ಹುಡುಕುವುದು ಎಂಬ ಪ್ರಶ್ನೆಗೆ ಇಲ್ಲಿದೆ ಕೆಲವು ಮಾಹಿತಿ.
https://www.flexjobs.com/: ಇದು ಸರಿಸುಮಾರು 50 ವಲಯದ ಪಾರ್ಟ್ ಟೈಮ್ ಉದ್ಯೋಗದ ವಿವರವನ್ನು ಒಳಗೊಂಡಿದೆ. ಅದರಲ್ಲಿ ಹಣಕಾಸು, ಈವೆಂಟ್ ಪ್ಲಾನಿಂಗ್, ಮಾನವ ಸೇವೆ, ಇನ್ಸುರೆನ್ಸ್ ಮುಂತಾದವುಗಳಿವೆ. ಇಲ್ಲಿ ಆರಂಭಿಕ ಮಟ್ಟದಿಂದ ಎಕ್ಸಿಕ್ಸುಟಿವ್ ಮಟ್ಟದವರೆಗೆ ಉದ್ಯೋಗ ಲಭ್ಯವಿದ್ದು, ಕಡಿಮೆ ಮತ್ತು ಉನ್ನತ ಶಿಕ್ಷಣದಾರರಿಗೆ ಪ್ರಯೋಜನ ನೀಡಲಿದೆ.
https://remote.co/: ಪುಸ್ತಕ ಸಂಗ್ರಹ, ದತ್ತಾಂಶ ದಾಖಲಾತಿ, ಆರೋಗ್ಯ ಸೇವೆ ಮತ್ತು ಆಡಳಿತದಂತಹ ಹುದ್ದೆಗಳನ್ನು ಇವು ಒಳಗೊಂಡಿದೆ. ಜೊತೆಗೆ ಬ್ಲಾಗ್ ಅನ್ನು ಇದು ನಿರ್ವಹಣೆ ಮಾಡುತ್ತದೆ. ಜೊತೆಗೆ ಸಾಮಾಜಿಕ ಮಾಧ್ಯಮದ ಟ್ರೆಂಡಿಂಗ್ ವಿಷಯದ ಚರ್ಚೆಯನ್ನು ಪಡೆಯಬಹುದು. ಅನೇಕ ಕ್ಷೇತ್ರದ ಬಗ್ಗೆ ಕೇಳಲಾಗುವ ಜನರ ಪ್ರಶ್ನೆಗೆ ಇದು ಉತ್ತರ ಒದಗಿಸಲಿದೆ.
https://remoteok.com/: ಸಾಫ್ಟ್ವೇರ್ ಡೆವಲಪ್ಮೆಂಟ್, ಗ್ರಾಹಕ ಬೆಂಬಲ, ಮಾರ್ಕೆಟಿಂಗ್, ಡಿಸೈನ್ ಮುಂತಾದ ಕ್ಷೇತ್ರದಲ್ಲಿ ಉದ್ಯೋಗ ಲಭ್ಯವಿದೆ.
https://www.upwork.com/: ಐಟಿ, ಎಐ ಸೇವೆ, ಇಂಜಿನಿಯರಿಂಗ್, ಆರ್ಕಿಟೆಕ್ಚರ್, ಬರಹ, ಭಾಷಾಂತಾರ, ವಿನ್ಯಾಸ, ಕ್ರಿಯೇಟಿವ್, ಸೇಲ್ಸ್, ಮಾರ್ಕೆಟಿಂಗ್, ಆಡ್ಮಿನ್, ಕಸ್ಟಮರ್ ಸಪೋರ್ಟ್, ಫೈನಾನ್ಸ್, ಅಕೌಂಟಿಕ್, ಲೀಗಲ್, ಎಚ್ ಅಂಡ್ ಟ್ರೈನಿಂಗ್ ಸೇರಿದಂತೆ ಹಲವು ಹುದ್ದೆಗಳು ಇದರಲ್ಲಿ ಲಭ್ಯವಿದೆ. ಇದು ನಿಮ್ಮ ವೈಯಕ್ತಿಕ ಕೌಶಲ್ಯವನ್ನು ಅಭಿವೃದ್ಧಿ ಪಡಿಸುತ್ತದೆ. ಫ್ರಿಲಾನ್ಸರ್ ಮತ್ತು ಶಾರ್ಟ್ ಟರ್ಮ್ ಉದ್ಯೋಗ ಕೂಡ ಲಭ್ಯವಿದೆ.
