ETV Bharat / business

ಎಸ್​ಬಿಐ ಸಾಲದ ಬಡ್ಡಿ ದರ ಶೇ 0.7 ಏರಿಕೆ: ದುಬಾರಿಯಾಗಲಿದೆ ಇಎಂಐ - ಬಿಪಿಎಲ್​ಆರ್ ಮತ್ತು ಮೂಲ ದರ

ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಸಾಲದ ಬಡ್ಡಿ ದರಗಳನ್ನು ಹೆಚ್ಚಿಸಿದೆ. ಇದರಿಂದ ಸಾಲದ ಇಎಂಐ ಕಂತುಗಳು ದುಬಾರಿಯಾಗುವ ಸಾಧ್ಯತೆಗಳಿವೆ.

ಎಸ್​ಬಿಐ ಸಾಲದ ಬಡ್ಡಿ ದರ ಶೇ 0.7 ಏರಿಕೆ
SBI raises benchmark lending rate
author img

By

Published : Sep 15, 2022, 10:51 AM IST

ನವದೆಹಲಿ: ದೇಶದ ಅತಿದೊಡ್ಡ ಸಾಲ ನೀಡುವ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಬುಧವಾರ ತನ್ನ ಬೆಂಚ್‌ಮಾರ್ಕ್ ಪ್ರೈಮ್ ಲೆಂಡಿಂಗ್ ರೇಟ್ (ಬಿಪಿಎಲ್‌ಆರ್) ಅನ್ನು 70 ಬೇಸಿಸ್ ಪಾಯಿಂಟ್‌ಗಳಷ್ಟು (ಅಥವಾ ಶೇ 0.7) ಅಂದರೆ ಶೇ 13.45 ಕ್ಕೆ ಹೆಚ್ಚಿಸಿದೆ. ಇದರಿಂದ ಬಿಪಿಎಲ್​ಆರ್ ಆಧರಿತ ಸಾಲದ ಕಂತುಗಳು ದುಬಾರಿಯಾಗಲಿವೆ. ಇದಕ್ಕೂ ಮುನ್ನ ಬಿಪಿಎಲ್​ಎರ್ ದರ ಶೇ 12.75 ರಷ್ಟಿತ್ತು. ಇದನ್ನು ಕಳೆದ ಜೂನ್​ನಲ್ಲಿ ಪರಿಷ್ಕರಿಸಲಾಗಿತ್ತು.

ಸೆಪ್ಟೆಂಬರ್ 15, 2022 ರಿಂದ ಜಾರಿಗೆ ಬರುವಂತೆ ಬೆಂಚ್‌ಮಾರ್ಕ್ ಪ್ರೈಮ್ ಲೆಂಡಿಂಗ್ ದರವನ್ನು (ಬಿಪಿಎಲ್‌ಆರ್) ವಾರ್ಷಿಕವಾಗಿ ಶೇಕಡಾ 13.45 ರಂತೆ ಪರಿಷ್ಕರಿಸಲಾಗಿದೆ ಎಂದು ಎಸ್‌ಬಿಐ ತನ್ನ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದೆ.

ಬ್ಯಾಂಕ್ ಸಾಲದ ಮೂಲ ದರವನ್ನು (ಬೇಸ್ ರೇಟ್) ಕೂಡ ಇದೇ ರೀತಿ ಶೇ 8.7 ಕ್ಕೆ ಏರಿಸಿದೆ. ಇದು ಗುರುವಾರದಿಂದ ಜಾರಿಗೆ ಬರುತ್ತದೆ. ಮೂಲ ದರದಲ್ಲಿ ಸಾಲ ಪಡೆದ ಸಾಲಗಾರರಿಗೆ ಇಎಂಐ ಮೊತ್ತ ಹೆಚ್ಚಾಗಲಿದೆ.

ಇವು ಬ್ಯಾಂಕ್‌ಗಳು ಸಾಲ ವಿತರಿಸಲು ಬಳಸುವ ಹಳೆಯ ಮಾನದಂಡಗಳಾಗಿವೆ. ಈಗ ಹೆಚ್ಚಿನ ಬ್ಯಾಂಕ್‌ಗಳು ಬಾಹ್ಯ ಮಾನದಂಡ ಆಧಾರಿತ ಸಾಲ ದರ (ಇಬಿಎಲ್‌ಆರ್) ಅಥವಾ ರೆಪೊ-ಲಿಂಕ್ಡ್ ಲೆಂಡಿಂಗ್ ರೇಟ್ (ಆರ್‌ಎಲ್‌ಎಲ್‌ಆರ್) ಮೇಲೆ ಸಾಲ ನೀಡುತ್ತವೆ.

ಬ್ಯಾಂಕ್ ಬಿಪಿಎಲ್​ಆರ್ ಮತ್ತು ಮೂಲ ದರ ಎರಡನ್ನೂ ತ್ರೈಮಾಸಿಕ ಆಧಾರದ ಮೇಲೆ ಪರಿಷ್ಕರಿಸುತ್ತದೆ. ಎಸ್‌ಬಿಐನ ಸಾಲದ ದರ ಪರಿಷ್ಕರಣೆಯನ್ನು ಮುಂದಿನ ದಿನಗಳಲ್ಲಿ ಇತರ ಬ್ಯಾಂಕ್‌ಗಳು ಅನುಸರಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: ಕಡಿಮೆ ಬಡ್ಡಿಗೆ ಸಾಲ ಅನ್ನೋ ನಾಜೂಕಿನ ಮಾತುಗಳನ್ನ ನಂಬಬೇಡ.. ನಂಬಿದ್ರೇ ನಿಮಗೂ ಇದೇ ಸ್ಥಿತಿ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.