ETV Bharat / business

ಸಾರ್ವಜನಿಕ ವಲಯದ ಬ್ಯಾಂಕ್‌ಗಳ ವಸೂಲಾಗದ ಆಸ್ತಿಯಲ್ಲಿ ಎಸ್‌ಬಿಐ ಪಾಲೇ ಹೆಚ್ಚು! - ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ

ಸರ್ಕಾರಿ ಒಡೆತದ ಪ್ರಮುಖ ನಾಲ್ಕು ಬ್ಯಾಂಕುಗಳಲ್ಲಿ ಕೆಟ್ಟ ಸಾಲ ಅಥವಾ ವಸೂಲಾಗದ ಆಸ್ತಿಯ ಪ್ರಮಾಣ ಹೆಚ್ಚಿದೆ. ಕಳೆದ ಮೂರು ಹಣಕಾಸು ವರ್ಷಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ವಂಚನೆಗಳನ್ನು ಈ 4 ಬ್ಯಾಂಕ್‌ಗಳು ವರದಿ ಮಾಡಿವೆ. ಇದರಲ್ಲಿ ಎಸ್‌ಬಿಐ ಪಾಲು ಜಾಸ್ತಿ ಇದೆ..

SBI worst hit by major frauds
ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಕೆಟ್ಟ ಸಾಲ ಅಥವಾ ಅನುತ್ಪಾದಕ ಆಸ್ತಿಯಲ್ಲಿ ಎಸ್‌ಬಿಐ ಪಾಲೇ ಹೆಚ್ಚು..!
author img

By

Published : Mar 29, 2022, 12:53 PM IST

ನವದೆಹಲಿ : ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್‌ ಎಸ್‌ಐಬಿ ಅತಿ ಹೆಚ್ಚು ವಂಚನೆಗಳಿಂದ ಕೆಟ್ಟ ಸಾಲ(ಬ್ಯಾಡ್‌ ಲೋನ್) ಅಥವಾ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ವಸೂಲಾಗದ ಆಸ್ತಿಯು 2018ರ ಮಾರ್ಚ್‌ನಲ್ಲಿದ್ದ ಗರಿಷ್ಠ 8.95 ಲಕ್ಷ ಕೋಟಿ ರೂಪಾಯಿಗಳಿಂದ 2021ರ ಡಿಸೆಂಬರ್‌ ವೇಳೆಗೆ 5.59 ಲಕ್ಷ ಕೋಟಿ ರೂಪಾಯಿಗೆ ಇಳಿದಿದೆ.

ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಕೆಟ್ಟ ಸಾಲಗಳು ಅಥವಾ ವಸೂಲಾಗದ ಆಸ್ತಿಗಳು 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಿ ವಹಿಸಿಕೊಳ್ಳುವ ಮುನ್ನ 2.17 ಲಕ್ಷ ಕೋಟಿ ರೂಪಾಯಿ ಇತ್ತು. ಆದರೆ, ಈ ಪ್ರಮಾಣ 2018ರ ಮಾರ್ಚ್ ವೇಳೆಗೆ 8.95 ಲಕ್ಷ ಕೋಟಿ ರೂಪಾಯಿಗೆ ಏರಿತ್ತು. ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಬ್ಯಾಲೆನ್ಸ್‌ಶೀಟ್‌ಗಳಲ್ಲಿ ಕೆಟ್ಟ ಸಾಲಗಳನ್ನು ಪಾರದರ್ಶಕವಾಗಿ ಗುರುತಿಸುವ ಪ್ರಕ್ರಿಯೆಯನ್ನು ಸರ್ಕಾರ ಪ್ರಾರಂಭಿಸಿದೆ.

ಕಳೆದ ಮೂರು ವರ್ಷಗಳಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಒಟ್ಟು ಕೆಟ್ಟ ಸಾಲದ ಮೊತ್ತವು ಕಳೆದ ವರ್ಷದ ಡಿಸೆಂಬರ್‌ ವೇಳೆಗೆ 8.95 ಲಕ್ಷ ಕೋಟಿಯಿಂದ 5.59 ಲಕ್ಷ ಕೋಟಿ ರೂ.ಗೆ ಇಳಿದಿದೆ ಎಂದು ಹಣಕಾಸು ಸಚಿವಾಲಯ ಇಂದು ಲೋಕಸಭೆಗೆ ಮಾಹಿತಿ ನೀಡಿದೆ. ಇದು ಸರ್ಕಾರದ ಮಾನ್ಯತೆ, ನಿರ್ಣಯ, ಮರು ಬಂಡವಾಳೀಕರಣ ಹಾಗೂ ಸುಧಾರಣೆಗಳ ಕಾರ್ಯತಂತ್ರದ ಕಾರಣದಿಂದಾಗಿ ಅನುತ್ಪಾದಕ ಆಸ್ತಿಯ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಹಣಕಾಸು ಇಲಾಖೆ ರಾಜ್ಯ ಸಚಿವ ಭಾಗವತ್ ಕಾರಟ್ ಹೇಳಿದ್ದಾರೆ.

