ETV Bharat / business

ಎಸ್​ಬಿಐ ಫಿಕ್ಸೆಡ್ ಡಿಪಾಸಿಟ್ ಬಡ್ಡಿದರ ಹೆಚ್ಚಳ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಫಿಕ್ಸೆಡ್ ಡಿಪಾಸಿಟ್​ಗಳ ಮೇಲಿನ ಬಡ್ಡಿದರ ಹೆಚ್ಚಿಸಿದೆ.

SBI hikes interest rates on FDs
SBI hikes interest rates on FDs
author img

By ETV Bharat Karnataka Team

Published : Dec 27, 2023, 4:40 PM IST

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್​ಬಿಐ) ಕೆಲ ಸ್ಥಿರ ಠೇವಣಿಗಳ (ಎಫ್​ಡಿ) ಮೇಲಿನ ಬಡ್ಡಿದರಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಶೇಕಡಾ 0.5ರಷ್ಟು ಹೆಚ್ಚಿಸಿದೆ. 7 ದಿನಗಳಿಂದ 45 ದಿನಗಳವರೆಗಿನ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇಕಡಾ 3ರಿಂದ 3.50ಕ್ಕೆ ಹೆಚ್ಚಿಸಲಾಗಿದೆ. 46 ದಿನಗಳಿಂದ 179 ದಿನಗಳ ಅವಧಿಯ ಠೇವಣಿಗಳ ಬಡ್ಡಿದರವನ್ನು ಶೇಕಡಾ 4.50ರಿಂದ ಶೇಕಡಾ 4.75ಕ್ಕೆ, 180 ದಿನಗಳಿಂದ 210 ದಿನಗಳವರೆಗಿನ ಅವಧಿಯ ಠೇವಣಿಗಳ ಬಡ್ಡಿದರವನ್ನು ಶೇಕಡಾ 5.25ರಿಂದ ಶೇಕಡಾ 5.75ಕ್ಕೆ, 211 ದಿನಗಳಿಂದ ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳಿಗೆ ಬಡ್ಡಿದರವನ್ನು ಶೇಕಡಾ 5.75ರಿಂದ ಶೇಕಡಾ 6ಕ್ಕೆ ಹೆಚ್ಚಿಸಲಾಗಿದೆ.

ಮೂರು ವರ್ಷದಿಂದ ಐದು ವರ್ಷಗಳಿಗಿಂತ ಕಡಿಮೆ ಅವಧಿಯ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇಕಡಾ 6.50ರಿಂದ 6.75ಕ್ಕೆ ಹೆಚ್ಚಿಸಲಾಗಿದೆ. ಇತರ ಅವಧಿಯ ಠೇವಣಿಗಳ ಮೇಲಿನ ಬಡ್ಡಿದರಗಳು ಹಿಂದಿನಂತೆ ಮುಂದುವರಿಯಲಿವೆ. ಬ್ಯಾಂಕ್ ಕೊನೆಯ ಬಾರಿಗೆ ಫೆಬ್ರವರಿ 2023ರಲ್ಲಿ ಎಫ್​ಡಿ ದರಗಳನ್ನು ಪರಿಷ್ಕರಿಸಿತ್ತು.

ಡಿಸೆಂಬರ್ 27ರಿಂದ ಜಾರಿಗೆ ಬಂದಿರುವ ವಿವಿಧ ಅವಧಿಯ ಸ್ಥಿರ ಠೇವಣಿಗಳ ಬಡ್ಡಿದರದ ಕೋಷ್ಟಕ ಇಲ್ಲಿದೆ:

  • 7 ದಿನಗಳಿಂದ 45 ದಿನಗಳವರೆಗೆ 3.50%
  • 46 ದಿನಗಳಿಂದ 179 ದಿನಗಳು 4.75%
  • 180 ದಿನಗಳಿಂದ 210 ದಿನಗಳವರೆಗೆ 5.75%
  • 211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ 6%
  • 1 ವರ್ಷದಿಂದ 2 ವರ್ಷಕ್ಕಿಂತ ಕಡಿಮೆ 6.80%
  • 2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ 7.00%
  • 3 ವರ್ಷದಿಂದ 5 ವರ್ಷಕ್ಕಿಂತ ಕಡಿಮೆ 6.75%
  • 5 ವರ್ಷದಿಂದ 10 ವರ್ಷಗಳವರೆಗೆ 6.50%

ಹಿರಿಯ ನಾಗರಿಕರಿಗೆ ಎಸ್​ಬಿಐನ ಸ್ಥಿರ ಠೇವಣಿ ದರಗಳು ಹೀಗಿವೆ:

  • 7 ದಿನಗಳಿಂದ 45 ದಿನಗಳು 4%
  • 46 ದಿನಗಳಿಂದ 179 ದಿನಗಳು 5.25%
  • 180 ದಿನಗಳಿಂದ 210 ದಿನಗಳವರೆಗೆ 6.25%
  • 211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ 6.5%
  • 1 ವರ್ಷದಿಂದ 2 ವರ್ಷಕ್ಕಿಂತ ಕಡಿಮೆ 7.30%
  • 2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ 7.50%
  • 3 ವರ್ಷದಿಂದ 5 ವರ್ಷಕ್ಕಿಂತ ಕಡಿಮೆ 7.25
  • 5 ವರ್ಷದಿಂದ 10 ವರ್ಷಗಳವರೆಗೆ 7.5%

ನಿರ್ದಿಷ್ಟ ಅವಧಿಯ '400 ದಿನಗಳ' ಅಮೃತ್ ಕಲಶ ಠೇವಣಿಗೆ ಏಪ್ರಿಲ್ 12, 2023ರಿಂದ ಶೇಕಡಾ 7.10ರಷ್ಟು ಬಡ್ಡಿದರ ನಿಗದಿಪಡಿಸಲಾಗಿದೆ. ಇದರಲ್ಲಿ ಹಿರಿಯ ನಾಗರಿಕರಿಗೆ ಶೇಕಡಾ 7.60ರಷ್ಟು ಬಡ್ಡಿದರ ನೀಡಲಾಗುವುದು. ಈ ಯೋಜನೆಯು ಮಾರ್ಚ್ 31, 2024ರವರೆಗೆ ಮಾನ್ಯವಾಗಿರುತ್ತದೆ.

ಇದನ್ನೂ ಓದಿ: ಐಟಿ ವಲಯದ ನೇಮಕಾತಿ ಶೇ 8 ರಿಂದ 10ರಷ್ಟು ಹೆಚ್ಚಳ ಸಾಧ್ಯತೆ: ವರದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.