https://weworkremotely.com/: ಈ ಜಾಲತಾಣಕ್ಕೆ ಪ್ರತಿತಿಂಗಳು 45 ಲಕ್ಷ ಮಂದಿ ಭೇಟಿ ನೀಡುತ್ತಾರೆ. ಸಂಪೂರ್ಣ ಅವಧಿ ಮತ್ತು ಕಂಟ್ರಾಕ್ಟ್ ಜಾಜ್ಗಳು ಲಭ್ಯ. ಪ್ರೋಗ್ರಾಮಿಂಗ್, ಡಿಸೈನ್, ಕಾಪಿ ರೈಟಿಂಗ್, ಸೇಲ್ಸ್ ಮತ್ತು ಮಾರ್ಕೆಟಿಂಗ್ ಹುದ್ದೆ ಅವಕಾಶ ಇದೆ.
https://in.indeed.com/: ನೌಕರಿ.ಕಾಂ ನಂತೆ ಇದು ಕೆಲಸ ಮಾಡಲಿದ್ದು, ಮನೆಯಿಂದ ಕೆಲಸ ಮಾಡಲು ಪ್ರತ್ಯೇಕ ವಿಭಾಗವಿದೆ. ಕೆಲಸಕ್ಕೆ ಹುಡುಕುತ್ತಿರುವವರಿಗೆ ಇದು ಅದ್ಭುತ ತಾಣವಾಗಿದೆ. ಹುದ್ದೆ ಸಂಬಂಧಿಸಿದ ಎಲ್ಲ ಮಾಹಿತಿಗಳು ಉದ್ಯೋಗ ವಿವರಣೆಯಲ್ಲಿ ಲಭ್ಯವಾಗಲಿದೆ.
https://jobspresso.co/: ಟೆಕ್ನಾಲಜಿ, ಕಸ್ಟಮರ್ ಸಪೋರ್ಟ್, ಡಿಸೈನ್, ಯುಎಕ್ಸ್, ಡೆವಒಪ್ಸ್, ರೈಟಿಂಗ್, ಎಡಿಟಿಂಗ್ ಮತ್ತು ಡೆಮಲ್ಮೆಂಟ್ ನಂತಹ ಉದ್ಯೋಗವನ್ನು ಪಡೆಯಬಹುದಾಗಿದೆ. ಅಷ್ಟೇ ಅಲ್ಲದೆ ಇಲ್ಲಿ ಇಂಗ್ಲಿಷ್ ಟ್ಯೂಟರ್ ಅನ್ನು ಪಡೆಯಬಹುದಾಗಿದೆ
https://powertofly.com/: ಮಹಿಳಾ ಉದ್ಯೋಗಿಗಳಿಗೆ ಆದ್ಯತೆ ನೀಡುವಲ್ಲಿ ಇದು ಪ್ರಮುಖವಾಗಿದೆ. ಮಹಿಳೆಯರ ವೃತ್ತಿ ಆಯ್ಕೆ ಸಂಬಂಧಿಸಿದ ಸಲಹೆಯನ್ನು ಪಡೆಯಬಹುದಾಗಿದೆ. ಅನೇಕ ವಿಚಾರ ಕುರಿತು ವರ್ಷವೀಡಿ ಮೀಟಿಂಗ್ ನಡೆಸಲಾಗುವುದು.
https://www.virtualvocations.com/: ಹಲವು ಕ್ಷೇತ್ರದಲ್ಲಿ ಟೆಲಿಕಮ್ಯೂಟಿಂಗ್ ಮೆಟ್ರಿಕ್ಸ್ ನೈಪುಣ್ಯತೆ ಒದಗಿಸುತ್ತದೆ. ಮಾರ್ಕೆಟಿಂಗ್ ಮತ್ತು ಅಕೌಂಟ್ ಕ್ಷೇತ್ರದಲ್ಲಿ ಉದ್ಯೋಗ ಲಭ್ಯವಿದೆ.
(ಸೂಚನೆ: ಸೈಟ್ಗಳ ಅಧಿಕೃತತೆಯನ್ನು ಗಮನಿಸಿ, ದೃಢೀಕರಣ ಮಾಡಿಕೊಂಡು ಮುಂದುವರೆಯುವುದು ಉತ್ತಮ)
ಇದನ್ನೂ ಓದಿ: Job Alert: ವಿಜಯಪುರ ಜಿಲ್ಲಾ ಪಂಚಾಯತ್ನಿಂದ ನೇಮಕಾತಿ; ಪಿಯುಸಿ ಆಗಿದ್ರೆ ಅರ್ಜಿ ಸಲ್ಲಿಸಿ