ರಿಸರ್ವ್ ಬ್ಯಾಂಕ್‌ನ ಸೂಚನೆಗಳ ಪ್ರಕಾರ, ಸಾರ್ವಜನಿಕ ವಲಯದ ಬ್ಯಾಂಕ್‌ಗಳು ವರದಿ ಮಾಡಿದ ವಂಚನೆಗಳನ್ನು ಆನ್‌ಲೈನ್‌ನಲ್ಲಿ ಹುಡುಕಬಹುದಾದ ಡೇಟಾಬೇಸ್ ಅನ್ನು ಸಕಾಲಿಕವಾಗಿ ಗುರುತಿಸಲು ಮತ್ತು ವಂಚನೆಯ ಅಪಾಯದ ನಿಯಂತ್ರಣಕ್ಕಾಗಿ ಸೆಂಟ್ರಲ್ ಫ್ರಾಡ್ ರಿಜಿಸ್ಟ್ರಿಯನ್ನು ರಚಿಸಲಾಗಿದೆ. ಕಳೆದ ಮೂರು ಹಣಕಾಸು ವರ್ಷಗಳ ಇತ್ತೀಚಿನ ಅಂಕಿ-ಅಂಶಗಳನ್ನು ಉಲ್ಲೇಖಿಸಿದ ಸಚಿವರು, ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಣಕಾಸು ವರ್ಷ 2018-19 ಮತ್ತು 2020-21ರ ನಡುವೆ ಗರಿಷ್ಠ ಬ್ಯಾಂಕಿಂಗ್ ವಂಚನೆಗಳು ವರದಿಯಾಗಿವೆ ಎಂದರು.

ಕಳೆದ ಮೂರು ಹಣಕಾಸು ವರ್ಷಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ವಂಚನೆಗಳನ್ನು ನಾಲ್ಕು ಬ್ಯಾಂಕ್‌ಗಳು ವರದಿ ಮಾಡಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಾಗೂ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಪ್ರಮುಖ ಬ್ಯಾಂಕುಗಳು ಇದರಲ್ಲಿ ಎಸ್‌ಬಿಐಗೆ ಹೆಚ್ಚು ಹಾನಿಯಾಗಿದೆ.

ವಂಚನೆ ಪ್ರಕರಣಗಳಲ್ಲಿ ಎಸ್‌ಬಿಐ ಪಾಲೇ ಹೆಚ್ಚು: ಸ್ಟೇಟ್ ಬ್ಯಾಂಕ್ ಆಫ್‌ ಇಂಡಿಯಾ 14,431 ವಂಚನೆಗಳನ್ನು ವರದಿ ಮಾಡಿದೆ, ನಂತರ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (2,299), ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (1,184) ಹಾಗೂ ಪಂಜಾಬ್ ನ್ಯಾಷನಲ್ ಬ್ಯಾಂಕ್ (1,040) ವಂಚನೆ ಪ್ರಕರಣಗಳಿವೆ.

ಐಡಿಬಿಐ ಬ್ಯಾಂಕ್ (747 ವಂಚನೆಗಳು), ಇಂಡಿಯನ್ ಓವರ್‌ಸೀಸ್ ಬ್ಯಾಂಕ್ (552), ಇಂಡಿಯನ್ ಬ್ಯಾಂಕ್ (517), ಯುಕೋ ಬ್ಯಾಂಕ್ (487 ವಂಚನೆಗಳು), ಬ್ಯಾಂಕ್ ಆಫ್ ಮಹಾರಾಷ್ಟ್ರ (435 ವಂಚನೆಗಳು), ಬ್ಯಾಂಕ್ ಆಫ್ ಬರೋಡಾ (378) ಹಾಗೂ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ (349 ), ಸಿಂಡಿಕೇಟ್ ಬ್ಯಾಂಕ್ (278), ಬ್ಯಾಂಕ್ ಆಫ್ ಇಂಡಿಯಾ(274), ಕೆನರಾ ಬ್ಯಾಂಕ್ (259), ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ (211) ವಂಚನೆಗಳನ್ನು ವರದಿ ಮಾಡಿವೆ.

ಇದನ್ನೂ ಓದಿ: ವಿದೇಶಿ ಪ್ರವಾಸದ ವೇಳೆ ಕ್ರೆಡಿಟ್‌ ಕಾರ್ಡ್‌ನಿಂದ ಅತ್ಯುತ್ತಮ ಸೇವೆ ಪಡೆಯುವುದು ಹೇಗೆ..?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.