ETV Bharat / business

ನಾಲ್ಕನೇ ತ್ರೈಮಾಸಿಕದಲ್ಲಿ ಎಸ್​ಬಿಐಗೆ ₹9,114 ಕೋಟಿ ನಿವ್ವಳ ಲಾಭ - ಎಸ್​ಬಿಐಗೆ 9 ಸಾವಿರ ಕೋಟಿ ನಿವ್ವಳ ಲಾಭ

ಬಾಕಿ ಉಳಿದ ಸಾಲಗಳ ಮರುಪಾವತಿ ಹೆಚ್ಚಾದ ಕಾರಣ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ(ಎಸ್‌ಬಿಐ) ಈ ಹಣಕಾಸು ವಷವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ 9,114 ಕೋಟಿ ರೂ. ಲಾಭ ಗಳಿಸಿದೆ. ಅಂದರೆ ಶೇ.41 ರಷ್ಟು ಎಂದರ್ಥ.

sbi
ಎಸ್​ಬಿಐ
author img

By

Published : May 13, 2022, 8:54 PM IST

ನವದೆಹಲಿ: ಕೆಟ್ಟ ಸಾಲಗಳು ಇಳಿಮುಖವಾದ ಕಾರಣ ದೇಶದ ಅತಿದೊಡ್ಡ ಬ್ಯಾಂಕಾದ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ(ಎಸ್‌ಬಿಐ) ನಾಲ್ಕನೇ ತ್ರೈಮಾಸಿಕದಲ್ಲಿ ಶೇ.41 ರಷ್ಟು ನಿವ್ವಳ ಲಾಭ ಗಳಿಸಿದೆ. 2021-22 ನೇ ಸಾಲಿನ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಬ್ಯಾಂಕಿನ ಲಾಭ 9,114 ಕೋಟಿ ರೂಪಾಯಿ ತಲುಪಿದೆ. ಇದು ಕಳೆದ ವರ್ಷ 6,451 ಕೋಟಿಯಾಗಿತ್ತು. ಅಂದರೆ ಶೇ.41 ರಷ್ಟು ಲಾಭ ಕಂಡಿದೆ.

ಮಾರ್ಚ್ ತಿಂಗಳಿಗೆ ಅಂತ್ಯಗೊಂಡ ಬ್ಯಾಂಕಿನ ಒಟ್ಟು ಆದಾಯವು 82,613 ಕೋಟಿ ರೂ.ಗೆ ಏರಿಕೆಯಾಗಿದ್ದು, ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ 81,327 ಕೋಟಿ ರೂ. ಆದಾಯ ಬಂದಿತ್ತು. 2021-22 ರ ಸಂಪೂರ್ಣ ಹಣಕಾಸು ವರ್ಷಕ್ಕೆ ಹೋಲಿಸಿದರೆ 31,676 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷದ ಹಣಕಾಸು ವರ್ಷದಲ್ಲಿ ಬ್ಯಾಂಕ್ 20,410 ಕೋಟಿ ರೂ.ಗಳಿಸಿತ್ತು. ಅಂದರೆ ಇದು ಈ ವರ್ಷ 55 ಪ್ರತಿಶತ ಏರಿಕೆಯನ್ನು ಕಂಡಿದೆ.

ಇನ್ನು ಎಸ್​ಬಿಐನ ಪ್ರತಿ ಷೇರಿಗೆ 7.10 ಅಥವಾ ಮುಖಬೆಲೆಯ ಮೇಲೆ ಶೇಕಡಾ 710 ರಷ್ಟು ಲಾಭಾಂಶವನ್ನು ಮಂಡಳಿಯು ಶಿಫಾರಸು ಮಾಡಿದೆ. ಎಸ್‌ಬಿಐ ಷೇರುಗಳು ಪ್ರತಿ ಯುನಿಟ್‌ಗೆ 467.85 ರೂಪಾಯಿ ದರದಲ್ಲಿ ವಹಿವಾಟು ನಡೆಸುತ್ತಿವೆ. ಬಿಎಸ್‌ಇಯಲ್ಲಿ ಶೇ 1.17 ರಷ್ಟು ಏರಿಕೆಯಾಗಿದೆ.

ಓದಿ: ಬಳಕೆಗಿಂತ ನಕಲಿ ಖಾತೆಗಳೇ ಹೆಚ್ಚು.. ಟ್ವಿಟರ್​ ಖರೀದಿ ಒಪ್ಪಂದ ಸದ್ಯಕ್ಕೆ ಸ್ಥಗಿತ ಎಂದ ಎಲಾನ್ ಮಸ್ಕ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.